ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 2)

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ ಅಮರಾವತಿಯೋ!

ಕರ್ನಾಟಕ ಅಂದ್ರೆ ಯೇನು ಅಂತಹೇಳೋದೆ ಕಷ್ಟ ಆಗಿದೆ !

ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ !

ಕಶ್ಟ-ಇಶ್ಟ

    ಕಶ್ಟ ಇಶ್ಟಗಳ ನಡುವೆ ಬಾಳು  
         ಎಡರು-ತೊಡರು
      ಕಶ್ಟವನ್ನು ಇಶ್ಟಪಟ್ಟಾಗ
   ಚಿಗುರುವುದು ನಲಿವಿನ ಪಯಿರು

ಕವಿಹೃದಯದ ನಿಸಾರ್‌ಗೆ ಪದ್ಮಶ್ರೀಯ ಗರಿ!

ನಿಸಾರ್ ಅಹಮದ್
ಅತ್ಯಂತ ಸಹೃದಯಿ ಕವಿ, ಮೃದುಮಾತಿನ, ಮಾನವೀಯ ಕಳಕಳಿಯ ಸಾಹಿತಿ ನಿಸಾರ್‌ ಅಹಮ್ಮದ್‌ಗೆ ಈ ಬಾರಿಯ ಪದ್ಮಶ್ರೀ ಒಲಿದಿದೆ. ಇದು ಕನ್ನಡಕ್ಕೆ, ಕನ್ನಡದ ಸಂಸ್ಕಾರಕ್ಕೆ ಸಂದ ಗೌರವ. ನಿಸಾರರ ಕವನಗಳಲ್ಲಿ ತುಂಬಿರುವ ಸಾತ್ವಿಕವಾದ ಸೌಂದರ್ಯಾನುಭೂತಿ , ಅಬ್ಬರದ ಸದ್ದುಗದ್ದಲವಿಲ್ಲದ ಶಬ್ದಸಂಸ್ಕೃತಿ, ನವಿರಾದ ಗೇಯತೆಯ ಸಾಕಾರ, ಹೃದಯವೈಶಾಲ್ಯ ಒಂದೊಂದೂ ಕನ್ನಡ ನಾಡಿನ ಸಾಮಾನ್ಯನ ಸಹಜ ಸಂಸ್ಕಾರವಾಗಿದೆ. ನಿಸಾರ್ ತಮ್ಮ ಸಾಹಿತ್ಯದಿಂದ ಮುಗಿಲಿಗೆ ಕೈಚಾಚಿದವರಲ್ಲ. ಅವರ ನಿಲುವು ನೀತಿಗಳೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರನ್ನು ಮನಸ್ಸಿನಲ್ಲಿಟ್ಟುಕೊಂಡೇ ರೂಪುಗೊಳ್ಳುತ್ತ ಬಂದವು. ಹಾಗಾಗಿಯೇ ಅವರು ಸಾಮಾನ್ಯರ ಸಖ.

ಸರ್ ಸಿ.ವಿ.ರಾಮನ್ ತೀರಿಕೊಂಡಾಗ ಅದು ಹನುಮನನ್ನು ತಟ್ಟಲಿಲ್ಲವಲ್ಲ ಎಂಬ ಅವರ ನೋವಿಗೆ ಹಲವು ಆಯಾಮಗಳಿವೆ. ಹನುಮನ ಅಜ್ಞಾನ ತೊಲಗಬೇಕು, ಅವನಿಗೆ ಸಿ.ವಿ.ರಾಮನ್ ತಲುಪಬೇಕು, ರಿಲೆವಂಟ್ ಆಗಬೇಕು ಎಂದು ನಿಸಾರ್ ಬಯಸುತ್ತಾರೆ. ಅದೇ ಹೊತ್ತಿಗೆ ಪ್ರಸಿದ್ಧಿ, ಕೀರ್ತಿ ಕ್ರಮೇಣ ಯಶಸ್ವಿ ವ್ಯಕ್ತಿಗಳನ್ನು ದಂತಗೋಪುರದೊಳಗೆ ಬಂಧಿಯಾಗಿಸುತ್ತದೇನೋ ಎಂಬ ನೋವೂ ಅವರಲ್ಲಿದೆ. ಹೀಗೆ ಸದಾ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿಗೆ ಕೈಚಾಚುವಾಗಲೂ ಸಾಮಾನ್ಯರ ಬದುಕು ನಿತ್ಯೋತ್ಸವವಾಗಬೇಕೆನ್ನುವ ಅವರ ಆಶಯವೇ ಅವರಲ್ಲಿ ತುಂಬಿರುತ್ತದೆ.

ಆದರೆ ವಿಚಿತ್ರ ನೋಡಿ, ಅವರು ದೂರವಿದ್ದಷ್ಟೂ ದೊಡ್ಡ ದೊಡ್ಡ ಪ್ರಶಸ್ತಿ, ಗೌರವಗಳು ನಿಸಾರರನ್ನು ಎಲ್ಲೆಲ್ಲಿಂದಲೋ ಹುಡುಕಿಕೊಂಡು ಬರುತ್ತಿವೆ, ಬರುತ್ತಲೇ ಇವೆ! ಬರಲಿ, ನಿಸಾರ್‌ರ ಕೀರ್ತಿ, ಗೌರವದ ಪತಾಕೆ ಇನ್ನೂ ಇನ್ನೂ ಎತ್ತರೆತ್ತರಕ್ಕೇರಲಿ ಅದರಿಂದ ಕನ್ನಡದ ಪ್ರತಿಷ್ಠೆ ಹೆಚ್ಚಲಿ, ಕನ್ನಡಕ್ಕೆ ಅದು ನಿತ್ಯೋತ್ಸವದ ಸಂಭ್ರಮವನ್ನು ತರಲಿ ಎಂದು ಹಾರೈಸುತ್ತ [:http://sampada.net/podcasts/7/K-S-Nisar-Ahmed|ಸಂಪದದ ಆರ್ಕೈವ್‌ನಲ್ಲಿರುವ ನಿಸಾರರ ಸಂದರ್ಶನದ ಪಾಡ್ ಕಾಸ್ಟ್‌ನಿಂದ ಆಯ್ದ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳೋಣ]:

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ.
ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ.
ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ.