ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

ಕಳೆದ ನೆನೆಪುಗಳು

ನಾನು ಮೊದಲು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲುಕಿನ ಬೂದಿಕೋಟೆಯಲ್ಲಿ ನಮ್ಮಧ್ವನಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಇದು ಕರ್ನಾಟಕ, ಅಂದ್ರಪ್ರದೇಶ್ ಮತ್ತು ತಮಿಳುನಾಡಿನ ಗಡಿಬಾಗದಲ್ಲಿದೆ. ಇಲ್ಲಿನ ಜನರು ಅವಿದ್ಯಾವಂತರು, ಕೂಲಿಗಾರರು. ಇಲ್ಲಿ 10 ನೇತರಗತಿಯವರೆಗೆ ಓದಲು ಸ್ಕೂಲಿದೆ.

ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!

ನಿಮಗೆ ಖ್ಯಾತ ವ್ಯಂಗ್ಯಚಿತ್ರಕಾರರಾದ ಪ್ರಕಾಶ್ ಶೆಟ್ಟಿಯವರ ಪತ್ರ

ರಾಜ್ಯೋತ್ಸವ ಓಟ ೨೦೦೮

ಕರ್ನಾಟಕ, ಒಂದೇ ರಾಜ್ಯ, ಒಂದೇ ಭಾಷೆ, ಗಂಧದ ನಾಡು ಮತ್ತು ಕಸ್ತೂರಿ ಬೀಡು. ಏಕೀಕರಣದ ಬಳಿಕ ಕರ್ನಾಟಕ ನವೆಂಬರ್ ೧ರಂದು ಉದಯಿಸಿತ್ತು. ಅಂದಿನಿಂದಲೂ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದೇ ನಾಡಿನ ಉದ್ದಗಲಕ್ಕೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯ ರಾಜ್ಯೋತ್ಸವವನ್ನು ೨೦೦೮ರ ನವೆಂಬರ್ ೧ರ ಶನಿವಾರದಂದು ಆಚರಿಸಲಾಗುತ್ತಿದೆ.

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮೆಯ ಕಾಳು ಕಡ್ಡಿ ಪೈರು ಪಚ್ಚೆ ಕಾಯಿ ಪಲ್ಲೆಗಳನ್ನು, ಜನರನ್ನು.

ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು.
ಪೇಪರ್ ದೋಸೆ
ಬೇಕಾಗುವ ಸಾಮಾನು : ೪-೫ ಹಳೆಯ ದಿನಪತ್ರಿಕೆಗಳು, ೧ ಪಾವು ಉದ್ದಿನಬೇಳೆ. ೧ ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟೇ ಉಪ್ಪು.

ಗಜಲ್

ಗಜಲ್
ಬದುಕು ಬಣ್ಣವಾಗಿಸಲು ಕರೆದೆ ನೀ ನಡೆದೆ ದೂರ
ಪ್ರೇಮದ ಸಿಂಚನವ ಕೋರಿದೆ ನೀ ನಡೆದೆ ದೂರ

ಬಡತನವನೆ ಹಾಸಿ ಹೊದ್ದು ಒಲವಿನೊರತೆಯ ಕುಡಿದು
ಜಕ್ಕವಕ್ಕಿಗಳಾಗಲು ಬೇಡಿದೆ ನೀ ನಡೆದೆ ದೂರ

ಪ್ರೀತಿಗಾಗಿ ಹಂಬಲಿಸಿ ಮಣ್ಣದವರೆಷ್ಟೋ
ಆದರೂ ನಿನ್ನ ಜೊತೆ ಬಯಸಿದೆ ನೀ ನಡೆದೆ ದೂರ

ನಾನೀಗ ಏಕಾಂಗಿ, ಭಗ್ನ ಹೃದಯಿ, ನಿನ್ನ ಪದ

ಕ್ರುಶ್ಣಾನೀ ಬ್ಯಾಗನೆ ಬಾರೋ

ಕ್ರುಶ್ಣಾನೀ ಬ್ಯಾಗನೆ ಬಾರೋ
ಶ್ರೀ ಡಿ ಎನ್ ಶಂಕರ ಭಟ್ಟರವರು ಹೊಸದಾಗಿ ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. ಇದರಲ್ಲಿ ಯಾವ ಮಹಾಪ್ರಾಣಗಳಿಲ್ಲ-ಎಂಬುದು ಇದರ ಹೆಗ್ಗಳಿಕೆ. ಇವರು ಹಾಗೂ ಇವರಿಂದ ಪ್ರಭಾವಿತರಾದವರು, ಕನ್ನಡವು ಸಂಸ್ಕೃತೀ ಕರಣ ಹೊಂದಿದೆ(ಬೃಷ್ಠಗೊಂಡಿದೆ?) ಎಂದು ಇದನ್ನು ಶುದ್ಧೀಕರಿಸವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸ್ವಲ್ಪನಗಿ

ಗೆಳೆತನ‌
ನೀನು "ರಮ್"ನಷ್ಟೇ ಬಲಿಷ್ಠ, "ವೈನ್" ನಷ್ಟೇ ಉತ್ತಮ, "ಬೀರ್"ನಷ್ಟೇ ತಂಪು, "ವಿಸ್ಕಿ" ಯ‌ಷ್ಟೇ ಅದ್ಬುತ, ನಿನ್ನ ಗೆಳೆಯತನದಲ್ಲಿ ಇದೆಲ್ಲವೂ ಒಟ್ಟಾಗಿ ಇರೋದ್ರಿಂದ ನಾನು ಯಾವತ್ತೂ ಟೈಟ್ ಆಗಿರ್ತೀನಿ!

:) :)

ಹೆದರಬೇಡ‌
ಹುಡುಗನೊಬ್ಬ ಹುಡುಗಿಗೆ ಅವರಸರದಲ್ಲಿ ಮುತ್ತು ಕೊಡ್ತಿದ್ದ
ಹುಡುಗಿ: ಯಾಕೆ ಅವಸರ‌
ಹುಡುಗ: ನಿನ್ನ ಲವರ್ ಬಂದ್ರೆ ?