ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹ್ಯಾರಿ ಪೊಟ್ಟರ್

BBC picture
ಮೊನ್ನೆ ಊರಿಂದ ಬಂದಿದ್ದ ಬಶ್ಯ "ಸ್ವಾಮ್ಯಾರೆ, ಏನ್ ಓದಕತ್ತೀರಿ, ಊಟ ಮಾಡ್ತಾನೂ. ಪರೀಕ್ಸೇನಾ?' ಎಂದು ಕೇಳಿದ.
ಪರೀಕ್ಷೆ ಅನ್ನೋ ಮಾತು ಕೇಳಿ ಮನಸ್ಸಿನಲ್ಲಿ ಸ್ವಲ್ಪ ಗಲಿಬಿಲಿಯಾದರೂ ಎಚ್ಚರಗೊಂಡು ಪರೀಕ್ಷೆ ಬರೆಯುವ ಸಂಪತ್ತು ಇನ್ನು ಬರೋದಿಲ್ಲವೆಂಬುದನ್ನು ಮನಸ್ಸಿನಲ್ಲಿಯೇ ಖಾತ್ರಿಪಡಿಸಿಕೊಂಡೆ - ಕಾಲೇಜು ಮುಗಿದು ಸರಿಯಾಗಿ ೩ ವರ್ಷ ಆಯ್ತಲ್ವ ಎಂದು ಕ್ಯಾಲೆಂಡರು ನೋಡುತ್ತ.

ಬಶ್ಯನಿಗೆ ನಾನವತ್ತು ಉತ್ತರವಾಗಿ "ಹ್ಯಾರಿ ಪಾಟರ್ ಪುಸ್ತಕ ಓದ್ತಿದೀನಿ ಕಣೋ" ಎಂದು ಹೇಳಿದ್ದರೆ ಹ್ಯಾರಿ ಪಾಟರ್ ಯಾರು, ಎಲ್ಲಿಂದ ಬಂದ, ಏನಾಗಿತ್ತು ಅವನಿಗೆ, ಯಾಕವನು ಇಷ್ಟು ಫೇಮಸ್ಸು ಎಂದೆಲ್ಲ ದೊಡ್ಡದೊಂದು ಉಪನ್ಯಾಸವೇ ಕೊಡಬೇಕಾಗಿತ್ತು. ಇಂಗ್ಲೀಷರ ಮಕ್ಕಳ ಕಥೆಯಾದರೂ ಇದನ್ನು ದೊಡ್ಡವರೇ ಜಾಸ್ತಿ ಓದ್ತಾರೆ ಅನ್ನೋದನ್ನ ಅವನಿಗೆ ಬಿಡಿಸಿ ಸವಿವರವಾಗಿ ಹೇಳಬೇಕಿತ್ತು.

"ಪರೀಕ್ಷೆಯೇನೂ ಇಲ್ಲ ಕಣೋ, ಈ ಪುಸ್ತಕ ಇದೆಯಲ್ಲಾ ಕೋಟಿಗಟ್ಲೆ ಮಾರಾಟ ಆಗಿದೆಯಂತೆ ಮಾರಾಯ. ನನಗೊಂದು ಕೋಟಿ urgent ಬೇಕಿತ್ತು ನೋಡು, ಇದರಲ್ಲೇನಿದೆ ನೋಡಿ ನಾನೂ ಹಾಗೇ ಬರೆಯೋಣಾಂತ" ಎಂದು ತಮಾಷೆ ಮಾಡಿದೆ.

ವೈರಸ್(ವಿರಸ) ದಾಳಿ

ಕಂಪ್ಯೂಟರ್ ಯುಗ.ಬಹಳಾ fast.ಆ ವೇಗಕ್ಕೆ ಹೊಂದಿಕೊಳ್ಳಲು ನಾನೂ ನನ್ನ ಕಂಪ್ಯೂಟರನ್ನು update ಮಾಡುತ್ತಾ ಬಂದಿದ್ದೇನೆ.ಆದರೂ ನನ್ನ ಕಂಪ್ಯೂಟರ್ ಆನ್ ಮಾಡಿ ಕೆಲಸ ಶುರುಮಾಡಲು ಅರ್ಧ ಘಂಟೆ ತಗಲುವುದು!!


ಹೌದು.,


ವಿರಸ ದಾಳಿ!!(ನೀವೆಲ್ಲಾ ಆಂಗ್ಲ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದಂತೆ ನಾನೂ "ವೈರಸ್ ಅಟ್ಟ್ಯಾಕ್" ನ್ನು ಕನ್ನಡೀಕರಿಸಿದ್ದೇನೆ.)


ನಾನು ಕಂಪ್ಯೂಟರ್ ನ ಎದುರಿಗೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು,ನನ್ನ ಹೆಂಡತಿಯ ಸವತಿಮಾತ್ಸರ್ಯಕ್ಕೆ ಕಾರಣವಾಗಿದೆ.ಒಂದೋ ಕಂಪ್ಯೂಟರ್ ಎದುರು ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ಕನೆಕ್ಟ್ ಮಾಡುವ ಸ್ವಿಚ್ ಗೆ ಇಸ್ತ್ರಿಪೆಟ್ಟಿಗೆಯೋ,ಮಿಕ್ಸಿಯೋ ಸಿಕ್ಕಿಸಿ ಅವಳ ಕೆಲಸ ಮಾಡುವಳು,ಇಲ್ಲಾ "ತೆಂಗಿನಕಾಯಿ/ಗೋಧಿಹಿಟ್ಟು/ ಸಕ್ಕರೆಮುಗಿದಿದೆ. ಬೇಗ ತನ್ನಿ" ಎಂದು ಆಜ್ಞಾಪಿಸುವಳು. ಇಷ್ಟೆಲ್ಲಾ ಸುಧಾರಿಸಿದ ಮೇಲೂ- -ಕಂಪ್ಯೂಟರ್ ನ ಮೇಲಿರುವ ಪುಸ್ತಕ,ಪೇಪರ್ ಗಳನ್ನು ತೆಗೆದು, -ಮೌಸ್ ಪ್ಯಾಡ್ ಮೇಲಿರುವ ಪೌಡರ್ ಡಬ್ಬಿ,ಬಾಚಣಿಗೆ..ಗಳನ್ನು ತೆಗೆದು, -ಕೀ ಬೋರ್ಡ್ ಅಡಿಯಲ್ಲಿರುವ ರಸೀದಿಗಳನ್ನು ತೆಗೆದು, -ಕುಳಿತುಕೊಳ್ಳುವ ಕುರ್ಚಿ ಮೇಲಿರುವ ಬಟ್ಟೆ ರಾಶಿ ತೆಗೆದು ನನ್ನ ಕೆಲಸ ಮಾಡಬೇಕು. ಈ ವಿರಸದಾಳಿಯನ್ನು ತಪ್ಪಿಸಲು ಒಳ್ಳೆ ಆಂಟಿ ವೈರಸನ್ನು(anti virus)ಹುಡುಕುತಿದ್ದೇನೆ.

ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...

ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...

ಬಹುಶಃ ಈ ಅಂಕಣವನ್ನು ನೀವು ಓದುವ ಹೊತ್ತಿಗೆ ನಮ್ಮ ಹೊಸ ರಾಷ್ಟ್ರಪತಿ ಯಾರೆಂದು ಗೊತ್ತಾಗಿರುತ್ತದೆ. ಪ್ರತಿಭಾ ಪಾಟೀಲ್ ಗೆಲ್ಲುವ ಅಭ್ಯರ್ಥಿಯೆಂದು ಸಮೂಹ ಮಾಧ್ಯಮಗಳು ಈಗಾಗಲೇ ಮತಗಳ ಲೆಕ್ಕಾಚಾರ ಹಾಕಿ ಘೋಷಿಸಿವೆ. ಮಾಯಾವತಿಯ ವಿರುದ್ಧ ತಾಜ್ ಹಗರಣದ ಮೊಕದ್ದಮೆ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸುವಂತೆ ನೋಡಿಕೊಳ್ಳುವ ಮೂಲಕ ಬಿ.ಎಸ್.ಪಿ. ಬೆಂಬಲವನ್ನೂ ಕಾಂಗ್ರೆಸ್ ಈಗಾಗಲೇ ಖಚಿತಪಡಿಸಿಕೊಂಡಿರುವುದರಿಂದ ಮತ್ತು ತೃತೀಯ ರಂಗದ ಪಕ್ಷಗಳು ಈ ಚುನಾವಣೆಯಲ್ಲಿ ಮತ ಚಲಾಯಿಸದೇ ಇರುವ ತೀರ್ಮಾನವನ್ನು ಕೈಗೊಂಡಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಪಾಟೀಲ್ ಗೆಲವು ಇನ್ನಷ್ಟು ನಿಚ್ಚಳವಾಗಿರುವಂತೆ ತೋರುತ್ತಿದೆ. ಆದರೆ, ಜಾತಿ ಲೆಕ್ಕಾಚಾರವೂ ಈ ಬಾರಿಯ ಚುನಾವಣೆಯಲ್ಲಿ ಚಾಲನೆಗೊಂಡಿರುವುದರಿಂದ, ಅಮರ್ ಸಿಂಗ್‌ರಂತಹ ಪ್ರಳಯಾಂತಕ ರಾಜಕೀಯ ದಲ್ಲಾಳಿಗಳು ನಟವರ್ ಸಿಂಗ್‌ರಂತಹ ಅತಂತ್ರ ರಾಜಕಾರಣಗಳ ಮೂಲಕ ತೆರೆಮರೆಯಲ್ಲಿ ಶೆಖಾವತ್ ಪರ ಕ್ಷತ್ರಿಯ ರಾಜಕಾರಣ ಮಾಡುತ್ತಿರುವ ಸೂಚನೆಗಳು ದೊರಕಿದ್ದು; ಅಂತಿಮ ಫಲಿತಾಂಶ ಏನೇ ಆದರೂ, ಈವರೆಗೆ ತನ್ನ ಪಾವಿತ್ರ್ಯ ಉಳಿಸಿಕೊಂಡು ಬಂದಿದ್ದ ರಾಷ್ಟ್ರಪತಿ ಚುನಾವಣೆಯೂ ಈ ಬಾರಿ ಮಲಿನಗೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಜೊತೆಗೆ, ಹಾಲಿ ರಾಷ್ಟ್ರಪತಿ ಕಲಾಂ ಅವರು ಮೊದಲು ತಾವು ಎರಡನೇ ಅವಧಿಗೆ ಅಭ್ಯರ್ಥಿಯಲ್ಲ ಎಂದು ಘೋಷಿಸಿ, ನಂತರ ಗೆಲುವು ಖಚಿತವಾದರೆ ಸ್ಪರ್ಧಿಸಲು ಸಿದ್ಧ ಎಂಬ ಸಮಯ ಸಾಧಕ ಹೇಳಿಕೆ ನೀಡಿ, ವಾತಾವರಣವನ್ನು ಹದಗೆಡಿಸುವಲ್ಲಿ ತಮ್ಮ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ! ಹಾಗೆ ನೋಡಿದರೆ, ರಾಷ್ಟ್ರಪತಿ ಸ್ಥಾನಕ್ಕೆ ಈ ಚುನಾವಣೆಗಿಂತ ತುರುಸಿನ ಸ್ಪರ್ಧೆ ಈ ಹಿಂದೆ ನಡೆದಿದೆಯಾದರೂ - 1967ರಲ್ಲಿ ಝಕೀರ್ ಹುಸೇನರ ವಿರುದ್ಧ ಸುಬ್ಬರಾವ್ ಹಾಗೂ 1969ರಲ್ಲಿ ಸಂಜೀವ ರೆಡ್ಡಿಯವರ ವಿರುದ್ಧ ವಿ.ವಿ.ಗಿರಿ - ಈ ಬಾರಿಯಷ್ಟು ಜಿಗುಪ್ಸೆಕರ ಪ್ರಚಾರ ಎಂದೂ ನಡೆದಿರಲಿಲ್ಲ. ಆಡಳಿತ ಅದಕ್ಷತೆ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಹಿಡಿದು ವ್ಯಭಿಚಾರದವರೆಗೆ ಅನೇಕ ರೀತಿಯ ಆಪಾದನೆಗಳು ಈ ಪ್ರಚಾರದಲ್ಲಿ ಸೇರಿಕೊಂಡು; ಯಾರೇ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿ, ಅವರನ್ನು ರಾಷ್ಟ್ರ ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ನಮ್ಮ ರಾಜಕೀಯ ಪಕ್ಷಗಳು ಸೃಷ್ಟಿಸಿವೆ.

ಭೀಮಸೇನ ಜೋಷಿ: ನೆನಪಾದದ್ದು

ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು.

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

Saw this compact and wonderful post ..

...... authored by Pratap Simha, Vijaya karnataka

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ್ಬರೊಡನೆ ಹರಟೆ ಶುರುವಾಯಿತು. ಅದೂ ಇದೂ ಮಾತನಾಡುತ್ತಾ ಕೊನೆಗೆ ವಿಷಯ ಡಾ.ರಾಜ್ ಬಗ್ಗೆ ತಿರುಗಿತು. ಇದ್ದಕ್ಕಿದ್ದಂತೆ ಆ ವ್ಯಕ್ತಿ " ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇ ಏನಲ್ಲಾ ಬಿಡ್ರಿ. ಎಷ್ಟೋ ಜನ ಸಾಹಿತಿಗಳೂ ಕವಿಗಳೂ ಕನ್ನಡಕ್ಕಾಗಿ ದುಡಿದಿರುವಾಗ ಕೇವಲ ರಾಜ್‍ಕುಮಾರ್ ಹೆಸರನ್ನ ಹೇಳುವುದು ಅನ್ಯಾಯವಲ್ಲವಾ? ಅಷ್ಟಕ್ಕೂ ರಾಜ್‍ಕುಮಾರ್ ಕನ್ನಡಕ್ಕಾಗಿ ಏನು ತಾನೇ ಮಾಡಿದ್ದಾರೆ? " ಎಂಡುಬಿಡಬೇಕಾ.

ಇಂಗ್ಲೀಷಿಗೆ ಪುರಂದರದಾಸರು! -ಹೊಸ ಬ್ಲಾಗ್

ಕರ್ನಾಟಕ ಸಂಗೀತದಲ್ಲಿ ಮತ್ತು ನೃತ್ಯಗಳಲ್ಲಿ ದಾಸರ ಅನೇಕ ಕನ್ನಡ ಕೀರ್ತನೆಗಳನ್ನು ಹಾಡುತ್ತಾರೆ . ಕನ್ನಡದಲ್ಲದವರಿಗೆ ಅವುಗಳ ಅರ್ಥ ಗೊತ್ತಿರುವದಿಲ್ಲ . ಈ ಕೃತಿಗಳ ಅರ್ಥ ಅವರಿಗೆ ತಿಳಿದಲ್ಲಿ ಕನ್ನಡದ ಬಗ್ಗೆ ಅವರ ಭಾವನೆ ಇನ್ನಷ್ಟು ಒಳ್ಳೆಯದಾಗಬಹುದಲ್ಲವೇ ? ಇಂಗ್ಲೀಷಿನಲ್ಲಿ ಅನುವಾದಗಳಿವೆಯೇ ?

ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!

ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ  ಆಯ್ಕೆಯಾಗಿದ್ದರು.  ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದರು.  ಸ್ಥಳೀಯ ಶಾಸಕನೆಂದು ಯಾವ ರಿಯಾಯಿತಿಯನ್ನೂ ಆತ ಅಪೇಕ್ಷಿಸಲಿಲ್ಲ.  ತಮಗೆ ಶಾಸಕನಾಗಿ ದೊರಕುವ ರೂ.950/ (ಈಗಿನ ಶಾಸಕರಿಗ

ಹನೀಫ್ ಎಂಬ ಮೂಡಿಗೆರೆ ಹುಡುಗ

ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್' ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಗಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್‍ ಮುಂದೆ ಬಂದು "ನಾನೇ ಮಾಧ್ಯಮಕ್ಕೆ ಕೊಟ್ಟಿದ್ದು. ಆ ಸಂದರ್ಶನ ಪೋಲೀಸರ ಆಸ್ತಿಯಾಗಿರುವಷ್ಟೇ ತನ್ನ ಕ್ಲೈಂಟಿಗೂ ಸೇರಿದ್ದು. ನಾನು ತಪ್ಪು ಮಾಡಿದ್ದರೆ, ಬಂದು ಹಿಡಿದುಕೊಂಡು ಹೋಗಿ" ಎಂದು ಪ್ರಧಾನಿ, ಅಟರ್ನಿ-ಜನರಲ್ ಆದಿಯಾಗಿ ಎಲ್ಲರನ್ನೂ ಹೆಸರಿಸಿ ಸವಾಲೆಸದ. ಗಪ್‌ಚಿಪ್.