ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಿನ್ನಹ

ಬೆಳದಿಂಗಳ ಹಂಬಲದ ನಾನು,
ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆ
ಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ?

 

ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ ಬಾನ ಚಂದಿರನ
ಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,
ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ?

 

ಕಾಟು ಎಂದರೇನು?

ಮಂಗಳೂರಲ್ಲಿ ಕಾಟು ಎನ್ನುವ ಪದ ಬಳಕೆಯಲ್ಲಿದೆ.
ಗಿಡಗಳಿಗೆ, ಪ್ರಾಣಿಗಳಿಗೆ ಅನ್ವಯಿಸಿ ಕಾಟು ಎಂದರೆ ಕಸಿಯಲ್ಲದ ತಳಿ ಎಂದರ್ಥ.
ಉಪ್ಪಿನಕಾಯಿಗೆ ಉಪಯೋಗಿಸುವ ಮಾವು ಕಾಟು ಮಾವಿನ ಮರದ್ದೇ ಆಗಬೇಕು.
ನಾಯಿಗಳು, ದನಗಳ ಊರ ತಳಿಗಳು ಕಾಟು ತಳಿ.
ಸಾಮಾನ್ಯವಾಗಿ ಈ ಶಬ್ದ ಬಯ್ಗಳ ಪದವಾಗಿ ಬಳಕೆಯಲ್ಲಿದೆ.
ಶಬ್ದವನ್ನು ನಿಕೃಷ್ಟ ಭಾವನೆಯಿಂದ ಬಳಸುವುದು ರೂಢಿ.

ಗೌಡರು ಮತ್ತು ಕರಾವಳಿ

ದೇವೇಗೌಡರು ಮತ್ತು ಕುಮಾರಸ್ವಾಮಿಗಳಿಗೆ ಕರಾವಳಿ ಅದೃಷ್ಟ ತಂದಿದೆಯೇ ಅಲ್ಲ ದುರದೃಷ್ಟವನ್ನೇ? ಪಿ.ಮಹಮ್ಮದ್ "ಪ್ರಜಾವಾಣಿ"ಯಲ್ಲಿ ಕಾರ್ಟೂನ್ ಮೂಲಕ ತೋರಿಸಿದ್ದಾರೆ. ನೋಡಿಬಿಡಿ:
http://prajavani.net/UserFiles/Image/Jun72007/CartoonLarge.jpg

ಮಾಧವ ನೆಲೆ...

ಮಾಧವ ನೆಲೆ. ಇದು ಮಾಧವನ ನೆಲೆಯೇ. ಶಿವಮೊಗ್ಗದ ಸೋಮಯ್ಯ ಬಂಗ್ಲೆಯಲ್ಲಿರುವ ಈ ‘ನೆಲೆ’ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ. ಈಗ ಇದಕ್ಕೆ ಒಂದು ವರ್ಷದ ಸಂಭ್ರಮ.

ಸವಾಲು

ಹೇಳೊ ಹುಡುಗಾ-
ಒಣಗನಸಿನ ಬಣವೆಯಲ್ಲಿ
ಹುಡುಕುವೆಯಾ ಕಳೆದ ಹಸಿರು?

ಇಲ್ಲಿ ಉತ್ತರಕ್ಕೆ ತಿರುಗಿ
ಕಾದ ಸೂಜಿ
ಗಲ್ಲು ಮನಸು!

ಸುಭಾಷಿತ

ಹುಡುಗಿ ವರಿಸುವುದು ರೂಪವನು, ಆಕೆಯ ತಾಯಿ ಹಣವನು, ತಂದೆ ಕೀರ್ತಿಯನು |

ನೆಂಟರಿಚ್ಛಿಸುವರು ಕುಲವನು ಇತರರು ಸುಭೋಜನವನು ||

"ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ

ನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ!

ಆಕಿ ನನ್ನಾಕಿ...

ತಾನು ತಂಗಳು ತಿಂದು
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;

ತನ್ನ ಬದುಕ ನಮಗಾಗಿ ಮೀಸಲಿಟ್ಟು
ಪ್ರೀತಿಯ ಧಾರೆಯೆರೆದಾಕಿ
ಆಕಿ ನನ್ನಾಕಿ;

ತನಗೆ ಚಳಿಯಾದರೆ
ನನಗೆ ಚಾದರ ಹೊದಿಸಿದಾಕಿ
ಆಕಿ ನನ್ನಾಕಿ;

ಸಕಲ ವಿಕೋಪಗಳ
ಧರೆಯ ಹಾಗೆ
ಸಹಿಸಿಕೊಂಡಾಕಿ
ಕ್ಷಮೆಯಾ ಧರಿತ್ರಿ
ಆಕಿ ನನ್ನಾಕಿ;