ಪಿಳ್ಳನ ಸಪೋಟ ಪ್ರಸಂಗ...
ಪಿಳ್ಳನ ಸಪೋಟ ಪ್ರಸಂಗ...
-----------------------
- Read more about ಪಿಳ್ಳನ ಸಪೋಟ ಪ್ರಸಂಗ...
- Log in or register to post comments
ಪಿಳ್ಳನ ಸಪೋಟ ಪ್ರಸಂಗ...
-----------------------
ರಘುನಾಥ ಚ,ಹ. ಇವರ ಲೇಖನ(ಪ್ರಜಾವಾಣಿ ದಿನಾಕ ೩೧-೧೦-೨೦೦೭) ‘ಇ’ ಸವಿಗನ್ನ ಡ.....॒॒ ವನ್ನು ಓದಿದಾಗ ಬಂದ ಬಾವನೆಗಳು
ಕನ್ನಡದ ಕಷ್ಠಗಳು;-
ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.
೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ.
ನಾನು ರಾಮಸುಬ್ಬ. ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ.
ಓದದ ಬಾಯದು ತಾನ್ ಮೇದಿನಿಯೊಳ್ ಬಿಲದ ಬಾಯ್
ಎಂದು ಹಿರಿಯರಾಡಿದ ಮಾತಿದೆಯಲ್ಲವೇ? ನನ್ನ ಈ ಹಳ್ಳಿಯ ಮಕ್ಕಳು ವಿದ್ಯಾವಂತರಾಗಿ ಹಳ್ಳಿಯ ಹೆಸರನ್ನು ಜಗದ್ವಿಖ್ಯಾತಗೊಳಿಸಬೇಕು ಎಂಬುದು ನನ್ನ ಬಯಕೆ.
ಜೀವನೋಪಾಯಕ್ಕಾಗಿ ನನಗೆ ಪೂರ್ವಜರಿಂದ ಬಂದ ಜಮೀನು ಇದೆ. ಆದರೆ ಬರೀ ಕಲ್ಲು ತುಂಬಿದ ಈ ಬರಡು ಭೂಮಿಯಲ್ಲಿ ಮಳೆಯ ನೀರನ್ನೇ ನೆಚ್ಚಿಕೊಂಡು ಬೆಳೆ ತೆಗೆಯುವುದೇನೂ ಸುಲಭದ ಮಾತಲ್ಲ. ನಮ್ಮಲ್ಲಿನ ಕಲ್ಲುಗಳೋ ಒಂಥರಾ ವಿಚಿತ್ರ. ಅವು ಪದರ ಪದರಗಳಾಗಿ ನೆಲದಾಳದಿಂದ ಗುಡ್ಡಬೆಟ್ಟಗಳಾಗಿ ಮೇಲೆದ್ದಿರುವ ಸ್ಲೇಟುಕಲ್ಲುಗಳು. ಅವುಗಳ ಬಣ್ಣಗಳೂ ವಿಭಿನ್ನ. ಕಪ್ಪು, ಹಸಿರು, ಬಿಳಿ, ಹಳದಿ ಇತ್ಯಾದಿ. ಈಗೀಗ ಇವಕ್ಕೆ ಒಳ್ಳೆಯ ಮಾರುಕಟ್ಟೆಯೂ ಇದೆ.
ಅಂದ ಹಾಗೇ ಬೆಲಂ ಎಂಬುದು ನಮ್ಮೂರಿನ ಹೆಸರು. ಪುಸ್ತಕ ಭಾಷೆಯ ಇಕಾರವೆಲ್ಲ ನಮ್ಮಲ್ಲಿನ ಆಡುಮಾತುಗಳಲ್ಲಿ ಎಕಾರವಾಗಿ ಬದಲಾಗುತ್ತವೆ. ಹಾಗೆಯೇ ಬಿಲ ಎಂಬುದು ಬೆಲವಾಗಿ ಕೇಳಿಸಿದರೆ ಅದರಲ್ಲಿ ನಮ್ಮ ತಪ್ಪೇನೂ ಇಲ್ಲ. ಎಂಥೆಂಥದೋ ಒಳ್ಳೊಳ್ಳೆಯ ಹೆಸರುಗಳು ಇರುವಾಗ ನಮ್ಮೂರಿಗೇಕೆ ಇಂಥ ಚೆಂದವಿಲ್ಲದ ಹೆಸರು ಎಂದು ನಾನು ಎಷ್ಟೋ ವೇಳೆ ಯೋಚಿಸಿದ್ದಿದೆ. ನಮ್ಮೂರಿನಲ್ಲಿ ಓದದ ಬಾಯಿಗಳು ಬಹುಸಂಖ್ಯೆಯಲ್ಲಿವೆ ಎಂಬ ಒಂದೇ ಕಾರಣಕ್ಕೆ ಇಡೀ ಊರನ್ನು ಈ ಹೆಸರಿಂದ ಕರೆಯಬಹುದೇ? ಶುದ್ಧ ಅವಮಾನ. ಹಾಗೆ ನೋಡಿದರೆ ಅವಿದ್ಯಾವಂತರು ಬಹುಸಂಖ್ಯೆಯಲ್ಲಿರುವ ಎಷ್ಟು ಊರುಗಳಿಲ್ಲ! ನಮ್ಮೂರಿಗೆ ಬಿಲ ಎಂದು ಹೆಸರು ಬರಲು ಬೇರೆ ಏನೋ ಕಾರಣ ಇರಲೇಬೇಕು.
ಬಿಸಿಲುಗಾಲದ ಹಗಲಿನಲ್ಲಿ ನಮ್ಮೂರಿನಲ್ಲಿ ಹೊರಗೆ ಅಡಿಯಿಡುವುದೇ ದುಸ್ತರ. ಆಗ ಬಿಸಿಲು ಬೆಂಕಿಯಂತೆ ಬೇಯುತ್ತಿರುತ್ತದೆ. ಹಗಲಿಡೀ ಬಿಸಿಲಿಗೆ ಬೆಂದ ಬಂಡೆಗಳು ರಾತ್ರಿಯಲ್ಲಿ ನಿಟ್ಟುಸಿರು ಬಿಡುವುದರಿಂದ ನಮಗೆ ಸೆಕೆಯೋ ಸೆಕೆ. ಆದರೆ ಮಳೆಗಾಲದಲ್ಲಿ ಪರವಾಗಿಲ್ಲ. ಹಗಲು ಬಿಸಿಲು ರಾಚಿದರೂ ರಾತ್ರಿ ವೇಳೆಗೆ ಎಲ್ಲಿಂದಲೋ ತಂಗಾಳಿ ಬೀಸುವುದರಿಂದ ವಾತಾವರಣ ತಂಪಾಗುತ್ತದೆ.
ಗೋರಖ್ ಪುರಕ್ಕೆ ಹೋಗಬೇಕು, ಸಿದ್ಧರಾಗಿ ಎಂದು ಮೇಲಧಿಕಾರಿಗಳಿಂದ ಕರೆ ಬಂದಾಗ ಮನಸ್ಸು ಗೋರಖ ಎಂಬ ಹೆಸರಿನ ಬಗ್ಗೆ ಚಿಂತಿಸತೊಡಗಿತು. ಉತ್ತರ ಭಾರತೀಯರು ಲಕ್ಷ ಎನ್ನುವ ಕಡೆ ಲಖ ಎಂದು ಉಚ್ಛರಿಸುತ್ತಾರಷ್ಟೆ, ಹಾಗಿದ್ದಲ್ಲಿ ಗೋರಖ, ಗೋರಕ್ಷ ಇರಬಾರದೇಕೆ ಎಂದೆನ್ನಿಸಿತು.ಗೋರಕ್ಷ ಎಂದಾಕ್ಷಣವೇ ನಮ್ಮ ವಚನ ಚಳವಳಿಯ ಅಲ್ಲಮ ನೆನಪಿಗೆ ಬಂದ. ಜೈನ ಧರ್ಮದ ಬಾಹುಳ್ಯ ಹೆಚ್ಚಿ, ಶೈವ ಸಿದ್ಧಾಂತಗಳು ಮೂಲೆಗುಂಪಾಗಿ ಅಸಹನೀಯವೆನಿಸತೊಡಗಿದ್ದ ಕಾಲದಲ್ಲಿ ತನ್ನ ಸನ್ನಡತೆಯ ನಿಮಿತ್ತ ಜನಪ್ರಿಯನಾಗಿದ್ದ ಒಬ್ಬ ಸರ್ಕಾರಿ ಅಧಿಕಾರಿ ಬಸವಣ್ಣನಿಂದಾಗಿ ಶೈವ ಧರ್ಮದ ಅನುಯಾಯಿಗಳು ಬೀದಿ ಬೀದಿಯಲ್ಲೂ ಧೈರ್ಯದಿಂದ ಮಾತಾಡತೊಡಗಿದ್ದ ಕಾಲವದು. ಅದೇ ಗುಂಪಿನ ಅದೇ ಗುಂಗಿನ ಅಲ್ಲಮನೆಂಬ ಅಲೆಮಾರಿ ಊರೂರು ಸುತ್ತಿ ಶೈವ ಸಿದ್ಧಾಂತಗಳ ಪುನರ್ ನವೀಕರಣದಲ್ಲಿ ತೊಡಗಿದ್ದ. ಅದೇ ಸಂದರ್ಭದಲ್ಲಿ ಸಿದ್ಧರಾಮನೆಂಬ ಒಬ್ಬ ಜನೋಪಕಾರಿ ಇಂಜಿನಿಯರನು ಜನಹಿತಕ್ಕಾಗಿ ಜನರಿಂದಲೇ ಶ್ರಮದಾನ ಪಡೆದು ಕೆರೆ ಕಾಲುವೆಗಳನ್ನು ಕಟ್ಟಿಸಿ ಜನಸೇವೆ ಮಾಡುತ್ತಿದ್ದ. ಹೀಗೆ ಒಂದು ರೀತಿಯಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿದ್ದ ಅವನನ್ನು ಕುಹಕಿಗಳು ಒಡ್ಡರಾಮನೆಂದೂ ಕರೆಯುತ್ತಿದ್ದರು. ವೀರಶೈವ ಮತ ಪ್ರಚಾರದಲ್ಲಿ ತೊಡಗಿದ್ದ ಅಲ್ಲಮ ಸಿದ್ಧರಾಮನಲ್ಲಿಗೆ ಬಂದು ಜನಸೇವೆಯೊಂದಿಗೆ ಲಿಂಗ ಸೇವೆಯನ್ನೂ ಮಾಡಲೆಳಸಿದ. ವಾದ ವಿವಾದ ತರ್ಕ ವಿತರ್ಕಗಳು ನಡೆದು ಸಿದ್ಧರಾಮ ಷಟ್ ಸ್ಥಲ ಸಿದ್ಧಾಂತಕ್ಕೆ ಒಲಿದನೋ ಇಲ್ಲವೋ ತಿಳಿಯದು.ಹೀಗೆ ಅಲ್ಲಮ ಭೆಟ್ಟಿಯಾದ ಮತ್ತೊಬ್ಬ ಗಣ್ಯ ಗೋರಕ್ಷ. ಈತ ನಾಥಪಂಥದ ಯೋಗಿ, ಆಗ್ಗೆ ಸುಮಾರು ಇನ್ನೂರು ಮುನ್ನೂರು ವರ್ಷಗಳಿಂದ ಪ್ರಚಲಿತವಾಗಿದ್ದ ಈ ಪಂಥದ ಅನುಯಾಯಿಗಳು ಹಿಮಾಲಯದ ಬುಡದಲ್ಲೂ ಕೃಷ್ಣೆ ಕಾವೇರಿಯರ ಕಣಿವೆಯಲ್ಲೂ ಪಸರಿಸಿದ್ದರು. ಅಲ್ಲೆಲ್ಲಾ ಅವರು ಮಠಗಳನ್ನು ಸ್ಥಾಪಿಸಿ ಕಠಿಣಯೋಗ ಮತ್ತು ಸನ್ಯಾಸತ್ವವನ್ನು ಸಾಧಿಸಿ ಜೀವಿಸುತ್ತಿದ್ದರು. ಅವರು ಗುರುವಿಗೆ ತುಂಬಾ ಗೌರವ ಮಹತ್ವಗಳನ್ನು ನೀಡುತ್ತಿದ್ದರು. ಶಿವನೇ ಪರಮಗುರು ಹಾಗೂ ಪರಮಯೋಗಿ, ಸಾಧನೆಯಿಂದ ತಾವೂ ಶಿವನ ಸ್ಥಾನಕ್ಕೇರಬಹುದು. ಉಳಿದೆಲ್ಲ ಮಂದಿ ತಮ್ಮ ನೆಲೆಗೆ ನಿಲುಕದ ಹುಲುಮಾನವರೆಂದು ಬಗೆದಿದ್ದವರು. ಅಲ್ಲಮನ ಪ್ರತಿಪಾದನೆಯೂ ಹೆಚ್ಚು ಕಡಿಮೆ ಇದೇ ಆಗಿತ್ತು. ಆದರೆ ಹುಲು ಮಾನವರನ್ನೂ ಶಿವನತ್ತ ಸೆಳೆಯುವ ದೊಡ್ಡ ಆದರ್ಶ ಅವನಿಗಿತ್ತು. ಹೀಗೆ ಗೋರಕ್ಷನ ವಜ್ರಕಾಯದ ಪರೀಕ್ಷೆ ಅಲ್ಲಮನ ನಿರೀಶ್ವರ ಕಾಯದ ಪರೀಕ್ಷೆಗಳು ನಡೆದು ಇಬ್ಬರೂ ಸಮಬಲರಾಗಿ ನಿಲ್ಲುತ್ತಾರೆ. ಗೋರಕ್ಷ ಕೊನೆಗೆ ತನ್ನ ದಾರಿ ತನಗೆಂದು ಹೊರಟುಬಿಡುತ್ತಾನೆ.
ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಷನರಿಗಳು ಅವುಗಳನ್ನೆಲ್ಲ ಅಧ್ಯಯನ ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿತ್ತು. ಇದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಅವರು ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು. ಜೆಸ್ವಿತ್ ಪತ್ರಗಳು ಎನಿಸಿಕೊಳ್ಳುವ ಈ ವಾರ್ಷಿಕ ವರದಿಗಳು ಕ್ರಿಸ್ತಶಕ ೧೬೪೦ ರಿಂದ ೧೭೫೦ ಅವಧಿಯವಾಗಿದ್ದು ಲತೀನ್, ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿವೆ. ಇಂದಿಗೂ ಈ ವರದಿಗಳನ್ನು ಕ್ರೈಸ್ತ ಜಗದ್ಗುರುಪೀಠವಿರುವ ವ್ಯಾಟಿಕನ್ನಿನ ಗ್ರೆಗರಿಯನ್ ವಿಶ್ವವಿದ್ಯಾಲಯದ ಪತ್ರಾಗಾರದಲ್ಲಿ ಸಂಗ್ರಹಿಸಿಡಲಾಗಿದೆ.
ಜೆಸ್ವಿತ್ ಪತ್ರಗಳನ್ನು ಇತಿಹಾಸಾಧ್ಯಯನದ ದೃಷ್ಟಿಯಿಂದ ಅವಲೋಕಿಸಿದರೆ ರಾಜರುಗಳ ಪೂರ್ವೋತ್ತರಗಳಕುರಿತ ವರದಿಗಳು ಕರ್ನಾಟಕದ ಇತಿಹಾಸದ ಪುನರ್ ರಚನೆಗೆ ಕಾರಣವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ನಮ್ಮ ದೇಶದ ಪ್ರಾಚೀನ ಇತಿಹಾಸದ ದಾಖಲಿಸುವ ಸಂದರ್ಭದಲ್ಲಿ ಸ್ಥಳೀಯ ಬರಹಗಾರನಿಗೆ ತನ್ನೊಡೆಯನ ಉಪ್ಪಿನ ಋಣವೇ ಭಾರವಾಗುವುದರಿಂದ ಆತ ಒಡೆಯನ ಉನ್ನತಿಯ ವಿಷಯಗಳನ್ನಷ್ಟೇ ದಾಖಲಿಸುತ್ತಾನೆ, ಅವನತಿಯ ವಿಷಯಗಳನ್ನು ಮರೆಮಾಚುತ್ತಾನೆ. ಆದ್ದರಿಂದ ನಮ್ಮ ದೇಶದ ಚರಿತ್ರೆಯನ್ನು ಪುನರ್ ನಿರೂಪಿಸುವಾಗ ನಮ್ಮ ನಾಡಿನ ಆಕರಗಳು ಪೂರ್ಣ ನ್ಯಾಯ ಒದಗಿಸುವುದಿಲ್ಲ. ಆದರೆ ವಿದೇಶೀ ವ್ಯಕ್ತಿಗೆ ಈ ಹಂಗು ಇರುವುದಿಲ್ಲವಾದ್ದರಿಂದ ಆತ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸುತ್ತಾನೆ. ಈ ಒಂದು ದೃಷ್ಟಿಯಿಂದ ಜೆಸ್ವಿತ್ ಪತ್ರಗಳ ಬೆಳಕಲ್ಲಿ ನಮಗೆ ನಮ್ಮ ನಾಡಿನ ಇತಿಹಾಸದ ಸ್ಪಷ್ಟ ದೃಶ್ಯಗಳು ಕಾಣತೊಡಗುತ್ತವೆ.
ಕ್ರಿಮಿ,ಕೀಟ,ಪಕ್ಷಿ,ಪ್ರಾಣಿಗಳನ್ನು ಸೃಷ್ಠಿ ಮಾಡುವಾಗ ಬ್ರಹ್ಮನು ಹೆಚ್ಚಿನ ಸೌಂದರ್ಯವನ್ನು ಗಂಡಿಗೇ ಕೊಟ್ಟನು. ಅದೇ ದೇವತೆಗಳ ಮತ್ತು ಮಾನವರ ಸೃಷ್ಠಿಯಲ್ಲಿ ತಪ್ಪಿದ. ಸ್ವತಃ ತನಗೆ ನಾಲ್ಕು ತಲೆ, ವಿಷ್ಣುವನ್ನು ನೀಲ,ಶಿವನಿಗೆ ಹಣೆಯಲ್ಲಿ ಕಣ್ಣು, ‘ಅಗಲ ಕಿವಿ,ಸಣ್ಣಕಣ್ಣು’ಗಣೇಶ,ಆರು ಮುಖದ ಸುಬ್ರಹ್ಮಣ್ಯ...
! ಹನಿಗವನಗಳು !
ಪರೀಕ್ಷೆ...
ವಿದ್ಯಾರ್ಥಿಗಳ
ಬಾಳಿನ
ನಾಳಿನ
ನಿರೀಕ್ಷೆ...?
!!!ಭಗವಂತ!!!
ಜನರನ್ನು
ತನ್ನ ವಿಧ ವಿಧವಾದ
ವೇಷ ಭೂಷನಗಳಿಂದ
ಹೆದರಿಸಿ ಬೆದರಿಸಿ
ಕಾಪಾಡುವವ...(?)
- ಬಹುಮಾನ... -
ಪ್ರೀತಿಯ
ಆಟದಲ್ಲಿ ಸೋತ ...
ಗೆಳತಿಗೆ
ಗೆಳೆಯನು
ಕೊಟ್ಟ
ಮಗು ! ಎಂಬ
ಬಹುಮಾನ...
! ಕುರಿಗಳು ಸಾರ್...
ಹುಟ್ಟಿದ್ದು, ಬೆಳೆದದ್ದು
ಸಸ್ಯಹಾರಿಯಾಗಿ...
ಸತ್ತದ್ದು
ಮಾತ್ರ
ಮಾಂಸಹಾರಿಗಾಗಿ....
ಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ [http://www.sampada.net/blog/anivaasi/27/09/2007/5805#comment-12364|ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು.] ಅದು ನಿಜವೂ ಹೌದು. ಆದರೆ, ಅದು ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ.