ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೊಂದಲ ಬಿಡಿಸಿ

ರಾತ್ರಿವೇಳೆ ವಿಮಾನ ಪ್ರಯಾಣದಲ್ಲಿ ಒಬ್ಬನ ಕೊಲೆಯಾಗುತ್ತದೆ (ಕತ್ತಲಲ್ಲಿ), ಜೊತೆಗೆ ಸಾಯುತ್ತಿರುವ ವ್ಯಕ್ತಿಯ ಗಟ್ಟಿಯಾದ ಕೂಗು "ಅವನೇ ಕೊಲೆಗಾರಾ......".
ನಿಲ್ದಾಣ ಬಂದೊಡನೆ ಪೋಲಿಸರು ಬಂದು ಸರಿಯಾದ ವ್ಯಕ್ತಿಯನ್ನೆ (ಕೊಲೆಗಾರ) ಬಂದಿಸುತ್ತಾರೆ,........
ಇದು ಹೇಗೆ ಸಾಧ್ಯ?

.......ಉತ್ತರಿಸಿ.......ಬೇಗ....ಉತ್ತರಿಸಿ.....

** ಅರಳಿ ಬಿಡು ಮಲ್ಲೆ ಹೂವೆ **

** ಅರಳಿ ಬಿಡು ಮಲ್ಲೆ ಹೂವೆ **

ಅರಳಿ ಬಿಡು ಮಲ್ಲೆ ಹೂವೆ!
ನನ ಗೆಳತಿ ನಗುವ ಮೊದಲು
ನಿನ್ನ ಸೊಬಗು ಉಳಿವುದೆಲ್ಲಿ?
ಅವಳ ನಗುವಿನ ತೆರೆಯಲ್ಲಿ

ಸೂಸು ಕಿರಣ ಬೇಗ ನಿತ್ಯನೆ!
ಅವಳು ಕಣ್ಣು ತೆರೆವ ಮೊದಲು
ಮಾಸುವುದು ನಿನ್ನ ಹೊಳಪು
ಅವಳ ಕಣ್ಣ ಹೊಳಪಿನಲ್ಲಿ

ನಾಟ್ಯವಾಡಿಬಿಡು ಗಿರಿನವಿಲೆ!
ನನ್ನ ಸ್ನೇಹ ಸಂಗಾತಿ ನಡೆವ ಮೊದಲು
ನಿನ್ನ ನಡೆಯ ಮೋಹಕವೆಲ್ಲಿ?
ಅವಳ ನಡೆಯ ಕಂಡಮೇಲೆ

** ಬಂತು ಬಂತು ಚುನಾವಣೆ **

** ಬಂತು ಬಂತು ಚುನಾವಣೆ **

ಬಂತು ಬಂತು ನೋಡು ಚುನಾವಣೆ
ಮಿಂಡ ಪುಂಡ ಪೋಕರಿಗಳ ಚಲಾವಣೆ
ತುಂಬಿ ತುಳಿಕಿದ್ದರು ಊರಲ್ಲಿ ಬವಣೆ
ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ

ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ
ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು
ತಿಂದು ಅಂಡೆಲೆದು ಕಾಲ ಕಳೆಯುವ
ಮೈಗಳ್ಳನಿಗೂ ಹೆಂಡದ ತೀರ್ಥ ಬಂತು

ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ

ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ

ಸಂಪದಿಗರು ಆಯೋಜಿಸಿರುವ [:event/GNU-Linux-Habba|ಗ್ನು/ಲಿನಕ್ಸ್ ಹಬ್ಬದ] ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ನಿನ್ನೆ ಒಂದು ಲೇಖನ (ಪತ್ರಿಕೆಯ ಎರಡನೇ ಪುಟದಲ್ಲಿಯೇ) ಬಂದಿದೆ. ಲೇಖನದ ಆನ್ಲೈನ್ ಆವೃತ್ತಿ ಇಲ್ಲಿದೆ, ನೋಡಿ.

ಅಕ್ಸಿಡೆಂಟು ನೋಡಿ

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ್ವಾ ? ನಿಜಕ್ಕೂ ಏನೂ ಆಗಿಲ್ಲ ಆತನಿಗೆ. ಗಾಡಿ ಮಾತ್ರಾ ಗೋತಾ.

ಅಂಬರಕ್ಕೆ ಹಾರಿತಯ್ಯೋ!!

ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನೆ ಹೊರಗೆ ಬಂದು ಜಗಲಿ ಮೇಲೆ ಕೂತ್ರೆ ಹಾಯನ್ಸೋ ಹಾಗೆ ಗಾಳಿಮರದ ತಂಪುಗಾಳಿ. ಮೇಲೆ "ಕುಹೂ ಕುಹೂ" ಕರ್ಣರಸಾಯನ ಬೇರೆ. ಜೊತೆಗೆ ಕಾಗೆ ಕೋಗಿಲೆಗಳ ಜೂಟಾಟ ನೋಡ್ತಾ ಮೈಮರೆತಿದ್ದೆ. ಚಿತ್ತ ಏನೂ ನೇಯದೆ ನಿರುಮ್ಮಳವಾಗಿತ್ತು. ಅಷ್ಟರಲ್ಲಿ "ಅಪ್ಪ, ಅಪ್ಪ, ಇಲ್ನೋಡ್ಬಾರಪ್ಪಅಂತ ಉಸಿರುಬಿಡದೆ ಮಗಮಹಾರಾಯನ ತುರ್ತಿನ ಕಿರಿಚಾಟ. ಮನಸ್ಸಿಲ್ಲದ ಮನಸ್ಸಿಂದ ಎದ್ದು ಹೋಗಿ ನೋಡಿದ್ರೆ ನಮ್ಮ ಗರಾಜ್‌ನಲ್ಲಿ ಬಟ್ಟೆ ಹರವಕ್ಕೆ ಹಾಕಿರೋ ಪ್ಲಾಸ್ಟಿಕ್ ವೈರ್‌ಗಳು ಸೇರೋ ಕಡೆ ಪುಟ್ಟದೊಂದು ಹಕ್ಕಿಗೂಡು!!! ಸಾಧಾರಣವಾಗಿ ಯಾರಿಗೂ ಕಾಣದ ಹಾಗೆ ಮರದಲ್ಲಿ ಎಲೆಯ ಸಂದಿನಲ್ಲಿ ಗೂಡು ಕಟ್ಟುವ ಹಕ್ಕಿ, ನಾವೆಲ್ಲ ಹದಿನೈದು ದಿನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಬಿಟ್ರು ಅಂದ್ಕೊಂಡ್ತೋ ಏನೋ, ತೀರಾ ಅಪರೂಪಕ್ಕೆ ನಮ್ಮ ಗರಾಜನ್ನ್ನು ಆರಿಸಿಕೊಂಡಿತ್ತು.

ಯಾವ ಹಕ್ಕೀದು ಈ ಗೂಡು ಅಂತ ಪುಸ್ತಕದಲ್ಲಿ ತಲಾಶ್ ಮಾಡುತ್ತಿದ್ದಾಗ ಅದು ಬುಲ್‍ಬುಲ್ ಹಕ್ಕೀದು ಅಂತ ಗೊತ್ತಾಯ್ತು. ಮರುದಿನ ಬಚ್ಚಲುಮನೆಯಿಂದ ಊಟದ ಮನೆಗೆ ಗರಾಜ್ ಹಾದು ಬರುತ್ತಿರುವಾಗ ಬರ್ರ್ರ್ ಅನ್ನೋ ರೆಕ್ಕೆಯ ಸಡಗರದ ಸದ್ದು. ನನ್ನ ಹೆಜ್ಜೆಸದ್ದಿಗೆ ಹೆದರಿದ ಹೆಣ್ಣು ಬುಲ್‌ಬುಲ್ ಹೊರಗೆ ಹಾರಿ ಗೇಟಿನ ಹತ್ತಿರ ಗಣೆ ಬೇತಾಳನ ಹಾಗೆ ಬೆಳಿದು ನಿಂತಿದ್ದ ದಾಸವಾಳದ ಗಿಡದ ಕೊಂಬೆಯ ಮೇಲೆ ಕೂತು "ಶನಿ ತೊಲಗಿತೋ ಇಲ್ವೋ" ಅಂತ ಗರಾಜಿನ ಸಂದಿನಲ್ಲಿ ಹಣಕುತ್ತಾ ಇತ್ತು. ನಾನು ಊಟದ ಮನೆಯಕಡೆ ಹೋದಹಾಗೆ ಮಾಡಿ ಬಾಗಿಲ ಸಂದಿನಿಂದ ಹಣಕಿದರೆ ತಾಯಿ ಹಕ್ಕಿ ಬಾಯಲ್ಲಿ ಒಂದು ಹಣ್ಣೆಲೆ ಕಚ್ಕೊಂಡು ಗೂಡು ಪೂರ್ತಿ ಮಾಡಕ್ಕೆ ಹಾಜರ್!!

ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?

ನನ್ನ ಡೆಸ್ಕ್ ಟಾಪಿನ ಪವರ್‍ ಸಪ್ಪೈ ಹಾಳಾಗಿದೆ. ಆ ಮಾಡೆಲಿನ ಹೊಸದು ಸಿಗುವುದು ಕಷ್ಟವಂತೆ. ಅದರ ಹಾರ್ಡ್‌ಡಿಸ್ಕನ್ನು ತೆಗೆದು (೮೦ ಜಿಬಿ) ನನ್ನ ಲ್ಯಾಪ್ ಟಾಪಿಗೆ USB ಪೋರ್ಟಿನ ಮೂಲಕ ಜೋಡಿಸಲು ಸಾಧ್ಯವೇ?

ಸಾಧ್ಯವಿದ್ದರೆ, ಆ ಡಿಸ್ಕಿನಿಂದ ಬೂಟ್ ಮಾಡಲು ಸಾಧ್ಯವೇ?

ನನ್ನ ಡೆಸ್ಕ್ ಟಾಪಿನಲ್ಲಿ Windows XP ಮತ್ತು ಲ್ಯಾಪ್ ಟಾಪಿನಲ್ಲಿ Vista OS ಇವೆ.

ಮೊಬೈಲ್ ಫೋನ್ ಗಾದೆಗಳು

ಮೊಬೈಲ್ ಫೋನ್ ಗಾದೆಗಳು

ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್...

ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು...

ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ...

ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ ಕರನ್ಸಿ ಸಾಲದು...

ಮಿಸ್ ಕಾಲ್ ಗೆ ಸಾವಿಲ್ಲ, ತಿರುಗಿ ಕಾಲ್ ಮಾಡದ್ದರೆ ಸುಖವಿಲ್ಲ...

ಕಾಯ್ನ್ ಬಾಕ್ಸ್ ಗೆ ನಿಮಿಷ ಮೊಬೈಲ್ ಗೆ ವರುಷ...

ಮಾಮರವೆಲ್ಲೋ...........ಕೋಗಿಲೆಯೆಲ್ಲೋ.........

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು

ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗಿ ನಿಂತಿದ್ದ