ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

! ಹನಿಗವನಗಳು !

! ಹನಿಗವನಗಳು !

ಪರೀಕ್ಷೆ...
ವಿದ್ಯಾರ್ಥಿಗಳ
ಬಾಳಿನ
ನಾಳಿನ
ನಿರೀಕ್ಷೆ...?

!!!ಭಗವಂತ!!!
ಜನರನ್ನು
ತನ್ನ ವಿಧ ವಿಧವಾದ
ವೇಷ ಭೂಷನಗಳಿಂದ
ಹೆದರಿಸಿ ಬೆದರಿಸಿ
ಕಾಪಾಡುವವ...(?)

- ಬಹುಮಾನ... -

ಪ್ರೀತಿಯ
ಆಟದಲ್ಲಿ ಸೋತ ...
ಗೆಳತಿಗೆ
ಗೆಳೆಯನು
ಕೊಟ್ಟ
ಮಗು ! ಎಂಬ
ಬಹುಮಾನ...

! ಕುರಿಗಳು ಸಾರ್...
ಹುಟ್ಟಿದ್ದು, ಬೆಳೆದದ್ದು
ಸಸ್ಯಹಾರಿಯಾಗಿ...
ಸತ್ತದ್ದು
ಮಾತ್ರ
ಮಾಂಸಹಾರಿಗಾಗಿ....

ನಾಯಕರ ಸೃಜನತೆ

ಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ [http://www.sampada.net/blog/anivaasi/27/09/2007/5805#comment-12364|ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು.] ಅದು ನಿಜವೂ ಹೌದು. ಆದರೆ, ಅದು  ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ.

ಬರ್ತ-ಮಾಯ್ಸರ ಹರಟೆ !!

ಬರ್ತ-ಮಾಯ್ಸರ ಹರಟೆ
-----------
ಮಾಯ್ಸ: ಏನಣ್ಣ, ಬರ್ತಣ್ಣ ಏನ್ ಪತ್ತೇನೆ ಇಲ್ಲ. ಎಲ್ಗೆ ಓಗಿದ್ದಣ್ಣ?
ಬರ್ತ:  ಇದ್ಯಾಕಣ್ಣ ನಾನು ನಿಂಗೆ ದೂರುಲಿ ಮಾಡಿರ್ನಿಲ್ವ  ಕಿಸುವೊಳಲಿಂದ. ಯೋಳಿದ್ನಲ್ಲಪ್ಪ ತಿರುಳ್ಗನ್ನಡ ನಾಡು,ಬೇಂದ್ರೆ ನಾಡು ಸುತ್ತಕ್ಕೆ ಹೊಂಟಿವ್ನಿ ಅಂತ. ನೀನೊಳ್ಳೆ

ಕಲಚಿದಕೊಂಡಿ

ಎಂದೋ ಕಲಚಿದಕೊಂಡಿ
ಮತ್ತೆ ಕೂಡಿಕೊಂಡಾಗ
ಸಂತಸದ ಹೊನಲು
ಮುಟ್ಟಿತ್ತು ಮುಗಿಲು

ಯಾರ್ಯಾರು ಎಲ್ಲೆಲ್ಲಿ
ಏನೇನು ಮಾಡುವರು
ಮಾಸಿ ಮರೆಯಾಗಿರುವ
ನೆನಪುಳಿಸಿ ಹೊಂಟವರು

ಒಮ್ಮೆ ನೋಡಿಬರುವೆ
ಇರುವ ಗೆಳೆಯರನೆಲ್ಲ
ಕಡೆತನಕ ಹಿಡಿಯುವೆನು
ಕೂಡಿರುವ ಕೊಂಡಿಯನು

ಹಳೆಯ ನೆನಪೇ

ಹಳೆಯ ನೆನಪೇ
ಚುಚ್ಚದಿರು ಮತ್ತೆ ಮತ್ತೆ
ಮರೆಯಲೆಂದೇ ನಿನ್ನ
ಸೋತಿಹೆನು ಪ್ರತಿದಿನ

ಕಹಿಯಾದ ಘಟನೆಗಳ
ಹಳೆಯ ಪುಟಗಳಲಿ
ಮುಚ್ಚಿಟ್ಟು ಆಳದಲಿ
ಮತ್ತೆ ಎದ್ದು ಬರದಿರಲೆಂದು

ಹತ್ತಾರು ವರುಷಗಳಿಂದ
ಹಲವು ಊರುಗಳದಾಟಿ
ನಿತ್ಯ ಹಸಿರನು ಹೊತ್ತು
ನಿನ್ನ ಮರೆಯಲೆಂದೇ

ನಿನ್ನ ತೊರೆಯಲು ನಾ
ಮರಳಿ ಯತ್ನವ ಮಾಡೆನು
ಇರುವೆ ನಿನ್ನ ಜೊತೆಗೇ
ನಾ ಮರೆಯಾಗುವವರೆಗೆ

- ಚಿಂತೆ... -

- ಚಿಂತೆ... -
ಗೆಳತಿ...."
ಭಾರತದ ಜನಸಂಖ್ಯೆ ನೂರುಕೋಟಿ
ದಾಟಿತು ಎಂಬ ಚಿಂತೆಯೇ...
ಅಥವಾ ಅದರಲ್ಲಿ
ನಮ್ಮದಿಲ್ಲ ಒಂದು ಮಗು
ಎಂಬ ಚಿಂತೆಯೇ ....?

ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.

ಬದುಕಿಗಾಗಿ...

ಬದುಕಿಗಾಗಿ...

ಸಮಯ ನೀಡಿ
ಉಳಿವಿಗಾಗಿ...
ಭೇದ ಭಾವ ಮರೆಸಿ
ಒಳಿತಿಗಾಗಿ...
ಎಚ್ಚರಿಕೆ ವಹಿಸಿ
ಬದುಕಿಗಾಗಿ...
ಜಾಗ್ರತಿ ಮೂಡಿಸಿ
"ಎಡ್ಸ್" ಹರಡದಂತೆ ಮುಗ್ಧ ಜನರಿಗಾಗಿ...

("ಎಡ್ಸ್‍ನ್ನು ಅಳಿಸಿ; ದೇಶವನ್ನು ಉಳಿಸಿ")

ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.

- ಬಾ ಗೆಳತಿ... -

- ಬಾ ಗೆಳತಿ... -
ಸೊಂಪಾದ ಗಿಡದಲ್ಲಿ ಹೂವೊಂದು ಅರಳಿ
ಕೆದಡಿದ ಕೆಸರಲ್ಲಿ ಕಮಲವೊಂದು ಅರಳಿ
ಬಾಳೆಂಬ ಮನದಲ್ಲಿ ಪ್ರೀತಿ ಬೀಜವನ್ನು ಬಿತ್ತಿ
ಒಲವೆಂಬ ಹಾದಿಯಲಿ ಹ್ರದಯ ರಾಗವನ್ನು ಮೀಟಿ
ತನುವೆಂಬ ಲತೆಗೆ ನಿನ್ನಾಸರೆಯೊಂದಿರಲು
ಒಂಟಿ ಜೀವನದ ಕತ್ತಲ ಬಾಳಿಗೆ ಬೆಳದಿಂಗಳ
ಶಶಿಯಾಗಿ ಬಾ ಗೆಳತಿ..........

:ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.

ಗೆಳೆತನ...

ಗೆಳೆತನ ಮಾಡಿದರೆ ನಮಗಿಂತ ಶ್ರೇಷ್ಟರೊಡನೆ ಮಾಡಬೇಕು ಇಲ್ಲವೇ ಸಮಾನರೊಡನೆಯಾದರೂ ಮಾಡಬೇಕು ಇವೆರೆಡು ಸಾಧ್ಯ ಆಗದಿದ್ದಲ್ಲಿ ಎಕಾಂಗಿರುವುದೇ ಲೇಸು.-ಬುದ್ಧ

ಧರ್ಮಕಾರಣ

ನನ್ನ ಪ್ರೀತಿಸಲು
ಇಲ್ಲಾ ದ್ವೇಷಿಸಲು
ಗುರುತಿಸಲು ಇಲ್ಲಾ
ಗುರುತಿಸದಿರಲು

ಬೆನ್ನು ತಟ್ಟಲು ಇಲ್ಲ
ಅದಕೆ ಚೂರಿ ಇಡಲು
ನನ್ನ ಒಪ್ಪಲು
ಇಲ್ಲಾ ಹೊರತಬ್ಬಲು

ಕೊನೆಗೆ ಬದುಕಲು
ಇಲ್ಲಾ ಸಾಯಲು
ದಯೆತೋರಿ ಒಂದು
ಅವಕಾಶ ನೀಡಿ

ಕೂಗುವೆನು ಎಲ್ಲರನು ಮನುಕುಲಕೆ
ಜಾತಿ ಮತಬೇಧವಿರದೆಡೆಗೆ
ರಾಗ ದ್ವೇಷಗಲಿಲ್ಲದೆಡೆಗೆ
ಪ್ರೀತಿಯಸಾಗರದೆಡೆಗೆ