ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎತ್ತ ಸಾಗುತಿದೆ ಈ ಪಯಣ..!

ಅತ್ತ ಇತ್ತ ಎತ್ತೆತ್ತಲೋ ಸಾಗಿ ಹೊತ್ತು ಮಾಸುವ ಮುನ್ನ ಇತ್ತ ಬಂದೆ ಎನ್ನುವ ರಾಜಕಾರಣ ಗೌಡರದ್ದಲ್ಲ.ಅವರು ರಾಜಕೀಯದಂತಹ ರಾಜಕೀಯಕ್ಕೆ ರಾಹುಗನ್ನಡಿ ಹಿದಿದಂತೆ,ಅಂತೆ ಕಂತೆಯಾಗಿ ಮುಗಿಯದ ಕಂತು ಕಂತುಗಳ ನಾಟಕದ ಸೂತ್ರದಾರ.ಕಣ್ಣಿಗೆ ಕಾಣುವದೆಲ್ಲ ಸತ್ಯವೆಂದು ನಂಬುವುದಾದರೆ ಇವರು ಈಗ ವಾನಪ್ರಸ್ಥಾಶ್ರಮ ಸೇರಹೊರಟ ಮಹಾರಾಜ.!!!!

ರಜತೋತ್ಸವ ಭಾಗ ೪

ಭಾಗ - ೪

ಮರು ದಿನ ಅಂದರೆ ಎರಡನೆಯ ದಿನ ಕೆಲಸ ಸ್ವಲ್ಪ ಸುಲಭವಾಗಿತ್ತು. ಅಂದು ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗಿದ್ದೆವು ಮತ್ತು ಸಂಜೆ ೫ ಘಂಟೆಗೆ ಸರಿಯಾಗಿ ಕೆಲಸವೂ ಮುಗಿದಿತ್ತು.

ದೇವತೆಗಳು - ಅನಿಮೇಷರು - ಬಿಡುಗಣ್ಣರು

ನಿಮಗೆ ಗೊತ್ತಿರಬಹುದು -ದೇವತೆಗಳು ಕಣ್ಣು ಪಿಳುಕಿಸುವದಿಲ್ಲ - ಮನುಷ್ಯರ ಹಾಗೆ . ಅದಕ್ಕೆ ಅವರಿಗೆ ಸಂಸ್ಕೃತದಲ್ಲಿ ಅನಿಮೇಷ ಎನ್ನುತ್ತಾರೆ.

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಮರ್ಕಟ ಮನ

ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ.

ಆರ್ಥರ್ ಸಿ. ಕ್ಲಾರ್ಕ್‌ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ ಗುರುಗ್ರಹಕ್ಕೆ ನೌಕೆಯನ್ನು ಕಳುಹಿಸಿರುತ್ತಾರೆ. ಅದರಲ್ಲಿನ ನಾವಿಕರಲ್ಲಿ ಒಬ್ಬ, ಫ್ರ್ಯಾಂಕ್ ಪೂಲ್, ಕಾರಣಾಂತರಗಳಿಂದ ನೌಕೆಯಿಂದ ಹೊರ ಬೀಳುತ್ತಾನೆ. ಅವನ ಕಥೆ ಮುಗಿಯಿತು ಎಂದು ಎಲ್ಲರೂ ಅವನ ಕೈ ಬಿಡುತ್ತಾರೆ. ೩೦೦೧ರಲ್ಲಿ ನೆಪ್ಚೂನ್ ಗ್ರಹದ ಆಚೆ ಕೆಲಸದದಲ್ಲಿರುವ ಭೂಮಿಯ ನೌಕೆಯವರು ಅವನನ್ನು ಹಿಡಿಯುತ್ತಾರೆ. ೧೦೦೦ ವರ್ಷಗಳ ಕಾಲ ಸೂರ್ಯನ ಸುತ್ತು ಅಂತರಿಕ್ಷದಲ್ಲಿ ಸುತ್ತುತ್ತಿದ್ದರೂ ನಿದ್ರೆಯಿಂದ ಎದ್ದವನಂತೆ ಪೂಲ್ ಮಹಾಶಯ ಎಚ್ಚರವಾಗುತ್ತಾನೆ. ಅವನನು ಭೂಮಿಗೆ ಕರೆತಂದಾಗ ವೈದ್ಯರು ಪರೀಕ್ಷೆ ಮಾಡುತ್ತ ತಲೆಗೆ ತಂತುಗಳನ್ನು ಜೋಡಿಸುತ್ತಾರೆ. "ಇದೇನು, ಎಲೆಕ್ಟ್ರೋ ಎನ್ಸೆಫಲೋಗ್ರಾಮೆ?" ಎಂದು ಪೂಲ್ ಕೇಳಿದಾಗ ವೈದ್ಯನಿಗೆ ತಕ್ಷಣ ಅರ್ಥವಾಗುವುದಿಲ್ಲ. ಆಮೇಲೆ ಸಾವರಿಸಿಕೊಂಡು "ಹೌಧ್ಹೌದು, ಈಗ ಅದಕ್ಕೆ ಬ್ರೈನ್ ಸ್ಕ್ಯಾನ್ ಅಂತೀವಿ" ಎನ್ನುತ್ತಾನೆ.

ಶಿವಮೊಗ್ಗ ಪ್ರವಾಸ ಕಥನ

ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾಗೆ ಇರಲಿಲ್ಲವಲ್ಲ' ಅಂಥ compromise ಮಾಡಿಕೊಂಡಿರುವ ಹಾಗಾಗಿಬಿಡುತ್ತೆ. ನಮ್ಮ ಕಥೆ ಏನಪ್ಪ ಅಂದಿರಾ? ಸರಿಯಾದ ಸಮಯದಲ್ಲಿ, ಆತ್ಮೀಯ ಗೆಳೆಯರೊಡನೆ ಅತಿ ಹೆಚ್ಚು ಶ್ರಮ ಪಡದೆ ಪ್ರಕೃತಿಯ ಮಡಿಲಲ್ಲಿ ರೊಮಾಂಚನಗೊಳ್ಳುತ್ತ ಅದರ ಮುಂದೆ ಕುಬ್ಜರೆನ್ನಿಸುವ ಅನುಭವದಲ್ಲಿ ಬೆಂಗಳೂರಿನ ನಮ್ಮ ದೈನಂದಿನ ಜೀವನವನ್ನೂ ಅದರ ಜಂಜಾಟಗಳನ್ನೂ Complete ಆಗಿ ಮರೆತೆವು. well only for 3 days you see! ಆದ್ರೂ ಆ ಅನುಭವ ಮರೆಯೋಕ್ಕಾಗುತ್ತದೆಯೆ? No chance!! :-) ಆ ಪ್ರವಾಸದ ಕಥನ ಇಲ್ಲಿದೆ ನೋಡಿ.

ಒಳ್ಳೆಯ ಸಂಸ್ಕೃತ ಸುಭಾಷಿತಗಳು (೪-೬)

೪. ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: |
ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ: