ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮೇರಿಕ ಆರ್ಥಿಕ ವ್ಯವಸ್ಥೆ ಕುಸಿತ

ಈ ಅಮೇರಿಕದವರು ಚಿಕ್ಕ ಚಿಕ್ಕ ವಿಷಯಗಳಿಗೆ ತಲೆಕೆಡಿಸಿಕೊಳ್ತಾರೆ ಅಲ್ವಾ?

ಅಮೇರಿಕ ಆರ್ಥಿಕ ವ್ಯವಸ್ಥೆ ಕುಸಿತ...ಮನಮೊಹನ್ ಸಿಂಗರಿಂದ ಪ್ರತಿಕ್ರಿಯೆ ಹೀಗಿರಬಹುದೆ?....

ಅಮ್ಮ ನಿನ್ನ ಕರುಣೆಯ

ಅಮ್ಮ ನಿನ್ನ ಕರುಣೆಯ ಮಡಿಲಲ್ಲಿ ನಾನೀರ ಬೇಕಮ್ಮ
ಅಮ್ಮ ನಿನ್ನ ಮುದ್ದಿನ ಮಗುವಾಗಿ ನಿನ್ನ ನಗೆಸುತಿರಬೇಕಮ್ಮ

ನವಮಾಸದಿ ಕಷ್ಟಪಟ್ಟು ನನಗೆ ಜನ್ಮ ನೀಡಿದೆಯಮ್ಮ
ನನಗೆ ಜನ್ಮ ನೀಡಿ ನೀ ಮರುಜನ್ಮ ಪಡೆದೆಯಮ್ಮ

ಎದೆ ಹಾಲೆಂಬ ಅಮೃತವನು ನೀ ಕೂಡಿಸಿದೆಯಮ್ಮ
ಹರಕಲುಟ್ಟು ಹೊಸಬಟ್ಟೆಯ ನನಗೆ ಉಡಿಸಿದೆಯಮ್ಮ

ಧೀರ್ಘಆಯುಷ್ಯವಂತನಾಗೆಂದು ಅನುದಿನ ಹರೆಸಿದೆಯಮ್ಮ

ಆತನ ಸಾವು ಈಗ ವಿಷಾದ ಹುಟ್ಟಿಸುತ್ತಿಲ್ಲ...

ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!

ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್‌‍ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."

ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.

ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ,
ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾಡುಗಳು
ಕಥೆ ಹೇಳುತ್ತವೆ. ಮೀನುಗಾರರು, ಹಾಲಕ್ಕಿಗಳು, ಕಲಾಕಾರರು ಎಲ್ಲವೂ ನೋಡುವಂತವೇ.

ನಾನಿಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳಗಳನ್ನು ಗುರುತು ಹಾಕಿದ್ದೇನೆ. ಹತ್ತಿರದ ನಗರಗಳನ್ನೂ.
ಜಿಲ್ಲೆಗೆ ಬರುವ ಯಾರಾದರೂ ನೋಡಲೇ ಬೇಕಾದ ಸ್ಥಳಗಳು.

ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ !

ಮಾರ್ಕೆಟ್ ಎಕಾನಮಿ ದೇಶವಾದ ಅಮೆರಿಕದಲ್ಲಿ , ಎಲ್ಲರೂ ಒಂದಲ್ಲ ಒಂದು ಖಾಸಗೀ ಸಂಸ್ಥೆಗಳಲ್ಲಿ ಕೆಲಸಮಾಡಿದುಡಿಯುವ ವರ್ಗಕ್ಕೆ ಸೇರಿದ್ದಾರೆ. ಸರ್ಕಾರಿವಲಯದಲ್ಲೂ ನೌಕರಿ ಮಾಡುವವರೂ ಇದ್ದಾರೆ. ಅವರು ಕಡಿಮೆ. ನಮ್ಮದೇಶದ ತರಹ ಕೆಲಸದ ವೈಖರಿಯಿಲ್ಲ. ಎಲ್ಲೂ ಪೀವನ್ ಗಳಿಲ್ಲ. ಕೆಳವರ್ಗದ ನಾಲ್ಕನೇ ಶ್ರೇಣಿಯ ಕೆಲಸಗಾರರು ಇಲ್ಲ. ಬ್ಯೂರೋಕ್ರೆಸಿ, ಇಲ್ಲೂ ಇದ್ದೇ ಇದೆ.

ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ

[:http://www.cdac.in/|CDAC] [:http://nrcfoss.org.in/|NRCFOSSನ] ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ.

ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ ಸಪೋರ್ಟ್ ಚ್ಯಾನಲ್ಲನ್ನು ೨೪/೭ ಕೆಲಸಮಾಡುವಂತೆ ಹೊರತರುವ ಯೋಜನೆ ಇದೆಯಂತೆ.