ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಗೋ ಬಂತು ಯುಗಾದಿ

ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.
 
ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗಳರಳಿ
ಮಧುರ ಭಾವ ಮೊಡಿದೆ.
 
ಮಾಂದಳಿರಿನ ತೋರಣದಲಿ
ಹಸಿರು ಹೊನ್ನು ಕರೆದಿದೆ
ಮನೆ ಮನಗಳ ಓರಣದಲಿ
ಪ್ರೀತಿ ಪ್ರೇಮ ಮೆರೆದಿದೆ.

ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿತು.

ತಪ್ಪು ಯಾರದ್ದು?

ಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ.

ಯಾರು ಸರಿ?

ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್‍ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ.

ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

ಯುಗಾದಿ ಮರಳಿ ಬರುತಿದೆ...................

ಕತ್ತಲು ಸರಿದು..
ಬೆಳಕು ಹರಿದು
ಕನಸು ಮುಗಿದು
ಮನಸು ಜಿಗಿದು
ನೋವು ಮಂಜಿನ ಹಾಗೆ ಕರಗಿ
ನಲಿವು ಬೆಳಕಿನ ಹಾಗೆ ಹರಿದು
ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸುವೆ!!!!!!

ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

ನಿಮ್ಮೊಂದಿಗೆ...

ಆತ್ಮೀಯರೇ,

ಇಂಥದೊಂದು ಬ್ಲಾಗ್ ಪ್ರಾರಂಭಿಸಲು ಕನಸು ಕಾಣುತ್ತಿದ್ದ ನನಗೆ, ಬರೆದ ಬರಹಗಳನ್ನು ಅಂತರ್ಜಾಲ ತಾಣಕ್ಕೆ ತರುವುದು ಹೇಗೆ ಎಂಬ ಸಮಸ್ಯೆ ಕಾಡುತ್ತಿತ್ತು. ಯಾರ ಸಹಾಯವೂ ಇಲ್ಲದೆ, ಇದ್ದ ಸ್ವಲ್ಪ ಸಮಯದಲ್ಲಿ ಉತ್ತಮವಾದ ಬರಹಗಳನ್ನು, ನಿಧಾನಗತಿಯಲ್ಲಿ, ಬರಹ ತಂತ್ರಾಂಶದಲ್ಲಿ ಟ್ಯೆಪ್ ಮಾಡುವುದು ಸುಲಭವಾಗಿರಲಿಲ್ಲ.

ಅಸೂಯೆ ಎಂಬ ತಡೆಗೋಡೆ...

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ನ್ಯಾನೊ ಮತ್ತು ವೈಚಾರಿಕ ಸಣ್ಣತನ

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.

ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.

ನಿಮಗೂ ಹೀಗೆ ಅನಿಸಿದೆಯೆ?

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?