ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಲವೆಂದೆನಿತು ಕರೆವರು

ಸುರಾಸುರರು ಮಣಿದರೆನಗೆ
ಭಕ್ಷಗಳಾದರು ಭೂ ಕಲದವರೆನಗೆ

ಸುಖ ದುಃಖಗಳು ತರ್ಪಿಸುವುವೆನಗೆ
ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ

ಮೂಢಾತಿ ಮೂಢರು
ಎನ್ನ ಕಾಲವೆಂದೆನಿತು ಕರೆವರು

ಅಕ್ಷರದಾಹ ಬಳಗ ಆಹ್ವಾನ

ತಾರಿಣಿ ಶುಭದಾಯಿನಿ ಅವರಿಗೆ
ಅಕ್ಷರದಾಹ ಕಾವ್ಯಪ್ರಶಸ್ತಿ ೨೦೦೭
ಮತ್ತು ಅವರ ಚಿತ್ತಗ್ಲಾನಿಯ ಮಾತು
ಕವನಸಂಕಲನ ಬಿಡುಗಡೆ
ಹಾಗೂ
ಗಂಗಾಧರ ಚಿತ್ತಾಲರ ನೆನಪಿನ ಕವಿಸಮಯ

ಚಿತ್ತಾಲರ ಕಾವ್ಯದ ಬಗ್ಗೆ: ಜಯಂತ ಕಾಯ್ಕಿಣಿ


ಪುಸ್ತಕದ ಬಗ್ಗೆ: ಸಿ ಎನ್ ರಾಮಚಂದ್ರನ್
ಬಂಜಗೆರೆ ಜಯಪ್ರಕಾಶ್

ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ

ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ .
ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕೊಳ್ದೇ ಕಾಯ್ದೆ ಮೀರಿದೋರನ್ನ ಎಳಕೊಂಬಂದ್ರು .

ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?

ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್.

ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದಾನೆ , ಮನೆಗೆ. ಅದೇಕೋ ?

ಒಂದು ಜೋಗಿ ಕತೆ ಕೇಳಿ

ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ .
ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ .
...
ಡಾಕ್ಟರು ಹೇಳ್ತಾ ಇದ್ದಾರೆ - ನೋಡಿ , ಆಕೆ ಹಾರ್ಟ್ ಪೇಷಂಟು , ಗಂಡ ಅಪಘಾತದಲ್ಲಿ ಸತ್ತ ಸುದ್ದಿ ಕೇಳಿ ಆಕೆಯ ಜೀವಕ್ಕೆ ಅಪಾಯ ಆಗಬಹುದು .

ಮತ್ತ್ವೆ ’ಉ’ ’ಊ’ :)

http://sampada.net/forum/3067 ಮತ್ತು
http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/6738
( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ)
ಇಲ್ಲಿ ’ಊ’ ಮತ್ತು ’ಉಲ್ಲಿ’ ಕುರಿತ ಚರ್ಚೆ ಶುರುವಾಗಿ ಎಲ್ಲೆಲ್ಲೋ ಹೋಗಿತ್ತು .
ಸುನೀಲ ಜಯಪ್ರಕಾಶರು ’ಉ/ಊ’ದಿಂದ ಸಿದ್ಧ ಮಾಡಿದ ಪದವೊಂದನ್ನು ರ್ಯಾಂಡಂ ಗೆ ಬಳಸಬಹುದು ಎಂದು ಸೂಚಿಸಿದ್ದರು .

ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’

ಸಂಸ್ಕೃತದಲ್ಲಿ ಇರುವ ’ಇದಂ’ ಕನ್ನಡದ್ದು ಎಂದು ಸಂಪದದಲ್ಲಿ ಚರ್ಚೆ ಆಗಿತ್ತು .
ಆಗ ’ಅದು’ ಕೂಡ ಇದೆಯೇ ಎಂದು ಕೇಳಿದ್ದೆ .
ಈಗ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಪುಸ್ತಕದಲ್ಲಿ ಈ ಶಬ್ದಗಳು ಸಿಕ್ಕವು .

ಅದ: ಪುತ್ರಂ - ಅವನ ಮಗನು .
( ಜತೆಗೆ ಇದನ್ನಿಮಿತ್ತಂ - ಈ ನಿಮಿತ್ತ )

ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

ನಿಮಗಿದು ಗೊತ್ತೇ ?
೧) ಸಂಸ್ಕೃತ ದ ಪಠ್ಯ ಪುಸ್ತಕಗಳಲ್ಲಿ ’ ಕರ್ಣಾಟಕ’ ಭಾಷೆ ಅಂತ ಬಳಸುವರು .
೨) ಕೆಲವು ವ್ಯಾಕರಣ ಪುಸ್ತಕಗಳಲ್ಲೂ ಈ ರೀತಿ ನೋಡಿದ್ದೇನೆ. ( ಹೇಗೂ ಈ ಪಂಡಿತರು ಸಂಸ್ಕೃತ ಪಂಡಿತರೇ :) )

ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ..

ಕ್ರೈಸ್ತ ಮಿಷಿನರಿಗಳು ಭಾರತದಲ್ಲಿ ನಡೆಸುತ್ತಾ ಇರೋ ಬಲವಂತದ ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ ಪ್ರತಾಪ್ ಸಿಂಹ ಅವರಿಂದ..
ಓದಿ..

http://thatskannada.oneindia.in/column/pratap/2008/0802-religion-is-not-washing-powder.html

ಮೂರು ಬಗೆಯ ಜನರು

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು

(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*

ಮೂಲ ಸಂಸ್ಕೃತ ಸುಭಾಷಿತ:

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: