ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಧ್ಯರಾತ್ರಿಯ ಹರಟೆಗಳು

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!

ಹೇಳಿ ಹೋಗೋ ಕಾರಣ...???

  [ನನಗನ್ನಿಸಿದ್ದು]: ಹೇಳಿ ಹೋಗೋ ಕಾರಣ....?

 ದಿನ ಬೆಳಗಾದ್ರೆ ಎ೦ದಿನ೦ತೆ ಎದ್ದೇಳ್ತೀವಿ, ಕಣ್ಣರೆಪ್ಪೆ ಮುಚ್ಚಿ ತೆಗೆಯೋದು ಗೊತ್ತಾಗದ ಹಾಗೆ ತಯಾರಾಗಿ ಕೆಲಸಕ್ಕೆ ಹೋಗೋವಾಗ, ಮನೆಯಲ್ಲಿರೋರಿಗೆ ಹೋಗಿ ಬರ್ತೀನಿ ಅ೦ತ ಭರವಸೆ ಕೊಟ್ಟು ಹೊರಡ್ತೀವಿ. ಆ ಭರವಸೆಯನ್ನ ಎಷ್ಟರಮಟ್ಟಿಗೆ ಉಳಿಸಿಕೊಳ್ತೀವಿ ಅನ್ನೋ ಭರವಸೆ ನಮ್ಮಲ್ಲಿ ಇಲ್ಲದ ಹಾಗೆ ಮಾಡಿದೆ ಈಗಿನ ಬೆ೦ಗಳೂರಿನ ಪರಿಸ್ಠಿತಿ.

ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?

ಇದು ನಾನು ಬಹಳ ಹಿಂದೆ ಓದಿ ಇಂದಿಗೂ ನೆನಪಿನಲ್ಲುಳಿದ , ಅ.ರಾ.ಸೇ ಅವರ ಒಂದು ಹಾಸ್ಯ ಲೇಖನ.

ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದೆ. ಅಲ್ಲೊಬ್ಬ ಸಂಗೀತಾಭಿಮಾನಿ. ಅವನು ಈ ಕಾರಿನ ಪ್ರಯಾಣಿಕರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತಾನೆ. ತಿಂಡಿ, ವಿಶ್ರಾಂಟಿ , ಕಾರು ರಿಪೇರಿ ಇತ್ಯಾದಿ . ಕೊನೆಗೆ ಅವರು ಹೊರಡುವ ವೇಳೆ ಅವರ ಕಿವಿಗೆ ಬೀಳುವಂತೆ ಸಣ್ಣ ದನಿಯಲ್ಲಿ ಸಂಗೀತದ ಸಣ್ಣ ಆಲಾಪ ಮಾಡುತ್ತಾನೆ. ಪ್ರಯಾಣಿಕರು ಅದನ್ನು ಕೇಳಿ ಇವನತ್ತ ಹೊರಳಿ ನಂತರ ತಮ್ಮತಮ್ಮಲ್ಲಿ ಕಣ್ಣೋಟಗಳ ವಿನಿಮಯ ಮಾಡಿಕೊಂಡು ' ನಿಮಗೆ ನಂತರ ಪತ್ರ ಬರೆಯುತ್ತೇವೆ' ಎಂದು ಹೇಳಿ ಹೊರಡುತ್ತಾರೆ.

ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ

ಎಲ್ಲರಿಗೂ ನಮಸ್ಕಾರ,

ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.

ಬದುಕೆಂಬ ಬದುಕು

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ

ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು

ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು

ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು

MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು

ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು

ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು

ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು

ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು

ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿ? - ಕನ್ನಡಪದ ಸೂಚಿಸಿ.

ಗೆಳೆಯರೇ ,

ನೋಡಿ http://sampada.net/forum/312

ಸದ್ಯ ಸಂಪದದಲ್ಲಿ ಲೀನಕ್ಸ್ ಆಧಾರಿತ ತಂತ್ರಾಂಶವನ್ನು ಕನ್ನಡಕ್ಕೆ ಅಳವದಿಸಲು ಕೆಲವು ಪದಗುಂಪುಗಳನ್ನು ಅನುವಾದ ಮಾಡುತ್ತಿರುವೆ. ಅಂದರೆ ಒಂದು ದಿನ ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿದ್ದು , ಗಣಕಯಂತ್ರವನ್ನು ಬಳಸಲು ಇಂಗ್ಲೀಷ್ ತಿಳಿದಿರಬೇಕಿಲ್ಲ . ಈ ದಿನವನ್ನು ನಾವೂ ನೀವೂ ಬೇಗನೆ ನೋಡುವಂತಾಗಲು http://kannada.sampada.net ನೋಡಿ ನೀವೂ ಕೈಜೋಡಿಸಬಹುದು.

ಗಣಪತಿ ವಿಸರ್ಜನೆ ನಾಳೆ !

"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ ಬಂದು ನಮ್ಮನ್ನು ಹರಸು ಎಂದು ಮಾತ್ರ !

ಸಿಂಗಪುರದ ಬಗ್ಗೆ ಒಂದು ಸಿಲ್ಲಿ ಲೇಖನ

ನನಗೆ ಇದ್ದಕ್ಕೆ ಇದ್ದಹಾಗೆ, ಸಿಂಗಪುರದ ಬಗ್ಗೆ ಮತ್ತೊಮ್ಮೆ ಬರೆಯೋಣ ಅಂತ ಅನ್ನಿಸಿತು. ಮತ್ತೊಮ್ಮೆ ಅಂದರೆ ಈಗಾಗಲೇ ನಾನು ಸಿಂಗಪುರದ ಬಗ್ಗೆ ಬರೆದಿದ್ದೇನೆ ಅಂತ ಖಂಡಿತ ಅಲ್ಲ. ಈಗಾಗಲೇ ಇಂಟರ್-ನೆಟ್, ಟಿ.ವಿ., ಪೇಪರ್-ಗಳಲ್ಲಿ ಸಿಂಗಪುರದ ಬಗ್ಗೆ ಬಂದಿರೋ ನೂರಾರು ಲೇಖನಗಳಲ್ಲಿ ನೀವು ಒಂದೆರಡನ್ನಾದರೂ ಓದಿರುತ್ತೀರಿ ಅಂತ ನನಗೆ ಗೊತ್ತು. ಆದರೆ ಅವೆಲ್ಲ ಲೇಖನಗಳು ಅಲ್ಲಿಗೆ ೧-೨ ವಾರಗಳ ಮಟ್ಟಿಗೆ ಹೋಗಿಬಂದ ಪ್ರವಾಸಿಗಳದ್ದೋ ಅಥವ ಅಲ್ಲಿಯ ಪ್ರವಾಸೋದ್ಯಮ ಇಲಾಖೆಯವರು sponsor ಮಾಡಿ ಬರೆಸಿದ ಲೇಖನಗಳೋ ಆಗಿರುವುದರಿಂದ ಅಲ್ಲಿನ ನಿಜ ಜೀವನದ ಪರಿಚಯ ಮಾಡಿ ಕೊಡುವುದರಲ್ಲಿ ಅವು ಸೋಲುತ್ತವೆ. ಈ ಲೇಖನಗಳು, ಭಾರತಕ್ಕೆ ಬಂದು ಇಲ್ಲಿನ ಹಾವಾಡಿಗರ, ಮಾವುತರ, ಕೊಳೆಗೇರಿಗಳ ಬಗ್ಗೆ ವಿದೇಶಿಯರು ತೆಗೆಯುವ ಸಾಕ್ಷ್ಯಚಿತ್ರಗಳು ಎಷ್ಟು authentic ಆಗಿರುತ್ತವೆಯೋ, ಅಷ್ಟೆ authentic ಆಗಿರುತ್ತವೆ. ಹಲವಾರು ತಿಂಗಳು/ವರ್ಷಗಳ ಕಾಲ ಯಾವುದೇ ದೇಶದಲ್ಲಿದ್ದು ಅಲ್ಲಿನ ಜೀವನವನ್ನು ಹತ್ತಿರದಿಂದ ನೋಡುವ ಅನುಭವವೇ ಬೇರೆ. ನಾನು ಸಿಂಗಪುರದಲ್ಲಿ ೧ ವರ್ಷ ಇದ್ದೆ. ಆ ಸಮಯದಲ್ಲಿ ನಾನು ಅಲ್ಲಿ ಗಮನಿಸಿದ ಕೆಲವು 'ಅಸಾಮಾನ್ಯ' ಅಂಶಗಳ ಬಗ್ಗೆ ಈ ಲೇಖನ.

ಈ ಬರಹದಲ್ಲಿ ಕೆಲವು ಹಾಸ್ಯಮಯವಾದ, ವಿಚಿತ್ರವಾದ ವಿಶಯಗಳನ್ನು ಮಾತ್ರ ಬರೆದಿದ್ದೇನೆ. ಹಾಗಂದ ಮಾತ್ರಕ್ಕೆ ಸಿಂಗಪುರ ಇದಿಷ್ಟಕ್ಕೇ ಸೀಮಿತ ಎಂದಾಗಲಿ, ನನಗೆ ಸಿಂಗಪುರ ಹಾಗು ಅಲ್ಲಿನ ಜನರ ಮೇಲೆ ಗೌರವವಿಲ್ಲವೆಂದಾಗಲೀ ಭಾವಿಸಬೇಡಿ.
ಸಿಂಗಾಪುರಕ್ಕೆ ಹೋಗಿ ಇಳಿದ ತಕ್ಷಣ ನಿಮ್ಮ ಎರಡು ಇಂದ್ರಿಯಗಳು ಅತ್ಯಂತ ಚಕಿತವಾಗುತ್ತವೆ. ಕಣ್ಣು ಮತ್ತು ಮೂಗು! ಸ್ವಚ್ಛ ಥಳಥಳಿಸುವ ರಸ್ತೆಗಳು, ಮತ್ತು ಸುತ್ತಲಿನ ಹಸಿರು ಕಣ್ಗಳಿಗೆ ಆಶ್ಚರ್ಯ ಮತ್ತು ಸಂತೋಷ ತಂದರೆ, ಅದೇ ಕ್ಷಣದಲ್ಲೆ ನಿಮ್ಮ ಮೂಗಿಗೆ ಅಡರುವುದು seafoodನ ಮತ್ಸ್ಯಗಂಧ. ನೀವು ಮೀನು ಮಾರ್ಕೆಟ್ ಹತ್ತಿರ ಮನೆ ಇದ್ದು, ಅಲ್ಲೇ ಹುಟ್ಟಿ ಬೆಳೆದವರಾಗಿದ್ದರೆ ಪರವಾಗಿಲ್ಲ . ನಿಮಗೆ ಏನೂ ವ್ಯತ್ಯಾಸ ಗೊತ್ತಾಗದೆ ಇರಬಹುದೇನೊ. ಇನ್ನು ಅಥವ ಮೀನು ಪ್ರಿಯರೋ ಆಗಿದ್ದರಂತೂ ಬಿಡಿ. Full ಮಜ. ಇಳಿದ ತಕ್ಷಣ ಬಾಯಲ್ಲಿ ನೀರು (ಅಥವ ಹೊಟ್ಟೆ ತೊಳೆಸುವಿಕೆ). ಸಮುದ್ರದ ಮಧ್ಯದ ದ್ವೀಪವಾಗಿರುವುದರಿಂದ ಮೀನು, ಸೀಗಡಿ, ಅಕ್ಟೋಪಸ್, ಸ್ಕ್ವಿಡ್ ಮುಂತಾದ ಸಮುದ್ರದ ಚರಾಚರ ಜೀವಿಗಳೂ ಇಲ್ಲಿ ಸುಲಭ ಲಭ್ಯ. ಇದರ ಮೇಲೆ, (ಕೆಳಗ ವಿವರಿಸಿದಂತೆ) ನೀವು ಎಲ್ಲೇ ಹೋದರೂ food courtಗಳು. ಒಟ್ಟಿನಲ್ಲಿ ರಸ್ತೆಯಲ್ಲಿ, ಮನೆಯಲ್ಲಿ, ಬಸ್ಸಿನಲ್ಲಿ, ಮಾರ್ಕೆಟ್‍ನಲ್ಲಿ ಮತ್ತು of course ಹೋಟೆಲ್‍ನಲ್ಲಿ 'ಪ್ರಾಣ-ನಾತ' ! "ಎಲ್ಲೆಲ್ಲೇ ನೋಡಲಿ, ನಿನ್ನನ್ನೇ ಕಾಣುವೆ". ನೀವು ಮೀನಿನ ವಾಸನೆಗೆ ಕಟ್ಟಾ ವಿರೋಧಿಗಳಆಗಿದ್ದರೂ ಚಿಂತೆ ಬೇಡ. ಕೆಲವೇ ದಿನಗಳಲ್ಲಿ ನೀವೂ ಆ ವಾಸನೆಗೆ ಹೊಂದಿಕೊಂಡು 'ಎಲ್ಲರೋಳೊಂದಾಗು ಮಂಕುತಿಮ್ಮ' ಅಂತ ಮನಸಿನಲ್ಲೇ ಡಿ.ವೀ.ಜಿ. ಯವರನ್ನು ನಮಿಸಿ ಸುಮ್ಮನೆ ಇರುತ್ತೀರ ಅಷ್ಟೆ!!
ಊರೆಲ್ಲಾ ನಾತ ಯಾಕಪ್ಪಾ ಅಂದ್ರೆ, ಸಿಂಗಪುರದಲ್ಲಿ ಮನೆಯಲ್ಲಿ ಅಡಿಗೆ ಮಾಡುವ ಪದ್ಧತಿಯೇ ಇಲ್ಲ. ಎಲ್ಲರೂ ದಿನವೂ ಬೆಳಗ್ಗೆ, ಮಧ್ಯಾಹ್ನ ಹಾಗು ಸಂಜೆ food court ಗಳಲ್ಲಿ ನೆರೆದಿರುವುದನ್ನು ನೋಡಬಹುದು. ಹೆಚ್ಚಿನ ಎಲ್ಲ apartmentಗಳ ನೆಲ ಮಹಡಿಗಳಲ್ಲಿ food court ಇರುತ್ತದೆ. ಬಹಳ ದೂರ ಹೋಗುವ ಕೆಲಸವೂ ಇಲ್ಲ. ನಮ್ಮ ನೆರೆಯ apartmentನ ಇಡೀ ಕುಟುಂಬದ ಕಾರವಾನ್, ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಗ, ಮಗಳು ಎಲ್ಲರೂ ಸೇರಿ ದಿನಕ್ಕೆ ೩ ಸಲ ಮೆರವಣಿಗೆಯಂತೆ ೮ ಮಹಡಿಗಳನ್ನು ಹತ್ತಿ ಇಳಿಯುತ್ತಿದ್ದುದು (of course lift ನಲ್ಲಿ) ನನಗೆ ಇನ್ನೂ ನೆನೆಪಿದೆ.
ಊಟ ಮಾಡುವುದು ಸಿಂಗಪೂರಿಯನ್ನರ ಅತಿ ಮೆಚ್ಚಿನ ಹವ್ಯಾಸ. ಹಾಗಂತ ನಾನು ಮಾತ್ರ ಹೇಳುತ್ತಿಲ್ಲ, ಅವರೇ ಹೇಳಿಕೊಳ್ಲುತ್ತಾರೆ. ಮಲೆಯ್ ಭಾಷೆಯ 'ಮಾಕಾನ್' (ಊಟ/ಆಹಾರ) ಶಬ್ಧ ಉಚ್ಛರಿಸಿದ ತಕ್ಷಣ ಸಿಂಗಪೂರಿಯನ್ನರ ಮುಖದಲ್ಲಿ ಚಂದಿರ ಅರಳುತ್ತಾನೆ. ಸಿಂಗಪೂರದ demographyಯಂತೆಯೇ ಅಲ್ಲಿನ ಆಹಾರ ವೈಶಿಷ್ಟ್ಯಗಳೂ ಅಗಾಧ ವಿಸ್ತಾರ ಉಳ್ಳವು. ಚೈನೀಸ್, ಮಲಯ್, ತಮಿಳ್ ಮತ್ತು continental ಎಂಬ ಮುಖ್ಯ ಪ್ರಜಾತಿಗಳಲ್ಲದೇ ಜಪಾನ್, ಇಂಡೊನೆಷಿಯ, ಐರೋಪ್ಯ, ದೇಶಗಳ ಆಹಾರ ಕೂಡ ಎಲ್ಲ ಕಡೆಯೂ ಲಭ್ಯ. ಎಲ್ಲ ಒಕೆ ಅದೆನೋ ಯಾಕೆ ಅಂದಹಾಗೆ, ಅವರು ಏನು ಬೇಕಾದರೂ ತಿಂದುಕೊಳ್ಳಲಿ. ಆದರೆ ಆ ಬಾಯಿ ವಾಸನೆಯನ್ನು ತಡೆದುಕೊಳ್ಳುವ ಕರ್ಮ ನಮಗ್ಯಾಕೆ? ಚೀನೀ ಅಡುಗೆಗಳಲ್ಲಿ ನಾನಾ ತರಹದ sauceಗಲನು ಬಳಸುತ್ತಾರೆ. ಒಂದಕ್ಕಿಂತ ಒಂದು ದುರ್ನಾತ ಉಳ್ಳವು. ನಮಗೆ ವಾಂತಿ ಬರುವಂತೆ ಮಾಡುವ ಆ ವಸ್ತುಗಳನ್ನು ಆಹಾರ ಎಂದು ಹೇಗೆ ಒಪ್ಪಿಕೊಂಡು ತಿನ್ನುತ್ತಾರೋ ಎನೋ. ಸರಿ, ತಿನ್ನಲಿ ಬಿಡಿ, ಅವರ ಹಣೆ ಬರಹ ಅಂದುಕೊಂಡು ಸುಮ್ಮನೆ ಇರಬಹುದು. ಆದರೆ ಹಲ್ಲು ಉಜ್ಜಲು ಏನು ಧಾಡಿ ಅವರಿಗೆ? ದಂತದ ಮೈಯುಳ್ಳ, ರೇಶ್ಮೆಯ ಕೂದಲಿನ ಚೀನೀ ಲಲನೆಯೊಬ್ಬಳು ಹತ್ತಿರ ಬಂದು ಮಾತನಾಡಿಸುವುದು ಬಹಳ ಹಿತವಾದ ಅನುಭವ ಎಂದು ನೀವು ಅಂದುಕೊಂಡಿದ್ದರೆ, sorry, ನಿಮ್ಮ ವಿಚಾರ ತಪ್ಪು ಎಂದು ಹೇಳಲು ಬಹಳ ವಿಷಾದಿಸುತ್ತೇನೆ. ಅದರ ಕಷ್ಟ ಅನುಭವಿಸಿದವರಿಗೆ ಗೊತ್ತು. ನಾನು ಸಿಂಗಪುರದಿಂದ ಹಿಂತಿರುಗಿ ಬಂದಾಗ ಬಹಳ ಜನ ಅಲ್ಲೇ ಒಂದು ಸುಂದರ ಚೀನೀ ಹುಡುಗಿಯನ್ನು ನೋಡಿ ಮದುವೆಯಾಗಬಾರದಿತ್ತೇ ಎಂದು ಮಮ್ಮಲ ಮರುಗಿದವರಿದ್ದಾರೆ. ಅವರಿಗೆಲ್ಲ ನನ್ನ limitations ಈಗ ಅರ್ಥವಾಗುತ್ತವೆ ಎಂದು ಅಂದುಕೊಳ್ಳುತ್ತೇನೆ.
ಒಂದು ರೀತಿಯಲ್ಲಿ ನೋಡಿದರೆ, at least, unofficial ಆಗಿ, ಸಿಂಗಾಪುರದ ರಾಷ್ಟ್ರೀಯ ಉಡುಪು ಚಡ್ಡಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಹುಡುಗ - ಹುಡುಗಿ, ಮುದುಕ-ಮುದುಕಿ, ಗಂಡಸು-ಹೆಂಗಸು ಎಂಬ ಬೇಧಭಾವವಿಲ್ಲದೆ ಎಲ್ಲರೂ ಚಡ್ಡಿ ಧರಿಸುತ್ತಾರೆ. (ತೀರಾ formal ಸಂದರ್ಭಗಳನ್ನು ಬಿಟ್ಟು). ಇನ್ನೇನಿಲ್ಲದಿದ್ದರೂ ಈ ವಿಷಯದಲ್ಲಿ ಸಿಂಗಪುರಿಯನ್ನರು ರಾಷ್ಟ್ರೀಯ ಏಕೀಕರಣ ಸಾಧಿಸಿದ್ದಾರೆಂದು ಹೇಳಬಹುದು. ಚಡ್ಡಿಗಳೇ ಮುಖ್ಯ ಉಡುಪು ಆಗಿರುವಾಗ, ಅದರಲ್ಲೇ ಸಾವಿರಾರು ವಿಧಗಳಿರುವುದು ಏನೂ ವಿಶೇಷವಲ್ಲ ತಾನೆ? ಬಿಗಿಯಾದ, ದೊಗಳೆಯಾದ, ಬಣ್ಣ-ಬಣ್ಣದ, ಎಡವಿ ಬೀಳುವಷ್ಟು ಉದ್ದನೆಯ, ಒಳ ಉಡುಪು ಕಾಣುವಷ್ಟು ಗಿಡ್ಡವಾದ, ವಿವಿಧ ವಿನ್ಯಾಸಗಳ, strategic locationಗಳಲ್ಲಿ ಕೊಯ್ಯಲ್ಪಟ್ಟ, ಹರಿದ, ಎಂದಿಗೂ ಹರಿಯದ, ಒದ್ದೆಯಾದಂತೆ ಕಾಣುವ, ವಾಟರ್ ಪ್ರೂಫ್ ಆದ.. ಒಂದೇ ಎರಡೇ, ನೂರಾರು ವಿಧಗಳಲ್ಲಿ ಚಡ್ಡಿಗಳು. ಮತ್ತೋಂದು ವಿಶೇಷವೆಂದರೆ, ಮಹಿಳೆಯರು ಧರಿಸುವ ಚಡ್ಡಿಗಳ ಉದ್ದದ ಆಧಾರದಿಂದ ಅವರ ವಯಸ್ಸನ್ನು ಅಂದಾಜು ಮಾಡಬಹುದು. ಹಣ್ಣು ಹಣ್ಣು ಮುದುಕಿಯರು ಮೊಳಕಾಲಿನಿಂದ ಕೊಂಚ ಕೆಳಗಿನವರೆಗೂ ಬರುವ ಚಡ್ಡಿ ಧರಿಸಿದರೆ, ಇದೀಗ ತಾನೆ ಹುಟ್ಟಿರುವ ಮಗು ಏನನ್ನೂ ಧರಿಸಿರಿವುದಿಲ್ಲ. ಮಧ್ಯದ ವಯಸ್ಸುಗಳಿಗೆಲ್ಲ linear intrapolation ಮಾಡಿಕೊಳ್ಳಿ.
ಏನೇನೋ ನೋಡಿ ವಯಸ್ಸು ನಿರ್ಧರಿಸುವ ಗತಿ ನನಗೆ ಏಕೆ ಬಂತು ಅಂತ ತಿಳಿಯೋ ಕುತೂಹಲ ನಿಮಗೆ ಇದೆ ಅಂತ ನನಗೆ ಗೊತ್ತು. ವಿಷಯ ಏನಪ್ಪಾ ಎಂದರೆ, ಚೀನೀ ಮೂಲದ ಮಹಿಳೆಯರ ವಯಸ್ಸನ್ನು ಅವರ ಮುಖ ನೋಡಿ ಗೊತ್ತು ಮಾಡಿಕೊಳ್ಳಲು ನನಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಸುಮಾರು ೪೫ ವರ್ಷಗಳ ವರೆಗೂ ಯುವತಿಯರಂತೆ ಕಾಣುವ ಅವರು ಏಕಾಏಕಿ ಮುದುಕಿಯರಂತೆ ಕಾಣಲು ಪ್ರಾರಂಭಿಸುತ್ತಾರೆ. ನನಗೆ ಒಳಒಳಗೇ ಇರುವ ಅನುಮಾನದ ಪ್ರಕಾರ ೪೪ನೆ ವರ್ಷದ ಕೊನೆಯ ದಿನ ಯುವತಿಯ ರೂಪದಲ್ಲಿ ಮಲಗಲು ಹೋದ ಚೀನಿ ಮಹಿಳೆ ತನ್ನ ೪೫ನೇ ಹುಟ್ಟಿದ ಹಬ್ಬದ ದಿನ ಬೆಳಗ್ಗೆ ಎದ್ದು, ಕನ್ನಡಿಯಲ್ಲಿ ತನ್ನ ಗುರುತು ಹಿಡಿಯಲು ಬಹಳ ಕಷ್ಟ ಪಡಬೆಕಾಗುತ್ತದೆ. ಇನ್ನು ಆಕೆಯ ಗಂಡ ಮಕ್ಕಳಿಗಂತೂ ಬಾಲಾಜಿ ಟೆಲಿಫಿಲ್ಮ್ ಧಾರಾವಾಹಿಗಳಲ್ಲಿ ಆದಂತೆ ಒಂದು ಪಾತ್ರದ ನಟಿ ಬದಲಾದಂತೆ ಅನ್ನಿಸಬಹುದು. (ಸ್ವಲ್ಪ ಉತ್ಪ್ರೇಕ್ಷೆ ಅಂತ ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಚೀನೀ ಮಹಿಳೆಯರು ಅಚಾನಕ್ ಆಗಿ ವಯಸ್ಸಾದಂತೆ ಕಾಣುವುದಂತೂ ನಿಜ.)
ಸರಿ, ಒಂದು ಕೊನೆಯ ವಿಷಯ ಹೇಳಿ ಈ postನ್ನ ಮುಗಿಸ್ತಿನಿ. ಸಿಂಗಪುರದ ರಾಷ್ಟ್ರೀಯ ಹಣ್ಣು ಡ್ಯುರಿಯನ್ ಅಂತ. ನಮ್ಮ ಹಲಸಿನ ಹಣ್ಣು ಇರುತ್ತಲ್ಲ, ಅದೇ ತರಹ, ಸ್ವಲ್ಪ ಚಿಕ್ಕದು ಅಷ್ಟೆ. ಆದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋಹಾಗೆ, 3 ಇಂಚಿನ ಹಣ್ಣನ್ನು ಕೋಯ್ದರೆ, 3 ಮೈಲು ವಾಸನೆ. ಕೆಲವರು ಅದನ್ನು ಸುಗಂಧ ಎನ್ನುತ್ತಾರೆ, ಕೆಲವರು ದುರ್ಗಂಧ ಎನ್ನುತ್ತಾರೆ. ಆದರೆ, 2ನೆಯ ಗುಂಪಿಗೆ ಬಹುಮತ ಇರುವುದರಿಂದ, ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಈ ಹಣ್ಣನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ 500 $ ದಂಡ. ನಾನಂತೂ ಅದನ್ನು ತಿಂದು ನೋಡುವ ಧೈರ್ಯ ಮಾಡಲಿಲ್ಲ. ಹಾಗಾಗಿ ರುಚಿಯ ಬಗ್ಗೆ ಏನನ್ನೂ ಹೆಳಲಾರೆ. ಆದರೆ ನನ್ನ ಇಂಡೋನೇಶಿಯಾದ ಗೆಳೆಯ ಅದನ್ನು ವಾಚಾಮಗೋಚರವಾಗಿ ಹೊಗಳಿದ್ದನ್ನು ನೋಡಿ, ನೀವು ಬೇಕಾದರೆ ಒಮ್ಮೆ ತಿಂದು ನೋಡಿ ಎಂದು ಕುಮ್ಮಕ್ಕು ಕೊಟ್ಟೇನು.