ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀಪ

ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ.

ಚುಟುಕಗಳು

ಬದುಕಿರಲು ಹಿತವಾಗಬೇಕು
ಮೂರು ಜನಕೆ
ಮಡಿದರೆ ನೆನೆವರು
ನೂರು ಜನರು ನಿನ್ನ ಕಾಣಾ ಭರತೇಶ

---

ಹುಟ್ಟು .......ಸಾವು
ನಡುವೆ ಬಾಳಿನ ನೋವು
ಆಗಾಗ ನಲಿವು
ಇದುವೆ ನಮ್ಮ ಬದುಕು
----

ಬಾಳಿದು ಓಟ
ಆಡುವೆ ಆಟ
ಇರುವತನಕ ಘಟ
ಕೊನೆಗಾಗುವೆ ಮಟ(ಟ್ಟ)
---

ಹನಿ ಹನಿ ಪ್ರೇಮ್ ಕಹಾನಿ....

ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ.

ನಾನೂ ಡಾಕ್ಟ್ರಾದೆ

ಈವತ್ತು ನಾನು ಇಂಜಕ್ಷನ್ ಕೊಡುವ ಸುರುವಿನ ದಿನ.ನಾನೆಷ್ಟು ಒಳ್ಳೆಯವಳು ಎಂದರೆ,ಬೆಳಗ್ಗೆ ಬೇಗನೆ ಎದ್ದು,ಸ್ನಾನ ಮಾಡಿ,ದೇವರಿಗೆ ಕೈಮುಗಿದು,`ಈ ಇಂಜಕ್ಷನ್ ಕೊಡುವುದು ಆದಷ್ಟೂ ತಪ್ಪಿ,ಮಾತ್ರೆಯಲ್ಲೇ ರೋಗ ಗುಣವಾಗುವಂತೆ ಮಾಡಪ್ಪಾ' ಎಂದು ಬೇಡಿದೆ.
ನಂತರ ಸ್ಪಿರಿಟ್,ಸಿರಿಂಜ್,ಹತ್ತಿ,ಔಷಧಿ ಎಲ್ಲಾ ರೆಡಿಮಾಡಿಟ್ಟೆ.ತೊಡೆಯ ಬಟ್ಟೆ ಸರಿಸಿ,ಹತ್ತಿಯಿಂದ ಒರಸಿ,ಸೂಜಿಯನ್ನು ತೊಡೆಯ ಬಳಿ ತೆಗೆದುಕೊಂಡು ಹೋದೆನಷ್ಟೆ,ಕರೆಂಟ್ ಹೊಡೆದ ಹಾಗೆ ಕೈ ವಿಪರೀತ ನಡುಗಲು ಸುರುವಾಯಿತು.ಮೈಯೆಲ್ಲಾ ಬೆವರಿ ಹಣೆಯಿಂದ ಬೆವರು ತೊಟ್ಟಿಕ್ಕಲು ಸುರುವಾಯಿತು.Fan ಹಾಕುತ್ತೇನೆಂದು ನೋಡಿದರೆ ಅದು ತಿರುಗುತ್ತಲೇ ಇದೆ.ಸೆಕೆಯೇ ಇಲ್ಲದ ಸಮಯದಲ್ಲಿ fan ನ ಅಡಿಯಲ್ಲಿದ್ದೂ, ಬರೀ ಒಂದು ಸೂಜಿಗೆ ನಾನು ಇಷ್ಟು ಬೆವರಿ ನಡುಗುತ್ತಿರಬೇಕಾದರೆ,ಆ ಭೀಮ, ಅವನ ಗಧೆ,ಅವನ ಗರ್ಜನೆಗೆ ದುರ್ಯೋಧನ`ನೀರೊಳಗಿರ್ದುಂ ಬೆಮರ್ತಮ್'ಅನ್ನೋದರಲ್ಲಿ ಅತಿಶಯವೇನಿಲ್ಲ ..
ಸೂಜಿ ಚರ್ಮದ ಮೇಲಿಟ್ಟು ಎಷ್ಟು ಒತ್ತಿದರೂ ಒಳಗೇ ಹೋಗುತ್ತಿಲ್ಲಾ! INsulinನಲ್ಲಿ ಎರಡೆರಡು IN ಇದೆ.ಇಲ್ಲಿ ನೋಡಿದರೆ ಒಂದು ಸಲಕ್ಕೂ ಔಷಧಿ ಇನ್ನಾಗುತ್ತಿಲ್ಲಾ! ದುಃಖದಿಂದ ಮಂಜಾದ ಕಣ್ಣನ್ನು ಒರಸಿಕೊಂಡು ನೋಡಿದರೆ ಸುತ್ತಲೂ ಮನೆಮಂದಿಯೆಲ್ಲಾ ಮುಸುಮುಸು ನಗುತ್ತಾ ನಿಂತಿದ್ದಾರೆ.ಬೇಸರ,ಸಿಟ್ಟು,ದುಃಖ ಎಲ್ಲಾ ಒಟ್ಟೊಟ್ಟಿಗೆ ಬಂತು.ಕೆಳಗೆ ನೋಡಿದರೆ ಸೂಜಿ ಚರ್ಮದೊಳಗೆ ಹೋಗಿದೆ.ಅಳುತ್ತಾನಗುತ್ತಾ ಇಂಜಕ್ಷನ್ ಕೊಟ್ಟುಕೊಂಡೆ.ಓದಿಲ್ಲದಿದ್ದರೂ ಮಕ್ಕಳ ಬಾಯಲ್ಲಿ ಡಾಕ್ಟ್ರಾದೆ!

ನಿಜಜೀವನದಲ್ಲಿ ಹಾಸ್ಯ: ಮೊನ್ನೆ ತಾನೇ ....

ನಾಲ್ಕು ಮಂದಿ ಫ್ರೆಂಡ್ಸು ( ಹೌದು ಇದು ಈಗ ಕನ್ನಡ!) ಮಾತಾಡ್ತಾ ಕೂತಿದ್ರು ...
ಆವಾಗ ಒಬ್ಬ ’ಅಂದ ಹಾಗೆ ಗೊತ್ತೇನ್ರೋ ... ನಂ ಪ್ರಕಾಶಂಗೆ ಗಂಡ್ ಮಗು ಆಗಿದೆ ’ ಅಂತ ಅಂದ್ರೆ
ಇನ್ನೊಬ್ಬ ತಕ್ಷಣ ’ ಮೊನ್ನೆ ಮೊನ್ನೆ ಮದ್ವೆ ಆಗಿತ್ತಲ್ಲೇನೋ ಅವಂದು? ’ ಅಂದ್ಬಿಟ್ಟು
ಆಮೇಲೆ ತಾನಾಡಿದ ಮಾತಿನ ಅರ್ಥ ಆಗಿ ಪೆಚ್ಚು ಪೆಚ್ಚಾಗಿ ನಗ್ಬೇಕೇ ?

ನೀನಾಸಮ್ ಸಂಸ್ಕೃತಿ ಶಿಬಿರ

ಸ್ಥಳ: ಹೆಗ್ಗೋಡು.

ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದ ಜತೆ ಸಂಸ್ಕೃತಿಯ ಸಂಬಂಧ - ಈ ವಿಷಯಗಳ ಬಗ್ಗೆ ಕನ್ನಡ ಹಾಗೂ ಹೊರನಾಡು ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿ ದಿನ ಸಂಜೆ ನಾಟಕ, ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಉತ್ಸವ ನಡೆಯಲಿದೆ.

ಶುಲ್ಕ: ರೂ ೧೦೦೦
(ಊಟ, ಡಾರ್ಮ್ಸ್ ವಸತಿ ಸೇರಿ)

ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರಿಗೆ ವಿಶೇಷ ಆದ್ಯತೆ ಇರುತ್ತದೆ.
ಅಭ್ಯರ್ಥಿ ಪತ್ರವನ್ನು ಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ ೨೫

ನೀನಾಸಮ್ ಸಂಸ್ಕೃತಿ ಶಿಬಿರ,
ಹೆಗ್ಗೋಡು,
ಸಾಗರ - ೫೭೭೪೧೭

ವಾಟಾಳ್ ಆಸ್ತಿ

ವಾಟಾಳ್ ಕನ್ನಡಕ್ಕೆ ಜೈ ಅನ್ನುತ ಮಡಿದರು ನೂರೆಂಟು ಎಕರೆ ಭೂಮಿ, ಗ್ರಾಂ ಗಟಲೆ ಚಿನ್ನ, ಲಕ್ಷ ಗಟಲ್ಲೆ ಹಣ. ಪಾಪ ಕನ್ನಡದ ಗತಿ ಮಾತ್ರ ಇನ್ನು ಸುದಾರಿಸಿಲ್ಲ. ಸುದಾರಿಸದಿದರಲ್ಲವೆ ತಮಟೆ ಬಡಿದು ಎಮ್ಮೆ ಮೇಲೆ ಸವಾರಿ ಮಾಡಿ ಪತ್ರಿಕೆ ಮುಖಪುಟದಲ್ಲಿ ಸುದ್ದಿ ಆಗೊದು. ಜೈ ಕರ್ನಾಟಕ (ನಾಟಕ!!) :)

http://www.prajavani.net/Content/Aug292007/state2007082943586.asp?section=updatenews

ಅವನಿಲ್ಲ

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾನು ಎಂಟು ವರ್ಷ ಹಿಂದೆ, ಇದೇ ದಿನ, ಮುಂಜಾನೆ ಬಂದ ಆ ಘೋರ ದೂರವಾಣಿ ಕರೆಯನ್ನೂ ಎಂದೆಂದಿಗೂ ಮರೆಯಲಾರೆ.

ಅವನು ಇದ್ದಿದ್ದು ಒಂದು ಚಿಕ್ಕ ಊರಿನಲ್ಲಿ. ಚಿಕ್ಕ ಊರೆಂದರೆ, ಸಣ್ಣ ಹಳ್ಳಿಯೂ ಅಲ್ಲ, ಭಾರೀ ನಗರವೂ ಅಲ್ಲ - ಆ ರೀತಿಯ ನಡುವಿನ ಮಟ್ಟದ ಒಂದು ಪಟ್ಟಣ. ಅಲ್ಲಿಗೊಂದು ಒಳ್ಳೇ ಶಾಲೆ. ಆ ಊರಿಗೆ ಬಂದಾಗ ಅವನು ಮೂರನೆಯದೋ-ನಾಕನೆಯದೋ ತರಗತಿಯರಲ್ಲಿ ಇದ್ದಿರಬೇಕು. ಶಾಲೆಯ ಎಲ್ಲ ಕಲಿಸುವವರಿಗೂ ಅಚ್ಚುಮೆಚ್ಚಾಗಲು ಅವನಿಗೆ ಹೆಚ್ಚೇನೂ ವೇಳೆ ಬೇಕಾಗಲಿಲ್ಲ. ತನ್ನ ಹೆಸರಿಗೆ ತಕ್ಕಂತೆ, ಎಲ್ಲರ ಮನಸ್ಸನ್ನೂ ಕದ್ದುಬಿಟ್ಟ ಅವನು. ಯಾವ ಪ್ರಬಂಧ ಸ್ಪರ್ಧೆಯಾಗಲಿ, ಚರ್ಚಾಕೂಟವಾಗಲಿ, ಅವನಿಗೆ ಬಹುಮಾನ ಅನ್ನುವುದು ಕಟ್ಟಿಟ್ಟ ಬುತ್ತಿಯೇ. ಪರೀಕ್ಷೆಗಳಲ್ಲಿ, ಬರೇ ಶಾಲೆಗೇಕೆ, ಜಿಲ್ಲೆಗೇ ಮೊದಲಿದ್ದವನು ಅವನು.

ಅವನು ನನಗಿಂತ ಎಂಟು ವರ್ಷ ದೊಡ್ಡವನು. ಚಿಕ್ಕ ವಯಸ್ಸಿಗೇ ಬಹಳ ವಿಷಯಗಳನ್ನು ಅರಿತಿದ್ದ ಅವನು, ಅದೇ ರೀತಿ ನಾನೂ ಆಗಬೇಕೆಂಬ ಬಯಕೆಯನ್ನು ನನಗೆ ಗೊತ್ತೊಲ್ಲದೇ ಮೂಡಿಸಿದ್ದ. ಲೈಬ್ರರಿಗೆ ತಾನು ಹೋಗುವಾಗ ನನ್ನನ್ನೂ ಕರೆದೊಯ್ದು, ನನ್ನ ಮುಂದೆ ಪುಸ್ತಕಗಳನ್ನು ಹಾಕಿ ಓದಲು ಹೇಳುತ್ತಿದ್ದ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವನು ಅನ್ನೋದು ನನ್ನ ನೆನಪು. ಅವನ ಜೊತೆ ನಾನು ಹೋಗುತ್ತಿದ್ದರೆ, ನನಗೆ ಎಲ್ಲರೂ ನನ್ನನ್ನೇ ನೋಡ್ತಾ ಇದ್ದಾರೆ, ಅನ್ನೋ ಅನಿಸಿಕೆ. ನಾನು ಆ ಶಾಲೆಯೆ ಸೇರಿದ ವರ್ಷ ಅವನು ಆ ಶಾಲೆಯಿಂದ ಹೊರಬಿದ್ದ. ಅದೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದು. ಹಾಗಾಗಿ, ನಾನು, ಅವನು ಒಂದು ಶಾಲೆಯಲ್ಲಿ ಯಾವತ್ತೂ ಹೋಗಿದ್ದೇ ಇಲ್ಲ. ಹಾಗಿದ್ದ್ರೂ, ಎಷ್ಟೋ ಜನ ಕಲಿಸುವವರು ಅವನ ಬಗ್ಗೆ ನನ್ನಲ್ಲಿ ವಿಚಾರಿಸಿಕೊಳ್ಳುವವರೇ. ಶಾಲೆಯಲ್ಲಿ ನನಗೆ ಅಂತ ಒಂದು ವ್ಯಕ್ತಿತ್ವ, ಬರುವ ವೇಳೆಗೆ, ಅವನು ಮೊದಲ, ಎರಡನೆ ಪ್ರಿಯೂನಿವರ್ಸಿಟಿ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೇ ಹತ್ತರೊಳಗೇ ಬಂದು ಹೆತ್ತವರಿಗೆ ಹೆಮ್ಮೆ ತಂದ. ಎಲ್ಲ ಪತ್ರಿಕೆಗಳಲ್ಲೂ ಅವನ ಚಿತ್ರ. ಆದರೂ, ಹಮ್ಮು -ಬಿಮ್ಮಿಲ್ಲದ ಸ್ವಭಾವ ಅವನದು. ತನಗೇನು ಗೊತ್ತು ಅನ್ನುವುದನ್ನು ವಾಚ್ಯವಾಗಿ ತೋರಿಸಿಕೊಳ್ಳದೆಯೇ, ಅದರ ಅನುಭವ ಮಾತ್ರ ಮಾಡಿಸುವ ಅವನ ಗುಣ ಹಲವರಲ್ಲಿ ಕಾಣಸಿಗದು.

ಗೆಳೆಯ

ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.