ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?
ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.
ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.
ಈ ಬಸವಣ್ಣನವರ ವಚನವನ್ನು ವಿಚಾರಮಂಟಪದಿಂದ ಪಡೆದೆ.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು.
ಇತ್ತೀಚಿಗೆ ರಾಘವೇಂದ್ರ ಜೋಶಿಯವರ "ಆಜಾದಿ" ಓದಿದೆ. (ರಾಜೀವ್ ದೀಕ್ಷಿತರ ಸ್ವದೇಶೀ ಆಂದೋಲನದ ವಿಚಾರ ಧಾರೆಗಳು) ಅಂದಿನಿಂದ ನಾನು ಆದಷ್ಟೂ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸುವ ಸಂಕಲ್ಪವನ್ನು ಮಾಡಿದ್ದೇನೆ, ಪುಸ್ತಕ ಓದಿದಷ್ಟೂ ಮನಸ್ಸು ಭಾರವಾಗುತ್ತದೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ, ಮತ್ತೊಂದು ಸ್ವತಂತ್ರ ಅಂಧೋಲನ ನಡೆಯುತ್ತದೇನೋ ಅನ್ನಿಸುತ್ತದೆ.
೧)
ಬಾಳಿದರೂ ನಿನ್ನೊಡನೆ
ಬಾಡಿದರೂ ನಿನ್ನೊಡನೆ
ಒಡಲ ಹೊಕ್ಕಿ ನೋಡು
ಕಡಲ ಪ್ರೇಮ ನನ್ನಲ್ಲಿ ಉಕ್ಕುತಿದೆ
೨)
ಬದುಕಿನಲಿ ತುಳಿದಿಹೆನು
ಕೆಲವು ಹೆಜ್ಜೆ
ಅಗಾಗ ನೋಡುತ ಹಿಂದೆ
ನೊಂದೆ ಬೆಂದೆ
ಎದ್ದೆ ಬಿದ್ದೆ
ಆದರೂ ಗುರಿ ಒಂದೆ
ಸಾಗಬೇಕು ಮುಂದೆ
೩)
ಕನಸು ಕಾಣಬೇಕು
ನನಸಾಗುತ್ತದೆಯೆಂದಲ್ಲ
ಮನಸು ಹಸನಾಗುವುದೆಂಬ
ಬಯಕೆಯಿಂದ
೪)
ನೆಟ್‍ನೋಟದಲ್ಲಿ ಸುಧೀಂದ್ರ ಅವರು ಜಿ.ಪಿ.ಎಸ್. ತಂತ್ರಜ್ಞಾನ ಬಳಸಿಕೊಂಡು ಸೆಲ್‍ಪೋನಿನಲ್ಲಿ ದೊರೆಯಲಿರುವ ವಿನೂತನ ಸೇವೆಗಳ ಬಗ್ಗೆ ಕುತೂಹಲಕಾರಿ ಲೇಖನ ಬರೆದಿದ್ದಾರೆ.
ಮಾರನ ಕಣ್ಣು...
http://netnota.blogspot.com/2007/05/blog-post.html#links
ಈ ಕೆಳಗಿನ ಸಂದರ್ಭಗಳಲ್ಲಿ ಬರುವ ವಾಕ್ಯಗಳನ್ನು ಹೇಗೂ ಅರ್ಥ ಮಾಡಿಕೊಳ್ಳಬಹುದು.
೧. ಒಬ್ಬ ರಾಜ ಮಂತ್ರಿಯನ್ನು ಕರೆದು ನಿನ್ನ ಮಗಳನ್ನು ಇಂಥವರಿಗೇ ಮದುವೆ ಮಾಡಿ ಕೊಡಬೇಕು ಎಂದು ಹೇಳಿದಾಗ ಮಂತ್ರಿ ' ಮಹಾರಾಜನಿಗೆ ತನ್ನ ಮಗಳ ಮೇಲೆ ಸಂಪೂರ್ಣ ಅಧಿಕಾರವಿದೆ ' ಅನ್ನುತ್ತಾನೆ. ಇದು DLI ನಲ್ಲಿರುವ ಮಾಲತೀ ಮಾಧವ ಎಂಬ ಪುಟ್ಟ ಕಥೆಯ ಪುಸ್ತಕದಲ್ಲಿದೆ.
ಬದುಕು ಒಂದು ತಲೆಮಾರಿಗೆ, ಆದರೆ ಒಳ್ಳೆಯ ಹೆಸರು ಎಂದೆಂದಿಗೂ. - ಜಪಾನೀ ಗಾದೆ.
ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಕಲಿಸಿ, ಕನ್ನಡ ಬರೆಸಿ, ಕನ್ನಡ ಓದಿಸಿ, ಕನ್ನಡಕ್ಕಾಗಿ ದುಡಿಯಿರಿ, ಜೈ ಕನಾ೯ಟಕ ಮಾತೆ.
ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ...!!!
ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ಅವಳು, ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...
besige bantu hage ebbara atitigalu bande bittaru. Evaru bandare savira savira sankyeyelli janarannu hannugai, nirugai madi biduttare. avare kamale mattu atisara.