ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಗ್ಗೋಡಿನ ಹಾದಿಯಲ್ಲಿ

ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. 

ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?

ಅಕ್ಟೋಬರ್ ೩ ರ ನಂತರ

ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ

ನಂತರ ಮಂತ್ರಿಮಂಡಲ ರಚನೆ ಪರದಾಟ

ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ

ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ

ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ

ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ.

ರಾಮನಗರ: ಕೋಟಿಗಟ್ಟಲೆ ಅಭಿವೃದ್ದಿ ಜೆ ಡಿ ಎಸ್- ಬಿ ಜೆ ಪಿ ನಡುವೆ ಪೈಪೋಟಿ

ರಾಮನಗರ ತನ್ನ ನಗರಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆ ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಕಾಮಗಾರಿಗಳ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ಶ್ರಮವೆಂದು ಹೇಳಿಕೊಳ್ಳಲಾರಂಭಿಸಿದ್ದಾರೆ.

ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!

ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ. ಓದಿ ಆ ವಿವರ ವಿಚಿತ್ರಾನ್ನದಲ್ಲಿ ಈ ವಾರ. ಶ್ರೀವತ್ಸ ಜೋಶಿ ..ವಿಚಿತ್ರಾನ್ನ

ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ!

ವಿಚಿತ್ರಾನ್ನ....ಶೀವತ್ಸ ಜೋಷಿ

ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು. ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ, ತಾಜಾ ತಾಜಾ ವಿಚಿತ್ರಾನ್ನ ಒಂದು ಮುಷ್ಟಿ!

 

ಕನ್ನಡಕ್ಕೆ ದಿಕ್ಕಿಲ್ಲವೆ?!!

೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ?

ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು ಇವೆಯೆ? ಇದ್ದರೆ ಅವು ಏನು?

ಬಲ್ಲವರು ತಿಳಿಸಿಕೊಡಬೇಕು.

DLI ತಾಣ ಎಟುಕುತ್ತಿಲ್ಲ..

ಸುಮಾರು ಒಂದು ತಿಂಗಳಿನಿಂದ ನನಗೆ DLI ತಾಣ ಎಟುಕುತ್ತಿಲ್ಲ..

ಈ ಕೆಳಗಿನಂತೆ ಉಲಿಯುತ್ತಿದೆ ಈ ತಾಣ..
The page is currently unavailable
Due to current high demand, the page you are looking for cannot be delivered right now.

ನಿಮಗೂ ಹೀಗೆಯೇ ಬರುತ್ತಿರುವುದೋ..?

ಏನನ್ನೂ ಕಲಿಸದ ಇಂದಿನ ಕನ್ನಡ ಚಿತ್ರಗಳು...


ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!