ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 1)

"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ?

ಗಾಳಿಪಟ ಚಿತ್ರದ "ಒಂದೇ ಸಮನೇ... ನಿಟ್ಟುಸಿರು "ಹಾಡಿನ ಸಾಹಿತ್ಯ

ಒಂದೇ ಸಮನೇ... ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ.. ಕಂಗಳಲಿ
ಕರಗುತಿದೆ ಕನಸಿನ ಬಣ್ಣ

ಎದೆಯ ಜೋಪಡಿಯ ಒಳಗೆ
ಕಾಲಿಡದೇ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು..

ಕೊನೆ ಇರದ ಏಕಾಂತವೇ ಒಲವೇ..?

ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ......

ಜೀವ ಕಳೆವ ಅಮೃತಕೆ

ಸುಮ್ಮನೆ

ನನ್ನ ಸೆಳೆದ ಮೊಜುಗಾರ್ತಿ, ನೀನೊಂಥರ ಮಾಯೆಗಾರ್ತಿ !
ನಿನ್ನ ಕೈಯ ಉಂಗುರ, ನಾನಗಳು ಈ ಸ್ವರ !
ಕಣ್ಣ ಮುಚ್ಚಿ ಕರೆದಾಗ, ನನ್ನೇ ಕಳೆದೆ ನಾನಾಗ !
ನೀನೆ ನನ್ನ ಪ್ರಾಣ ಸಖಿ, ಆಗಲೇ ನಾ ನಿನ್ನ ಕಿವಿಜುಮುಕಿ !

- ಉಳಿದ ಪದ ಮುಂದುವರೆಯುವುದು

'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?

'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಬೆಂಗಳೂರಿನ ಯಾವ ಮಳಿಗೆಯಲ್ಲಿ ಸಿಗಬಹುದು?

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೧

ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು
ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ
ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು
ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ
ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ
ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ
ಮಾಡಿರಲಿಲ್ಲ. ಒಂದು ವಾರ ಕೆಲಸದಿಂದ ರಜೆ ಗಿಟ್ಟಿಸಿಕೊಂಡು ಆದಷ್ಟು ಊರುಗಳಿಗೆ
ಭೆಟ್ಟಿಕೊಟ್ಟೆ. ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ
ನಾಚಿಕೆ ದಿನೆ ದಿನೆ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು
ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ
ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ಹತ್ತು ದಿನಗಳ ಅಲೆದಾಟ
ಅವಿಸ್ಮರಣೀಯವಾದರೂ, ಅಪೂರ್ವ ಅನುಭವ ಸಿಕ್ಕಿದ್ದು ಮೈಲಾಪುರದ ಜಾತ್ರೆಯಲ್ಲಿ .

ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

 

 

"ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ ಡೈಲಾಗುಗಳನ್ನ ಹೊತ್ತುಕೊಂಡು ಬಹಳ ಖುಷಿ ಕೊಡುವ ಚಿತ್ರವಾಗಿ ಮುಗಿಯುತ್ತದೆ.

ಗಣೇಶನ ಬಾಯಿಂದ witty ಡೈಲಾಗ್ಸ್ ಒಂದರಮೇಲೊಂದು ಸುರಿಯುತ್ತ ವೀಕ್ಷಕರು ಸ್ಕ್ರೀನಿಗೆ ಕಣ್ಣಿಟ್ಟು ಕೂತಿರುವಂತೆ ಮಾಡುತ್ತದೆ. ಸ್ಕ್ರೀನ್ ಪ್ಲೇ ಜೀವ ತುಂಬಿಕೊಂಡಿರುವಂತಿದೆ, ಅರ್ಥಪೂರ್ಣವಲ್ಲದಿದ್ದರೂ. ಸಂಗೀತ ಬಹಳ ಡಿಫರೆಂಟ್ ಆಗಿದ್ದು ವೀಡಿಯೋ ಹಾಡುಗಳಿಗೆ ಚೆನ್ನಾಗಿ ಹೊಂದಿಕೊಂಡಂತೆ ಮೂಡಿಬಂದಿದೆ.
ಸಿನೆಮಾಟೋಗ್ರಫಿ ಬಹಳ ಚೆನ್ನಾಗಿದೆ. ಡಿಜಿಟಲ್ ಎಫೆಕ್ಟ್ ಚೆಂದವಾಗಿ ನಂಬಿಕೆ ತರುವಂತಿದೆ (ಸಂಪೂರ್ಣವಾಗಿ ಸರಿಯಾಗಿಲ್ಲದಿದ್ದರೂ).

ನಟ ಗಣೇಶ್ ತಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾರೆ. ಡೈಸಿ ಬೋಪಣ್ಣರ ಪಾತ್ರ ಸಿನಿಮಾ ಹಾಲ್ ಬಿಟ್ಟು ಹೊರಬಂದರೂ ನೆನಪಿನಲ್ಲುಳಿಯುತ್ತದೆ. ಜೊತೆಗಿರುವ ಉಳಿದ ಕಲಾವಿದರು ಒಳ್ಳೆಯ ನಟನೆಯಿಂದ ಚಿತ್ರವನ್ನು ಮತ್ತಷ್ಟು ಉತ್ತಮವಾಗಿಸಿದ್ದಾರೆ.

ನನಗೆ ಹಿಡಿಸಿದ ಕವಿರಾಜಮಾರ್ಗದ ಒಂದಿಶ್ಟು ಸಾಲುಗಳು

(೧)
ಅಱಿವುಳ್ಳವರೊಳ್ ಬೆರಸದು
ದಱಿಂದಮರಿಯದರೊಳಪ್ಪ ಪರಿಚಯದಿಂದಂ
ನೆಱೆಯಿಂದ್ರಿಯಮಂ ಗೆಲ್ಲದು
ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ
[ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ್ಲದೆ ಇರುವುದರಿಂದಲೂ ಮಂದಿಗೆ ಹೆಚ್ಚು ಬೆಸನವು ಒದಗುತ್ತದೆ ]