ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಗನ ಪೂಜೆಯ ತಾಣದಲ್ಲಿ... ವಾರ್ಷಿಕ ಜಾತ್ರೆ..

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು.

ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ.

ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ.

ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ ಬರ್ತಿದೆ. ಲಿನಕ್ಸ ನಲ್ಲಿ ಜಾದೂ ಮಾಡ್ಬಹುದು. ನಿಮಗೆ ಯಾವ್ ತಂತ್ರಾಂಶ ಬೇಕಿದೆಯೋ ಕೇಳಿ ನೋಡಿ, ತಟ್ಟನೆ ನಿಮ್ಮೆದುರಿಗೆ ತಂದಿಡತ್ತೆ "ಪೈರಸಿ ಭೂತ" ದಿಂದ ಮುಕ್ತವಾದ ಉತ್ತರಗಳನ್ನ. ಲಿನಕ್ಸ್ ಕಿರಿ ಕಿರಿ ಅನ್ನಿಸ್ತಿದೆಯೆ? ೨೪ ತಾಸು ಲಿನಕ್ಸ್ ನೊಂದಿಗೆ ಕಳೆದು ನಂತರ ತಿಳಿಸಿ. ನಿಮಗೆ ಕಿರಿ ಕಿರಿ ಅನ್ನಿಸಿದ್ದು ನಿಮಗೆ ತಂತ್ರಾಂಶ ಪ್ರಪಂಚದ ದರ್ಶನ ಮಾಡ್ಸಿದ್ರೂ ಮಾಡಿಸ್ಬಹುದು.

-೧-

ಲಿನಕ್ಸನ ಫೈಲ್ ಸಿಸ್ಟಂ (filesystem) ನಲ್ಲಿ ನಿಮಗೆ c: (ಸಿ ಡ್ರೈವ್)ಸಿಗೋದಿಲ್ಲ. ಅದು ಶುರು ಆಗೋದು / ಅನ್ನೋ ಡೈರೆಕ್ಟರಿ (ಫೋಲ್ಡರ್) ನಿಂದ. ಇದರ ಕೆಳಗಡಗಿದೆ ನಿಮ್ಮ ಲಿನಕ್ಸ್ ಮತ್ತೆಲ್ಲ ಕಡತಗಳು (ಫೈಲ್ ಮತ್ತು ಫೋಲ್ಡರ್ ಗಳು). ಇದನ್ನ ಕಿತ್ತಾಕ್ಲಿಕ್ಕೆ ಪ್ರಯತ್ನಿಸಿದ್ರೋ ಜೋಕೆ ಮತ್ತೆ ಲಿನಕ್ಸ್ ಇನ್ಸ್ಟಾಲ್ ಮಾಡ್ಬೇಕಾದೀತು! ;)

ಲಿನಕ್ಸ್ ಕಲಿಯೋಕೆ ಅದರೊಂದಿಗೆ ಆಟ ಆಡ್ಲೇ ಬೇಕು. ಆದ್ರೆ ಸ್ವಲ್ಪ ಎಚ್ಚರಿಕೆವಹಿಸೋದು ಉತ್ತಮ.

ಭಯೋತ್ಪಾದಕ ವರದಿಗಳು

ನಾವು-ನೀವು ಓದುವ ಪತ್ರಿಕೆಗಳ ವರದಿಗಳೇ.
೧.ಹೈದರಾಬಾದ್ ಮಸೀದಿ ಸ್ಫೋಟದ ‘ಪ್ರಮುಖ ರೂವಾರಿ’-
ಅಣೆಕಟ್ಟು,ಸೇತುವೆ ಕಟ್ಟಿದಲ್ಲ.ಎಲ್ಲೋ ಅಡಗಿ ಕುಳಿತು ಯಾರದೋ ಕೈಯಲ್ಲಿ ಬಾಂಬ್ ಉಢಾಯಿಸಿದ ಪಾಪಿ-ಪ್ರಮುಖ ರೂವಾರಿ.
೨.ಪೋಲೀಸ್ ತನಿಖೆಯದಾರಿ ತಪ್ಪಿಸುತ್ತಿರುವ ‘ಉಗ್ರ’..-
ಉಗ್ರ ನರಸಿಂಹ ಎಂದಿಲ್ಲ ಪುಣ್ಯ.
೩. ವಿಧ್ವಂಸಕ ಕೃತ್ಯ
೪. ಶಂಕಿತ ಉಗ್ರರ ಸೂತ್ರದಾರ-

ಭಗವದ್ಘೀತಾ ತಾತ್ಪರ್ಯ

ಅಗುವುದಲ್ಲಾ ಒಳ್ಳೆಯದಕ್ಕೆ ಅಗಿದೆ
ಅಗುವುದಲ್ಲಾ ಒಳ್ಳೆಯದಕ್ಕೆ ಅಗುತ್ತಿದೆ
ಅಗುವುದಲ್ಲಾ ಒಳ್ಳೆಯದಕ್ಕೆ ಆಗಲಿದೆ
ರೋಧಿಸಲು ನೀನೇನು ಕಳೆದು ಕೊಂದಿರುವೇ ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀನುಮಾಡುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ
ಏನನ್ನು ನೀಡಿದ್ದರೂ ಅದನ್ನು ಇಲ್ಲೆಗೇ ನೀಡಿರುವೆ

ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

ಭಾರತೀಯರು ಉತ್ತಮ ಉಳಿತಾಯದಾರರು ; ಉತ್ತಮ ಹೂಡಿಕೆದಾರರಲ್ಲ . ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು . ಷೇರುಪೇಟೆಯಲ್ಲಿ ಹಣ ತೊಡಗಿಸುವದು ಲಾಭಗಳಿಕೆಯ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಮಾರ್ಗ ; ಹಣದುಬ್ಬರದ ದರಕ್ಕಿಂತ ವೇಗವಾಗಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು ;

ಗಾಯದ ಮೇಲೆ ಬರೆ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದ್ದು ನ್ಯಾಯ. ಆದರೆ
ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಬೆ.ಅ.ವಿ.ನಿ.) ಕಥೆಯೆ
ಬೇರೆಯಾಗಿದೆ. ಬೆ.ಅ.ವಿ.ನಿ. ದ ಕಾರ್ಯ ಶುರುವಾದಾಗ ದೇವನಹಳ್ಳಿಯ ರೈತರಿಗೆ
ಕೆಲಸ ನೀಡುವುದಾಗಿ ಬರವಸೆ ಇತ್ತು, ಅವರಿಂದ ಬೆ.ಅ.ವಿ.ನಿ.ಕ್ಕೆ ಜಮೀನನ್ನು
ಬಿ.ಐ.ಏ.ಎಲ್. ಪಡೆದು ಕೊಂಡಿತು. ಆದರೆ, ಬರವಸೆಯನ್ನು ಹುಸಿ ಗೊಳಿಸಿ,

ರೇಡಿಯೊ ಮಹಾತ್ಮೆ

ಸಾರ್ವಜನಿಕ: ಏನು ಸಾರ್ ನಿಮ್ಮ ಬಸ್ ಗೆ ಎಫ್.ಎಂ. ಬಂದಮೇಲೆ ನೀವು ತುಂಬಾ ಖುಷಿಯಿಂದ ಇದ್ದೀರಾ ಯಾಕೇ?
ಕಂಡಕ್ಟರ್: ಯಾಕಂದ್ರೆ ಬಸ್ ನಲ್ಲಿ ಒಳ್ಳೊಳ್ಳೆ ಹಾಡನ್ನು ಜನ ಕೇಳ್ತಾ ಕೇಳ್ತಾ ಚಿಲ್ಲರೆ ಕೇಳೋದ್ ಮರೆತುಹೋಗುತ್ತಾರೆ

ಮಳೆ

ಓ ಮುದ್ದು ಮಳೆಯೇ
ಕದ್ದು ಮುಚ್ಚಿ ಕುಣಿಯುವುದು ಸರಿಯೇ

ತಂಪು ಹನಿಗಳಿಂದ
ಜಾರಿ ಬಾರೆ ಅಂಗಳದಿಂದ
ನಿನ್ನ ಸ್ಪರ್ಶ ಚಂದ
ದರೆಗೆ ತಾರೆ ಮುತ್ತಿನ ಬಂದ
ಚೆಲ್ಲೋ ಹನಿಗಳಲ್ಲಿ
ನಾದ ಸ್ವರವ ನುಡಿಯುವ ಮಲ್ಲಿ
ಓ ಮುದ್ದು ಮಳೆಯೇ
ಕದ್ದು ಮುಚ್ಚಿ ಕುಣಿಯುವುದು ಸರಿಯೇ

ನಿನ್ನ ಜೋತೆ ನಲಿಯಲು ಆಸೆ
ಸುರಿದು ಬಾರೆ ಮುದ್ದಿನ ಕೂಸೆ
ಹಸಿರು ಎಲೆಗೆ ಮುಗುತ್ತಿ
ನನಗು ನೀನೆ ಸಂಗಾತಿ

ಪೇಟೆ ಹಕ್ಕಿಯ ಹಾಡು.

ಇಲ್ಲಾ.ನಾನು ನನ್ನ ಆತ್ಮಕತೆಯನ್ನು ಬರೆಯಲು ಸುರುಮಾಡಿಲ್ಲ.ಯಾರ ಲವ್ ಸ್ಟೋರಿನೂ ಅಲ್ಲ.ಇದು ಡಿಫರೆಂಟ್ ಆಗಿದೆ. ಇಲ್ಲಿ ಯಾವುದೇ ಡಬಲ್ ಮೀನಿಂಗ್ ಡಯಲಾಗ್ ಇಲ್ಲ. ಮಾಸ್ ಗೆ ಬೇಕಾದ ಹಾಸ್ಯ,ಫೈಟ್,ಟ್ರಾಜಿಡಿ ಎಲ್ಲಾ ಇದೆ. ಮನೆ ಮಂದಿಯೆಲ್ಲಾ ಕುಳಿತು ನೋಡ ಸ್ಸಾರಿ ಓದಬಹುದಾದ ಬ್ಲಾಗ್.ಅರ್ಧವಾಸಿ ಔಟ್ ಡೋರ್ ಶೂಟಿಂಗ್ ಇದೆ. ಕತೆ ಸುರುವಾಗುವುದು ಮಾತ್ರ ಇನ್‌ಡೋರ್‌ನಿಂದ.

ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್‌ಗಳು...

- ಕರ್ನಾಟಕದ ಆರನೆ ಒಂದರಷ್ಟು ಜನತೆ ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
- ಬೆಂಗಳೂರು ಮಹಾನಗರ ಪಾಲಿಕೆಯ 2007-08 ರ ಅಂದಾಜು ವರಮಾನ 3302 ಕೋಟಿ ರೂಪಾಯಿ
- (ಇದೇ ಸಮಯದಲ್ಲಿ ಗೋವಾ ರಾಜ್ಯದ ವರಮಾನ 2263 ಕೋಟಿಗಳು ಮಾತ್ರ)
- ಇಷ್ಟು ದೊಡ್ಡ ನಗರದ ಇತ್ತೀಚಿನ ಪ್ರಜಾ-ಮುಖ್ಯಸ್ಥ, ಕಾರ್ಪೊರೇಷನ್‌ನ ಮೇಯರ್‍ಗಳ ಹೆಸರು ಎಷ್ಟು ಜನ ಬೆಂಗಳೂರಿಗರಿಗೆ ತಿಳಿದಿದೆ?
- ಮೇಯರ್ ಆಗಲು ಬೇಸಿಕ್ ಕ್ವಾಲಿ‍ಫಿಕೇಶನ್ ಏನೆಂದರೆ ಯಾವುದಾದರೂ ಒಂದು ವಾರ್ಡಿಗೆ ಕಾರ್ಪೊರೇಟರ್ ಆಗುವುದು ಮತ್ತು ತನ್ನದೇ ಪಕ್ಷ ಅಧಿಕಾರದಲ್ಲಿದ್ದರೆ ಐದು ವರ್ಷದಲ್ಲಿ ಐದು ಸಲ ಬರುವ ಅವಕಾಶಗಳಲ್ಲಿ ಒಂದು ಸಲವಾದರೂ ತಾನು ಮೇಯರ್ ಆಗಿ ಆಯ್ಕೆಯಾಗುವಂತೆ ರಾಜಕೀಯ ಮಾಡುವುದು.
- ಎಷ್ಟೋ ಜನ ಸ್ಥಳೀಯ ಗೂಂಡಾಗಳು ಕಾರ್ಪೊರೇಟರ್‌ಗಳಾಗಿರುವುದು ಸುಳ್ಳಲ್ಲ. ಬೆಂಗಳೂರಿನಲ್ಲಿ ಲೋಕಲ್ ರಾಜಕೀಯ ಮಾಡುವವರಿಗೆ ಸ್ವಲ್ಪ "ಬಾಹುಬಲ" ಇರಲೇ ಬೇಕೇನೊ!
- ಮೇಯರ್ ಆದ ಮೇಲೆ ಮೇಯರ್‌ಗಿರಿ ಅನುಭವಿಸುವುದನ್ನು ಬಿಟ್ಟು ಮತ್ತೇನೂ ಮಾಡುವ ಅಗತ್ಯ ಇಲ್ಲ.
- ಯಾಕೆ ಅಂತೀರ? ಹೌದು, ಯಾಕೆ ಮಾಡ್ತೀರ? ನಿಮಗೇನೂ ಬುದ್ಧಿ ಇಲ್ಲವೇ? ಮುಂದಿನ ಸಲ ನಿಮ್ಮ ವಾರ್ಡಿನಲ್ಲಿ ನೀವು ಚುನಾವಣೆಗೆ ನಿಲ್ಲುವ ಯೋಗ್ಯತೆ (ಲಿಂಗ-ಜಾತಿವಾರು ರೊಟೇಷನಲ್ ಮೀಸಲಾತಿಯಿಂದಾಗಿ) ಇರುತ್ತದೆ ಎನ್ನುವ ಹಾಗಿಲ್ಲ. ಕಾರ್ಪೊರೇಟರ್ ಅವಧಿಯೆ ಐದು ವರ್ಷ. ಇನ್ನು ಮೇಯರ್‍ಗಿರಿ ಇರುವುದು ಒಂದೆ ವರ್ಷ.
- ಆಹಾ ಎಂತಹ ಅದ್ಭುತ ವ್ಯವಸ್ಥೆ!!!
- ಬೆಂಗಳೂರಿಗರು ಇದಕ್ಕಿಂತ ಒಳ್ಳೆಯ ವ್ಯವಸ್ಥೆಗೆ ಯೋಗ್ಯರಿಲ್ಲವೆ? Don't they deserve better?

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಇದೇ ವಿಷಯದ ಮೇಲೆ, ಮತ್ತು ಇನ್ಫೋಸಿಸ್ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ತನ್ನ ಸಾತ್ವಿಕ ಆದರೆ ನಿರಂತರ ಹೋರಾಟದಿಂದ ಮಣಿಸಿದ ಬೆಂಗಳೂರು ಪಕ್ಕದ ಹಳ್ಳಿಯ ಪಂಚಾಯಿತಿ ಅಧ್ಯಕ್ಷನ ಕುರಿತಾಗಿ