ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಗತಿ

ಬೆಳದಿಂಗಳಲ್ಲಿ ಬೆಳ್ಳಗೆ ನಿಂತ
ಅಪಾರ್ಟ್‌ಮೆಂಟಿನ ಎದುರಿನ ಹೆದ್ದಾರಿಯಲ್ಲಿ
ದಾರಿ ಕಾಣದೆ
ಎರಡು ಬಾತುಕೋಳಿಗಳ
ಚಟ್ಟೆಗಾಲಿನ ತಡಕಾಟ

ಭಗತ್ ಸಿಂಗ್: ದಾರಿ ಆವುದಯ್ಯ ವೈಕುಂಠಕೆ?

ಕೆಲವು ದಿನಗಳ ಹಿಂದೆ "Poverty Talk - A new fashion" ಅಂತ ಒಂದು ಲೇಖನ ಬರೆದಿದ್ದೆ. ಅದನ್ನು ಓದಿ ನನ್ನ ಗೆಳೆಯನೊಬ್ಬ, ".. ಜೀವನದಲ್ಲಿ ಯಾರೂ ಮತ್ತೊಬ್ಬರನ್ನು ಸಹಾನುಭೂತಿಯಿಂದ ನೋಡುವುದೇ ಇಲ್ಲ, ಎಲ್ಲರಿಗೂ ತಮ್ಮದೇ ಚಿಂತೆ, ಎಲ್ಲರೂ ಸ್ವಾರ್ಥಿಗಳು!

www.vachanasahitya.org ಗತಿ ಏನಾಯ್ತು!?

www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ.
* This domain got expired. Please contact Internet World Wide (Space2let Services) for the RENEWAL *

ನನ್ನಂತ ಕನ್ನಡ ನಾಡಿನಿಂದ ಹೊರಗಿರುವವರಿಗೆ ಈ ಪುಟ ತುಂಬಾ ನೆಮ್ಮದಿಯನ್ನು ಕೊಟ್ಟಿತ್ತು. ನಾಡಿನ ಹೊರಗಿದ್ದೂ ಸ್ವಂತ ನಾಡಿನ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಉಳಿಸಿ ಬೆಳಸಿತ್ತು.

ಸೇತುಸಮುದ್ರ ಯೋಜನೆ:ಬೇಕೇ?

ಸೇತು ಸಮುದ್ರ ಯೋಜನೆಯಿಂದ ಭಾರತಕ್ಕೆ ನೌಕಾಯಾನ ಸುಲಭವಾಗುತ್ತದೆ.ಸಮಯ ಮತ್ತು ಹಣದ ಉಳಿತಾಯ ಆಗುತ್ತದೆ ಎನ್ನುವ ಅಭಿಪ್ರಾಯ ಇದೆ. ಆದರೆ ಈ ಯೋಜನೆಯಿಂದ ಪ್ರಯೋಜನ(?) ಪಡೆಯಲು ಸಣ್ಣ ಹಡಗುಗಳಿಗೆ ಮಾತ್ರಾ ಸಾಧ್ಯವಂತೆ. ಆಗುವ ಸಮಯದ ಉಳಿತಾಯ ಹೆಚ್ಚೆಂದರೆ ಎಂಟು ಗಂಟೆಯಂತೆ. ಈ ಕಾಲುವೆ ಬಳಕೆಗೆ ಶುಲ್ಕ ವಿಧಿಸಿದರೆ,ಹಡಗುಗಳಿಗೆ ಹಣದ ಉಳಿತಾಯವೂ ಆಗದು.

ಇವರೀಗ ಯಾವ ಕಾಲದಲ್ಲಿದ್ದಾರೆ!

<a title="ಇವರೀಗ" target="_self" href="http://www.onlinebangalore.com/gove/bmtc/pass.html">ಇವರೀಗ</a>ಯಾವ ಕಾಲದಲ್ಲಿದ್ದಾರೆ!ಇದನ್ನೆಲ್ಲ update ಮಾಡ್ಲಿಕ್ಕೆ ಯಾರೂ ಇಲ್ವಾ ....

ಈ ಸ್ಥಿತಿ ಬದಲಾದ ನ೦ತರ ವೃಷಭಾವತಿಯಲ್ಲಿ ಸಾವಿರಗಟ್ಟಲೆ ಲೀಟರ್ ನೀರು ಹರಿದುಹೋಗಿ ಆಗಿದೆ.

ಇದ್ದವರು ಇಬ್ಬರೇ ಆದರೆ ಕದ್ದವರಾರು?

ಬ್ಯಾನರ್ಜಿ, ರಾಮಕೃಷ್ಣ ಹೆಗಡೆ, ನಜೀರ್ ಸಾಬ್

ರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು. ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್‌ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್‌ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್‌ ಶೆಟ್ಟರ್‌, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ನಮ್ಮ ಬಾಳು

ನನ್ನ ಗೆಳತಿ ನೀನು, ಜೊತೆಗಾತಿ ನೀನು
ನೀ ನಿಗಲು ಚೆನ್ನ ಬಾಳು
ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ
ಆಗುವುದು ಬಾಳು ಗೋಳು.

ನನ್ನ ಚೆಲುವೆ ನೀನು, ನನ್ನ ಒಲವೆ ನೀನು
ನೀ ನಿರಲು ಚೆನ್ನ ಬಾಳು
ನೀ ನೊಂದುಕೊಂಡ್ರೆ, ನೀ ಬೆಂದುಕೊಂಡ್ರೆ
ಆಗುವುದು ಬಾಳು ಗೋಳು.

ಮಲ್ಲಿಗೆಯೇ ನೀನು, ಸಂಪಿಗೆಯೇ ನೀನು
ನೀ ನಗಲು ಕಂಪು ಬಾಳು
ನೀ ಬಾಡಿಹೋದ್ರೆ, ನೀ ಮುದುಡಿಕೊಂಡ್ರೆ

ಜಾತಿಕೂಪದಲ್ಲೊಂದು ಪ್ರೀತಿಯ ಹೂವು

ಜಾತಿಕೂಪದಲ್ಲೊಂದು ಪ್ರೀತಿಯ ಹೂವು
ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು ಜನ ಕಳ್ಳರನ್ನು ಬಡಿದು ಸಾಯಿಸಿದ್ದಾರೆ. ಇವರಿಗೆ ಒಟ್ಟಿಗೇ ಹತ್ತು ಜನವೇ ಹೇಗೆ ಸಿಗುತ್ತಾರೋ ತಿಳಿಯದು! ಅದೇನೇ ಇರಲಿ, ಇದನ್ನು ಮಾಡಿದವರು ಶ್ರೀಮಂತರೇನಲ್ಲ; ನನ್ನ ನಿಮ್ಮಂತಹ ಜನಸಾಮಾನ್ಯರೇ. ಸದ್ಯಕ್ಕೆ ರಾಜ್ಯವನ್ನು, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಇಡೀ ಭಾರತದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರಾದ ನಿತೀಶ್ ಕುಮಾರ್ ಆಳುತ್ತಿರುವ ಸಮಯದಲ್ಲೂ ಇಂತಹ ವಿಕ್ಷಿಪ್ತ ಘಟನೆಗಳು ನಡೆಯುತ್ತಿವೆ ಎಂದರೆ? ಬಿಹಾರದ ಈ ವಿಕ್ಷಿಪ್ತತೆಯ ರೋಗ ಅಲ್ಲಿನ ಜಾತಿವಾದಿ ಹಾಗೂ ಜಮೀನ್ದಾರಿ ಸಾಮಾಜಿಕ - ಆರ್ಥಿಕ - ಸಾಂಸ್ಕೃತಿಕ ನೆಲದಲ್ಲಿ ಆಳವಾಗಿ ಬೇರೂರಿದೆ. ಲಾಲೂ ಪ್ರಸಾದ್ ಯಾದವ್ ಇದನ್ನು ಬಳಸಿಕೊಂಡು ತಮ್ಮ ಕೌಟುಂಬಿಕ ರಾಜಕಾರಣಕ್ಕೆ ನೆಲೆ ಮಾಡಿಕೊಂಡರಷ್ಟೆ. ಅವರು ಈ ರೋಗದ ಮೂಲೋತ್ಪಾಟನೆಯ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದರೆಲ್ಲದರ ಪಾಪದ ಫಲವನ್ನು ಈಗ ನಿತೀಶ್ ಹೊರಬೇಕಿದೆ. ದೀರ್ಘಕಾಲಿಕ ಹತಾಶೆಯಲ್ಲಿ ಬೆಂದ ಜನ ವಿಕ್ಷಿಪ್ತರಾಗದೇ ಇನ್ನೇನಾದಾರು? ಅದೂ ಪೋಲೀಸ್ ವ್ಯವಸ್ಥೆ ಪೂರ್ತಿ ಭ್ರಷ್ಟವಾಗಿ, ಉಳ್ಳವರೊಂದಿಗೆ ಶಾಮೀಲಾಗಿರುವಾಗ? ಮೊನ್ನೆ ಸರಗಳ್ಳನ ಮೇಲೆ ನಡೆದ ದೌರ್ಜನ್ಯದ ಬಗೆಗೆ ಅಲ್ಲಿನ ಪೋಲೀಸ್ ಮೊದಮೊದಲು ಪ್ರತಿಕ್ರಿಯಿಸಿದ್ದು ಉಡಾಫೆಯೊಂದಿಗೇ! ಯಾವುದೇ ವೈಯುಕ್ತಿಕ ದೌರ್ಬಲ್ಯಗಳಿಲ್ಲದ, ಪರಿಶುದ್ಧ ವ್ಯಕ್ತಿತ್ವದ ನಿತೀಶ್ ಕುಮಾರ್‍ಗೆ (ಇಂತಹವರಿಗೆ ಬಿ.ಜೆ.ಪಿ.ಯೇ ಮಿತ್ರ ಪಕ್ಷವಾಗಬೇಕಾಗಿ ಬಂದಿರುವುದು ಇಂದಿನ ರಾಜಕಾರಣದ ದುರಂತವಾಗಿದೆ!) ಇದೆಲ್ಲವೂ ತಮ್ಮ ಆಳ್ವಿಕೆಯನ್ನು ಕುರಿತಂತೆ ಎಚ್ಚರಿಕೆಯ ಗಂಟೆಗಳಾಗಬೇಕು. ಏಕೆಂದರೆ ಅವರು, ಮೆಗಾ ಅಭಿವೃದ್ಧಿಯ ಜಾಗತೀಕರಣದ ಈ ದಿನಗಳಲ್ಲೂ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್ ರಂತೆ ಜನಸಾಮಾನ್ಯರ ಕಷ್ಟ - ಸುಖಗಳೊಂದಿಗೆ ಗುರುತಿಸಿಕೊಳ್ಳಬಯಸುವ ಅಪರೂಪದ ರಾಜಕಾರಣಿ.

ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ ಅಂತಾರೆ...

ಮೊನ್ನೆ ಬಿಎಂಟಿಸಿ ಬಸ್ಸ್ ಹಿಂದುಗಡೆ ‘ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ’ ಎಂಬ ಬರಹ ಓದಿದೆ. ಸಾರ್ವಜನಿಕ ವಾಹನ ಬಳಸಿದರೆ ವಾಯುಮಾಲಿನ್ಯ ಹೇಗೆ ಕಡಿಮೆ ಆಗುತ್ತಿದೆ. ಆ ವಾಹನಗಳಿಂದ ಹೊಗೆ ಬರುವುದಿಲ್ಲವೇ ಎಂಬ ತುಂಟ ಪ್ರಶ್ನೆ ಮನದಲ್ಲಿ ಎದ್ದಿತು. ಅಷ್ಟೇ ಅಲ್ಲ ‘ಸಾರ್ವಜನಿಕ ವಾಹನ ತಾನೇ ಬಳಸಿದರಾಯಿತು.