ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)

'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು.
'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ.
'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು.
'ವಾಸಿಯಾಗುತ್ತದೆ, ಪ್ರಾರ್ಥನೆಮಾಡು' ಅಂದ.
'ಪ್ರಾರ್ಥನೆ ಮಾಡಿದರೆ ಏನು ಉಪಯೋಗ? ಬೇಕಾದಷ್ಟು ಪ್ರಾರ್ಥನೆ ಮಾಡಿದ್ದೇನೆ. ಏನೂ ಅಗಿಲ್ಲ' ಮುಗುಳು ನಗುತ್ತಾ ಮಾತನಾಡಿದಳು. 'ನನ್ನ ಪರವಾಗಿ ನೀವು ಪ್ರಾರ್ಥನೆಮಾಡಿ. ನನ್ನ ಮೇಲೆ ಕೈ ಇಡಿ. ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ' ಅಂದಳು.
'ನಾನು ಹೇಗೆ ಕಂಡಿದ್ದೆ?'
'ನನ್ನ ಎದೆಯಮೇಲೆ ಕೈ ಇಟ್ಟಿದ್ದಿರಿ, ಇಲ್ಲಿ, ಹೀಗೆ' ಅನ್ನುತ್ತಾ ಅವನ ಕೈ ಹಿಡಿದೆಳೆದು ಎದೆಯಮೇಲಿಟ್ಟುಕೊಂಡಳು.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)

[ಏಳನೆಯ ಅಧ್ಯಾಯ ಮುಂದುವರೆದಿದೆ.]
'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತಿ ಏನು ಅನ್ನುವ ಯೋಚನೆಯೇ ಇಲ್ಲ. ಏಯ್, ನೀನು, ಎಲ್ಲಿಗೆ ಹೋಗುತ್ತಿದ್ದೀ? ಇವತ್ತು ಮುಗೀತು, ನಾಳೆ ಬಾ ಹೋಗು.' ವ್ಯಾಪಾರಿಯಂತೂ ಎಲ್ಲರನ್ನೂ ಕಳಿಸಿಬಿಟ್ಟ.
ಎಲ್ಲವೂ ವ್ಯವಸ್ಥಿತವಾಗಿರಬೇಕು ಅನ್ನುವ ಆಸೆ, ಜನರಮೇಲೆ ದಬ್ಬಾಳಿಕೆ ಮಾಡುವುದರಿಂದ ಬರುವ ಖುಷಿ, ಜೊತೆಗೆ ಫಾದರ್ ಸೆರ್ಗಿಯಸ್‌ನಿಂದ ಅವನಿಗೆ ಆಗಬೇಕಾಗಿದ್ದ ಕೆಲಸ ಇವೆಲ್ಲ ಸೇರಿ ಆ ವ್ಯಾಪಾರಿ ಅಷ್ಟು ಮುತುವರ್ಜಿಯಿಂದ ಜನರನ್ನು ಚದುರಿಸಿದ್ದ. ಅವನಿಗೆ ಒಬ್ಬಳೇ ಮಗಳು. ಹೆಂಡತಿ ಸತ್ತು ಹೋಗಿದ್ದಳು. ಮಗಳಿಗೆ ಖಾಯಿಲೆ. ಮದುವೆಯಾಗಿರಲಿಲ್ಲ. ಅವಳ ಖಾಯಿಲೆ ವಾಸಿಯಾಗಲೆಂದು ಎಂಟು ನೂರು ಮೈಲು ಪ್ರಾಯಾಣಮಾಡಿಕೊಂಡು ಅವಳನ್ನೂ ಕರೆದುಕೊಂಡು ಬಂದಿದ್ದ. ಎರಡು ವರ್ಷಗಳಿಂದ ಏನೇನೋ ಪ್ರಯತ್ನಪಟ್ಟಿದ್ದರೂ ಕಾಯಿಲೆ ಮಾತ್ರ ಹಾಗೇ ಇತ್ತು. ತನ್ನ ಪ್ರಾಂತ್ಯದಲ್ಲಿದ್ದ ಯೂನಿವರ್ಸಿಟಿಯ ಆಸ್ಪತ್ರೆಗೆ ಹೋಗಿದ್ದ. ಉಪಯೋಗವಾಗಿರಲಿಲ್ಲ. ಆಮೇಲೆ ಸಮಾರಾ ಪ್ರಾಂತ್ಯದಲ್ಲಿದ್ದ ರೈತನೊಬ್ಬನ ಹತ್ತಿರ ನಾಟಿ ಔಷಧಿ ಕೊಡಿಸಿದ್ದ. ಕೊಂಚ ಗುಣವಾಯಿತೇನೋ ಅನ್ನಿಸಿತ್ತು. ಮತ್ತೆ ಮಾಸ್ಕೋದಲ್ಲಿದ್ದ ಡಾಕ್ಟರ ಹತ್ತಿರ ಹೋಗಿ ಹೇರಳವಾಗಿ ಹಣ ಖರ್ಚುಮಾಡಿದ್ದ. ಏನೇನೂ ಫಲ ದೊರೆಯಲಿಲ್ಲ. ಫಾದರ್ ಸೆರ್ಗಿಯಸ್ ರೋಗಿಗಳ ಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎಂದು ಜನ ಹೇಳುವುದು ಕೇಳಿ ಈಗ ಇಲ್ಲಿಗೆ ಬಂದಿದ್ದ. ಜನರನ್ನೆಲ್ಲ ಕಳಿಸಿಬಿಟ್ಟು ಫಾದರ್ ಸೆರ್ಗಿಯಸ್‌ನ ಬಳಿಗೆ ಬಂದು ದೊಪ್ಪನೆ ಅವನ ಕಾಲ ಬಳಿ ಕುಸಿದು ಕುಳಿತು ಜೋರಾಗಿ ದನಿತೆಗೆದು ಮಾತಾಡಿದ:
'ಓ ಪವಿತ್ರಾತ್ಮಾ, ಸಂತ ಮಹಾನುಭಾವಾ! ನನ್ನ ಕರುಳಿನ ಕುಡಿ ರೋಗಪೀಡಿತಳಾಗಿ ವೇದನೆಯಿಂದ ನರಳುತ್ತಿದ್ದಾಳೆ. ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುವ ಧೈರ್ಯಮಾಡಿದ್ದೇನೆ. ಅವಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯವಿಟ್ಟು ನನ್ನ ಮಗಳು ಗುಣಮುಖಳಾಗುವಂತೆ ಆಶೀರ್ವದಿಸಿ' ಎಂದು ಬೊಗಸೆಗೈಯಾಗಿ ಬೇಡಿಕೊಂಡ. ಮಗಳ ಖಾಯಿಲೆ ವಾಸಿಯಾಗಬೇಕಾದರೆ ಹೀಗಲ್ಲದೆ ಬೇರೆಯ ರೀತಿಯಲ್ಲಿ ಬೇಡಬಾರದು ಎಂಬ ನಿಯಮವಿದೆಯೋ ಎಂಬಂತೆ ಮಾತನಾಡಿದ ಅವನು. ಅವನು ಎಂಥ ವಿಶ್ವಾಸದಿಂದ ಮಾತನಾಡಿದನೆಂದರೆ ಮಾತನಾಡಬೇಕಾದ್ದೇ ಹೀಗೆ, ಕೋರಿಕೊಳ್ಳಬೇಕಾದ್ದೇ ಹೀಗೆ ಎಂದು ಸ್ವತಃ ಫಾದರ್ ಸೆರ್ಗಿಯಸ್‌ನಿಗೂ ಅನ್ನಿಸಿಬಿಟ್ಟಿತು. 'ಏಳಪ್ಪಾ, ನಿನ್ನ ತಾಪತ್ರಯವೇನು ಹೇಳು' ಎಂದು ಕೇಳಿದ. ಆಗ ಆ ವ್ಯಾಪಾರಿ--ನನಗೆ ಒಬ್ಬಳೇ ಮಗಳು, ಎರಡು ವರ್ಷದ ಹಿಂದೆ ಅವಳ ತಾಯಿ ಇದ್ದಕ್ಕಿದ್ದಹಾಗೆ ತೀರಿ ಹೋದಳು, ಆವಾಗಿನಿಂದ ಸುಮ್ಮನೆ ವರಾತ (ಅದು ಅವನದೇ ಮಾತು) ಮಾಡುತ್ತಿದ್ದಾಳೆ, ಮೈಮೇಲೆ ಪರಿವೆಯೇ ಇರುವುದಿಲ್ಲ, ಬುದ್ಧಿಭ್ರಮಣೆಯಾಗಿರಬೇಕು, ಎಂಟು ನೂರು ಮೈಲು ಪ್ರಯಾಣಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಇಲ್ಲೇ ವಸತಿ ಗೃಹದಲ್ಲಿದ್ದಾಳೆ, ಫಾದರ್ ಸೆರ್ಗಿಯಸ್ ಹೇಳಿಕಳಿಸುವವರೆಗೂ ಅಲ್ಲೇ ಇರುತ್ತಾಳೆ, ಹಗಲು ಹೊತ್ತಿನಲ್ಲಿ ಹೊರಗೆ ಬರುವುದಿಲ್ಲ, ಅವಳಿಗೆ ಬೆಳಕನ್ನು ಕಂಡರೆ ಭಯ, ಸೂರ್ಯಮುಳುಗಿದಮೇಲೆ ಮಾತ್ರ ಬರುತ್ತಾಳೆ ಅಂದ.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)

ಏಳು
ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛೆಯಂತೆ ದೊರೆತಿರುವ ಸ್ಥಾನ ಇದು. ನಾನು ಮಾಡುತ್ತಿರುವುದು ಸರಿಯೇ ಅನ್ನುವ ಯೋಚನೆ ಅದು. ಹದಿನಾಲ್ಕು ವರ್ಷದ ಹುಡುಗನ ಕಾಯಿಲೆ ವಾಸಿಯಾದಾಗಿನಿಂದ ಅವನಿಗೆ ಈ ಸ್ಥಾನಮಾನ ದೊರೆತಿದ್ದವು. ಅಂದಿನಿಂದ ತಿಂಗಳು, ವಾರ, ದಿನ ಕಳೆದಂತೆಲ್ಲಾ ಅಂತರಂಗದ ಬದುಕು ಕ್ಷೀಣಿಸಿ ವ್ಯರ್ಥವಾಗುತ್ತಿದೆ, ಮನಸ್ಸಿನೊಳಗೆಲ್ಲ ಹೊರಗಿನ ಲೋಕವೇ ತುಂಬಿಕೊಳ್ಳುತ್ತಿದೆ ಅನ್ನಿಸುತ್ತಿತ್ತು ಅವನಿಗೆ. ಒಳಗು ಹೊರಗಾಗಿ, ಹೊರಗು ಒಳಗಾದಂತೆ ಅನ್ನಿಸುತ್ತಿತ್ತು.
ಮಠಕ್ಕೆ ಜನರನ್ನು ಆಕರ್ಷಿಸುವ, ಅವರಿಂದ ದಾನ ಧರ್ಮ ಪಡೆಯುವ ಉಪಕರಣವಾಗಿ ಬಳಕೆಯಾಗುತ್ತಿದ್ದೇನೆ ಎಂದು ಅರಿವಾಗುತ್ತಿತ್ತು. ಆದ್ದರಿಂದಲೇ ಅವನಿಂದ ಸಾಧ್ಯವಾದಷ್ಟೂ ಲಾಭ ಪಡೆಯುವುದಕ್ಕೆ ಅನುಕೂಲವಾಗುವಂತೆ ಮಠದ ಒಡೆಯರು ಅವನ ಬದುಕನ್ನು ತಿದ್ದಿಬಿಟ್ಟಿದ್ದರು. ಅಂದರೆ, ಅವನು ಒಂದಿಷ್ಟೂ ದೇಹಶ್ರಮದ ಕೆಲಸ ಮಾಡಬೇಕಾಗಿಯೇ ಇರಲಿಲ್ಲ. ಅವನಿಗೆ ಬೇಕಾದುದೆಲ್ಲ ದೊರೆಯುವಂತೆ ವ್ಯವಸ್ಥೆಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವನ ದರ್ಶನ ಕೋರಿ ಬಂದವರಿಗೆಲ್ಲ ದರ್ಶನನೀಡಿ ಆಶೀರ್ವಾದ ಮಾಡಬೇಕು ಅನ್ನುವುದಷ್ಟೇ ಅವರ ಬಯಕೆ. ಅವನಿಗೆ ಅನುಕೂಲವಾಗಲೆಂದು ದರ್ಶನಕ್ಕೆ ವಾರದ ಕೆಲವು ದಿನ ನಿಗದಿ ಮಾಡಿದ್ದರು. ಗಂಡಸು ಭಕ್ತರು ಕಾಯುವುದಕ್ಕೆ ಒಂದು ಕೋಣೆ, ಹೆಣ್ಣು ಭಕ್ತಾದಿಗಳ ಗುಂಪು ಒಟ್ಟಾಗಿ ಮೈಮೇಲೆ ಮುಗಿಬೀಳುವುದನ್ನು ತಪ್ಪಿಸಲು ಸರಳುಗಳ ಕಟಕಟೆ, ಅದರ ಹಿಂದೆ ನಿಂತು ಫಾದರ್ ಸೆರ್ಗಿಯಸ್ ಆಶೀರ್ವಾದಮಾಡುವ ವ್ಯವಸ್ಥೆ ಎಲ್ಲವೂ ರೂಪುಗೊಂಡವು. ಜನಕ್ಕೆ ತಮ್ಮನ್ನು ಕಾಣುವ ಅಗತ್ಯವಿದೆ, ಜನರ ಬಗ್ಗೆ ಪ್ರೀತಿ ಇರಬೇಕು ಎಂದು ಸ್ವತಃ ಏಸುವೇ ವಿಧಿಸಿರುವಾಗ ತಾವು ಜನಕ್ಕೆ ದರ್ಶನ ನೀಡದೆ ಹೋದರೆ ಅದು ಕ್ರೌರ್ಯವಾಗುತ್ತದೆ ಎಂಬ ಮಠದ ವಾದಕ್ಕೆ ಶರಣಾಗದೆ ಬೇರೆ ದಾರಿಯಿರಲಿಲ್ಲ. ಈ ಬಗೆಯ ಬದುಕಿಗೆ ಒಗ್ಗಿಕೊಂಡಷ್ಟೂ ತನ್ನೊಳಗಿನ ಅಂತರಂಗವನ್ನೆಲ್ಲ ಬಹಿರಂಗದ ಲೋಕವೇ ವ್ಯಾಪಿಸಿಕೊಳ್ಳುತ್ತಿದೆ, ಒಳಗಿನ ಜೀವ ಜಲ ಬತ್ತಿಹೋಗುತ್ತಿದೆ, ಮನುಷ್ಯರಿಗಾಗಿ ಬದುಕುತ್ತಿದ್ದೇನೆಯೇ ಹೊರತು ದೇವರಿಗಾಗಿ ಅಲ್ಲ ಅನ್ನುವ ಭಾವ ಮೂಡುತ್ತಿತ್ತು.

ಓ ನಲ್ಲ...

ಓ ನಲ್ಲ...
-~-~-~-

ಎಲ್ಲಿ ಹೋದೆಯೋ, ಓ ನನ್ನ ನಲ್ಲ...!
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...

ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...

ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...

ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...

--ಶ್ರೀ

ಮೋರನ ನಿಜ ಮೋರೆ

ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. "ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ" ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ "ಬೌಲಿಂಗ್ ಫಾರ್‍ ಕಾಲಂಬೈನ್" ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು.

ನಾನು ಈ ಮೈಕಲ್ ಮೋರನ ತೊಂಬತ್ತರ ದಶಕದ ಟಿವಿ ಸೀರಿಯಲ್ ನೋಡಿ ಖುಷಿಸಿದ್ದು ನೆನಪಾಯಿತು. "ಮೈಕಲ್ ಮೋರ್‍ ಶೋ" ಎಂದೇ ಅದರ ಹೆಸರು. ವಾರ ವಾರವೂ ಸಾಮಾಜಿಕ ಅನ್ಯಾಯಗಳ ವಿರುದ್ಧ ದೊಡ್ಡ ಕಂಪನಿಗಳ ಎದುರು ನಿಲ್ಲುತ್ತಿದ್ದ. ಹಲವಾರು ನಾಟಕೀಯ ಪ್ರಸಂಗಗಳ ಮೂಲಕ ಆ ಕಂಪನಿಗೆ ತನ್ನ ತಪ್ಪನ್ನು ಎದುರುಗೊಳ್ಳುವಂತೆ ಮಾಡುತ್ತಿದ್ದ.

ವಾರೆವ್ಹಾ ಕ್ರಿಸ್ಮಸ್ ಬಂತು

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.

ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ.

ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?

ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು
ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟನ ಶಾಸನ ಇದೆ)