ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಸಂಜೆಯಾಗುತ್ತಿದ್ದಂತೆ, ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹಕ್ಕಿ ಗೂಡೊಂದು ಬೆಳಕಿನ ಕಣ್ತೆರೆಯಿತು. ೨೯ನೇ ಒಲಂಪಿಕ್ ಉದ್ಘಾಟನೆಗೊಂಡಿತು.

ಇಡೀ ಜಗತ್ತೇ ಅಲ್ಲಿ ನೆರೆದಿತ್ತು. ಜಗದ ಎಲ್ಲ ಸೊಗಸನ್ನೂ ತನ್ನೊಳಗೆ ಹೊಂದಿದ ಸಂಭ್ರಮದೊಂದಿಗೆ ಬೀಜಿಂಗ್‌ನ ’ಹಕ್ಕಿ ಗೂಡು’ ಹೆಸರಿನ ರಾಷ್ಟ್ರೀಯ ಕ್ರೀಡಾಂಗಣ ಕಂಗೊಳಿಸಿತು. ಬಾನಂಗಳದಲ್ಲಿ ಥೇಟ್ ಹಕ್ಕಿ ಗೂಡು ಮಾದರಿಯ ಬಾಣಬಿರುಸುಗಳು ಬೆಳಗುತ್ತಿದ್ದಂತೆ, ಚೀನೀ ಪ್ರಧಾನಿ ಹೂ ಜಿಂಟಾವೊ ೨೯ನೇ ಒಲಂಪಿಕ್ ಉದ್ಘಾಟನೆ ಘೋಷಿಸಿದರು.

ಮುಂದೆ ಮೊಳಗಿದ್ದು ಬಾಣ ಬಿರುಸು, ಕೇಳಿದ್ದು ಹರ್ಷೋದ್ಗಾರ, ಬೆಳಗಿದ್ದು ಚೀನಾದ ೫೦೦೦ ವರ್ಷಗಳ ಅದ್ಭುತ ಪರಂಪರೆ. ಮನುಷ್ಯ ಈ ಪರಿಯ ಪರಿಪೂರ್ಣತೆಯನ್ನು ಮೈಗೂಡಿಸಿಕೊಳ್ಳಬಲ್ಲನೆ? ಎಂಬ ಅಚ್ಚರಿ ಹುಟ್ಟಿಸುವಂತೆ ಮೂರೂವರೆ ಸಾವಿರ ಕಲಾವಿದರು ಅದ್ಭುತ ಕಲಾ ನೈಪುಣ್ಯತೆ ಮೆರೆದರು. ಒಂದಕ್ಕಿಂತ ಒಂದು ಅಚ್ಚರಿ. ಒಂದಕ್ಕಿಂತ ಒಂದು ಅಪೂರ್ವ. ನೆರಳು, ಬಣ್ಣ, ಬೆಳಕಿನಾಟದಲ್ಲಿ ಬೆಳಗಿದ ಕ್ರೀಡಾಂಗಣದಲ್ಲಿ ನಡೆದ ಚಮತ್ಕಾರಿ ಪ್ರದರ್ಶನವನ್ನು ಜಗತ್ತು ಎವೆಯಿಕ್ಕದೇ ವೀಕ್ಷಿಸಿತು. ಚಕಿತಗೊಂಡಿತು. ಮುದಗೊಂಡಿತು. ಮೆಚ್ಚಿ ಹರ್ಷೋದ್ಗಾರ ಮಾಡಿತು.

ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

ಐತಿಹಾಸಿಕ ೨೯ ನೇ ಸಮ್ಮರ್ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.

ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್‌

ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್.

ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.

ನಮ್ಮ ಈ ಸರ್ಕಾರಕ್ಕೆ ಏನಾಗಿದೆ ಅಂತ ನಿಮಗೆನಾದರೂ ಗೊತ್ತೆ? ಗೊತ್ತಿದ್ದರೆ ಸ್ವಲ್ಪ ತಿಳಿಸಿ ಕೊಡುತ್ತಿರಾ!.
ಇದೆನಪ್ಪಾ ಇವರು ಈ ತರಹ ಕೇಳುತ್ತಿದ್ದಾರೆ ಎಂದುಕೊಳ್ಳಬೇಡಿ, ವಿಷಯವೇ ಹೇಳದೆ ಇವರು ಈ ರೀತಿ ನಮ್ಮನ್ನು ತಬ್ಬಿಬ್ಬುಗೊಳ್ಳಿಸುತ್ತಿದ್ದಾರೆ ಎಂದುಕೊಳ್ಳಬೇಡಿ.

‘ನರರ’ ನಾಡಿಗೆ ‘ವಾನರರ’ ಲಗ್ಗೆ

ಮಾನವನಾದ ಕಪಿಯಿಂದ;ಡಾರ್ವಿನ್ನಿನ ವಾದ.
ಏನು ಹೇಳಿದನವನು? ನಿಜವಾಗಿ ನಿಜವೇ?
ಮಾನವನ ಮುಖ ನೋಡು; ಹೌದು
ನಿಜವೆನಿಸುವುದು! ಕಪಿಯ ಹೃದಯ ನೋಡು
ಅಲ್ಲೆನಿಸುವುದೋ ತಿಮ್ಮ!?

ಎರಡು ದಶಕಗಳ ಕೆಳಗೆ ಖ್ಯಾತ ಹಾಸ್ಯ ಸಾಹಿತಿ ಬೀchi ತಮ್ಮ ‘ಅಂದನಾ ತಿಂಮ’ ಕೃತಿಯಲ್ಲಿ ಬಹು ಮಾರ್ಮಿಕವಾಗಿ ನಮ್ಮ ಪೂರ್ವಜರ (ಮಂಗಗಳ) ಕುರಿತು ಉಲ್ಲೇಖಿಸಿದ್ದರು. ಬಹುಶ: ಅಂದಿನ ಅವರ ಅನುಭವಪೂರ್ಣ ಹಾಗು ವಿಚಾರಪ್ರಚೋದಕ ಮಾತುಗಳು ನಾವು ಇಂದಿನವರಿಗೆ ಅನುಭವಕ್ಕೆ ಬರತೊಡಗಿವೆ ಎಂದರೆ ಅತಿಶಯೋಕ್ತಿ ಏನಲ್ಲ.

ಅತಿಲೋಲುಪ ಮಾನವ ಪ್ರಾಣಿ ವನ್ಯಜೀವಿಗಳ ಆಶ್ರಯತಾಣಗಳನ್ನು ತನಗೆ ಅನುಕೂಲವಾಗುವಂತೆ ಮನಸೋಇಚ್ಛೆ ಬಳಸಿದ. ಕಾಡು ಕಡಿದು
ಅವುಗಳ ವಾಸಸ್ಥಾನ ಹಾಳುಗೆಡವಿದ. ಈಗ ಮಂಗಗಳು ಧಾರವಾಡದಲ್ಲಿ ದಾರಿಗಾಣದೇ ‘ಉಪಾಯದಿಂದ’ ಆಹಾರ, ವಿಹಾರ, ವಾಸಸ್ಥಳ ಹಾಗು ಸಂತಾನೋತ್ಪತ್ತಿಗಾಗಿ ಮಾನವರ ವಾಸಸ್ಥಳಗಳನ್ನು ಆಕ್ರಮಿಸಿ, ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿವೆ.

ಗಂಡಸರೂ ಬಸುರಿ ಆಗುವುದಾಗಿದ್ದರೆ...?!

(ಈ ಬರಹ ಆರಂಭಿಸುವ ಮೋದಲೇ ಒಂದು ಮಾತನ್ನು ಹೇಳಿ ಬೀಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀ ವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ "ವ್ಯಾದಿಯಿಲ್ಲ". ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ)

ಹಾಸ್ಯ-ಭಾವ-ಲಹರಿ

ಕನ್ನಡ ಸ೦ಘ್ಹ, ಸಿ೦ಗಾಪುರ್ (ಸಿ೦ಗರ) ವತಿಯಿ೦ದ ಸು೦ದರ ರಸಮಯ ಸ೦ಜೆ ಹಸ್ಯ-ಭಾವ-ಲಹರಿ ಕರ್ಯಕ್ರಮನ್ನು ಏರ್ಪಡಿಸಲಾಗಿದೆ.
ಕರ್ಯಕ್ರಮ ನೆಡೆಸಿಕೊಡುವವರು, ಶ್ರೀಮತಿ ಎಮ್.ಡಿ. ಪಲ್ಲವಿ (ಪ್ರಸಿದ್ದ ಕನ್ನದ ಸಂಗೀತ ಲಹರಿ ಗಾಯಕಿ) ಮತ್ತು ಶ್ರೀ ಬಿ. ಪ್ರಾಣೆಶ್ (ಪ್ರಸಿದ್ದ ಕನ್ನಡ ಚುಟುಕ ಹಾಸ್ಯಗಾರ).
ಸ್ಥಳ : ಗ್ಲೊಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಚೂಲ್ ಆಡಿಟೊರಿಯಮ್

ಹಳ್ಳಿ = ಶಾಲೆ?!

ನಿನ್ನೆ ಸಾಯಂಕಾಲ ಟೀ ಕುಡೀತಿದ್ದಾಗ ನನ್ನ ಮತ್ತು ನನ್ನ ತಮಿಳು ಸ್ನೇಹಿತನ ಚರ್ಚೆ ತಮಿಳು ಇತಿಹಾಸದ ಕಡೆ ತಿರುಗಿತು.

ಅವನ ಓದಿನ ಪ್ರಕಾರ ಪಳ್ಳಿ ( ನಮ್ಮ ಹಳ್ಳಿ) ಅನ್ನುವುದು ಅಂದಿನ ( ಹಲ ಶತಮಾನಗಳ ಹಿಂದೆ) ರಾಜರಿಂದ ಜೈನರಿಗೆ ದತ್ತಿಯಾಗಿ ಕೊಡಲ್ಪಟ್ಟ ಜಾಗ. ಹೆಚ್ಚಾಗಿ ಹಳ್ಳಿ ಅಂದ್ರೆ ಶಾಲೆ ಅನ್ನೋ ಅರ್ಥ ಬಾರೋ ರೀತಿ ಬಳಸ್ತ ಇದರಂತೆ.