ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾನವೀಯತೆಯ ಪ್ರತೀಕ ಮುಂಬಯಿ

(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.)
ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್ ಸ್ಟೇಷನ್ನಿನವರೆವಿಗೆ ಗಾಡಿ ಸರಿಯಾಗಿಯೇ ಚಲಿಸಿತು. ಮಹಾಲಕ್ಷ್ಮಿ ಸ್ಟೇಷನ್ನಿನ ಕಡೆಗೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆಯೇ ಟ್ರೈನ್ ನಿಂತಿತು.

ಮನೋರಮಾದಲ್ಲಿ ಕನ್ನಡದ ಸ್ಥಾನ

ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ.

ಅಂತರಾಳದ ಅರ್ಥಗಳು

ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರೆಹಿಡಿಯುವುದೂ ಸಾಗರದ ಅಲೆಗಳೊಡನೆ ಸ್ಪರ್ಧಿಸುವೂದೂ ಒಂದೇ... ಆದರೇನು! ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥೈಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ನಮ್ಮ ಆತ್ಮಶಕ್ತಿಯೆ. ಧ್ಯಾನ ಮುದ್ರೆಯಲ್ಲಿ ಆತ್ಮವು, ಸಾಗರದಾಚೆ ಏನು ಇಡೀ ಬ್ರಹ್ಮಾಂಡವನ್ನೇ ಸುತ್ತಿಬರಬಲ್ಲದೆಂಬುದು ಸಿದ್ಧಿಪಡೆದವರಿಂದ ಅನುಭವವೇದ್ಯವೇ... ಈ ವಿಚಿತ್ರ ಪ್ರಪಂಚದಲ್ಲಿ ಒಬ್ಬ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದೆಂದರೆ, ಸಾಗರತಳದಲ್ಲೋ, ಹಿಮಾಲಯದಲ್ಲೆಲ್ಲೋ ತನ್ನ ಅಂತಾರಾತ್ಮನಿಗೆ ಸರಿಯೆನಿಸುವ ಮೌಲ್ಯಗಳನ್ನು ಹೆಕ್ಕಿತೆಗೆದಂತೆಯೆ, ಇಲ್ಲ ಹುಡುಕಿ ತೆಗೆದಂತೆಯೇ ಆದೀತು!... ಇತರರ ಅಂತರಾಳದಲ್ಲೇನಿದೆ? ಎಂಬುದನ್ನು ಅರಿಯಲು ಸಾಧ್ಯವಾದರೆ ಮನುಷ್ಯ ಮನುಷ್ಯನಾಗಿಯೆ ಇರುತ್ತಿರಲಿಲ್ಲ.  ಅಷ್ಟಕ್ಕೂ, ಅಂತರಂಗ ತಿಳಿಸಿಕೊಡುವ ಮಾನವೀಯತೆನ್ನು ತಿರಸ್ಕರಿಸಿ ನಡೆದುಕೊಂಡರೆ ಅವನು ದಿಕ್ಕೆಟ್ಟು ಅಲೆಯುತ್ತಾ ಪಶುವಿಗೂ ಕಡೆಯಾಗುತ್ತಾನೆ.

*****

ಬರಹ

                           ಬರಹ

                     ಬರಹದಾ ಸರಮಾಲೆ
                     ಬರದಲ್ಲಿ ನಡೆದಿರಲು,
                     ಭಾವನೆಯ ರತ್ನಗಳ
                     ಬರಹದಾ ಬಂಗಾರ,
                     ಬರವಣಿಗೆ ಸಿಂಗಾರ
                     ಬೆರೆಸಿ ಪೊಣಿಸುತಿರುವ
                     ಅಕ್ಕಸಾಲಿಗ ನಾನು.//ಪ//.

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧

ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ.

ಬೇಂದ್ರೆಯವರ ಕವಿತೆಗಳು: ಪರಾಗ

ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು.
ಪರಾಗ
ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವೆ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೇ?

ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ
ರಂದದೊಳಡಗಿಹುದು.

ಕವನಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು. ಬಾ ಭೃಂಗವೆ, ಬಾ...

ಈ ಕವಿತೆಯನ್ನು ನುಡಿಯುತ್ತಿರುವುದು ಒಂದು ಹೂ. ತನ್ನ ಕಂಪಿನ ಮೂಲಕ ದುಂಬಿಯನ್ನು ಬಾ ಎಂದು ಕರೆಯುತ್ತಿದೆ. ದುಂಬಿ ಬಂದೆರಗಿದರೆ ಮಾತ್ರವೇ ಮತ್ತೆ ಹೊಸ ಸೃಷ್ಟಿ ಎಂದು ಹೇಳುತ್ತಿದೆ. ಕೊನೆಯ ನಾಲ್ಕು ಸಾಲುಗಳನ್ನು ನೋಡಿ. ಕವನಕೋಶ ಎಂಬ ಮಾತಿದೆ. ಅದು ಮನಸ್ಸನ್ನು ಹಿಡಿದಾಗ ಇಡೀ ಪದ್ಯವೇ ಕವಿತೆಯು ಓದುಗರನ್ನು ಕುರಿತು ನೀಡುತ್ತಿರುವ ಕರೆಯೋಲೆ ಎಂದು ಹೊಳೆಯುತ್ತದೆ. ಕವಿತೆ ಹೂವು, ಓದುಗರು ದುಂಬಿಗಳು, ಓದುಗರಿಲ್ಲದೆ ಕವಿತೆ ಸ-ಫಲವಾಗುವುದೇ ಇಲ್ಲ. ಅಥವಾ, ಓದಿದಾಗ ಮಾತ್ರ ಕವಿತೆ ಸಂಭವಿಸುತ್ತದೆ.

ವೆಲ್ಶ್ ಭಾಷೆಯಿಂದ ನಮ್ಮ ಕನ್ನಡ ಕಲಿಯಬಹುದಾದ ಪಾಠಗಳು

ಇದನ್ನ ಎಲ್ಲಿ ಪೋಸ್ಟ್ ಮಾಡಬೇಕು ಆಂತ ತಿಳಿಯದೆ ಸುದ್ದಿ ಸಮಾಚಾರ ಕೆಳಗೆ ಹಾಕಿದ್ದೇನೆ.

ಕೆಲ ದಿನಗಳಿಂದ ಕನ್ನಡದ ಪ್ರಾಬ್ಲಂಸ್ ಬಗ್ಗೆ ಓದುತ್ತಿದ್ದೀವಿ.

ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

ನನ್ನ ಅಮ್ಮನ ಲೆಕ್ಕಾಚಾರ ಸರಿಯಾಗಿದ್ದರೆ ನಾನು ಇಷ್ಟು ಹೊತ್ತಿಗೆ ಎಂಬಿಬಿಎಸ್ ಓದುತ್ತಾ ಇರಬೇಕಿತ್ತು. ಅಪ್ಪ ಹೇಳಿದಂತೆ ಕೇಳಿದ್ದರೆ ಈಗ ಕಂಪ್ಯೂಟರ್ ಸೈನ್ಸ್ ಕಲಿಯಬೇಕಿತ್ತು. ಯಾರ ಮಾತನ್ನೂ ಕೇಳದೇ ಇದ್ದುದರಿಂದ ಸಮಾಜ ಕಾರ್ಯ ಕಲಿಯುತ್ತಾ ಇದ್ದೇನೆ. ಈಗ ನಾನು ಬರೆಯಲು ಹೊರಟಿರುವ ವಿಷಯಕ್ಕೆ ಈ ವಿವರಗಳು ಎಷ್ಟರ ಮಟ್ಟಿಗೆ ಬೇಕು ಎಂಬುದು ಗೊತ್ತಿಲ್ಲ. ನನಗೆ ಮಾತ್ರ ಈ ವಿವರಗಳು ಅಗತ್ಯ ಎನಿಸುತ್ತಿವೆ.

ನೀವು ಕೇಳಿರಲಿಕ್ಕಿಲ್ಲದ ಗಾದೆಮಾತುಗಳು

ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು .
(ಕಾಯಿಲೆ) ಬಿದ್ದಾಗಿನ ಅನ್ನ ಎದ್ದಾಗ ತೆಗೆ.
ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ