ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

IIScಯ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಆವೃತ್ತಿ

ಎಲ್ಲರಿಗೂ ನಮಸ್ಕಾರ,

ಮೊನ್ನೆ ಹೀಗೆ ಅಂತರ್ಜಾಲದಲ್ಲಿ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಎಂದು ಹುಡುಕಿದಾಗ, ನನಗೆ IIIT ಹೈದರಾಬಾದು ತಾಣವೂ ಸೇರಿದಂತೆ ಬೆಂಗಳೂರಿನ IISc ತಾಣವೂ ಸಿಕ್ಕಿತು. ಸಂಪದದ ಪುಟಗಳಲ್ಲಿ ಇತ್ತೀಚೆಗೆ ಈ ವಿಷಯ ಕಂಡುಬಂದತು, ಆದ್ದರಿಂದ ಇಲ್ಲಿ ಈ ಹೊಸ ತಾಣದ ಉಲ್ಲೇಖ ಮಾಡುತ್ತಿದ್ದೇನೆ.

ನನಗೆ ತಿಳಿದ ಮಟ್ಟಿಗೆ, IIScಯ ಆವೃತ್ತಿಯಲ್ಲಿ ಹೆಚ್ಚು ಕನ್ನಡದ ಪುಸ್ತಕಗಳು ಉಂಟು.

ನೆನಪಿನಲ್ಲುಳಿದ ಚಿತ್ತಾಲರ ಕಥೆ - ಅಪಘಾತ

ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ. ಇವತ್ತು ಈ ಬಗ್ಗೆ http://kannada-kathe.blogspot.com/2007/02/blog-post.html ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ - ವಿಚಿತ್ರ ಕಥೆಯಾಗಿ , ಮಾನವ ಸಂಬಂಧಗಳ ಕುರಿತು ಅದು ಹೊಳೆಯಿಸುವ ಬದುಕಿನ ಸತ್ಯದಿಂದಾಗಿ - ನನ್ನ ನೆನಪಿನಲ್ಲಿ ಉಳಿದಿದೆ . ಅಲ್ಲಿಯ ನಾಲ್ಕು ಸಾಲನ್ನು ಅನಾಮತ್ತಾಗಿ ಇಲ್ಲಿ ಎತ್ತಿ ಹಾಕಿ , ನಾನು ಮುಂದುವರೆಸಿದ್ದೇನೆ.

ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ ---ತಪ್ಪದೆ ಕಣ್ಣಾಡಿಸಿ

ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ .

ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕೆ ಮೂರು ಕೊಂಬೆಂಬ ಹುಚ್ಚು ಹಠ ಇತ್ಯಾದಿ ಬಗ್ಗೆ ಆಕರ್ಷಕವಾಗಿ ಬರೆದಿದ್ದಾರೆ ತಪ್ಪದೆ ಕಣ್ಣಾಡಿಸಿ .

ಹೀಗೆ ನನ್ನದೂ ಒಂದು ಬ್ಲಾಗ್!

ಮಿತ್ರರೆ,

ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆಲವು ವಿಷಯಗಳ ಮೇಲೆ ಕನ್ನಡದಲ್ಲಿ ಬರೆಯಲು ಇದಕ್ಕಿಂತ ಒಳ್ಳೆಯ ಜಾಗ ಎಲ್ಲಿ ದೊರೆಯುತ್ತದೆ? ಹಾಗಾಗಿ ಬ್ಲಾಗ್ ಮಂಡಲಕ್ಕೆ ನಾನೂ ಅಧಿಕೃತವಾಗಿ ಕಾಲಿಟ್ಟಿದ್ದೇನೆ.

ಬಜೆಟ್ ೨೦೦೭ - ಡೌನ್ಲೋಡ್ ಮಾಡಿಕೊಂಡು ಓದಬಹುದು...

ಬಜೆಟ್ ಬಗ್ಗೆ ನೂರಾರು ಚ್ಯಾನಲ್ಲು ನೂರಾರು ವಿಷಯಗಳನ್ನ ನಿಮ್ಮ ತಲೆಗೆ ತುರುಕಿ ತಲೆಕೆಡಿಸಿದ್ದರೆ ಕೆಳಗಿನ ಲಿಂಕ್ ನಿಂದ ನೇರ ಈ ವರ್ಷದ ಬಜೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

[:http://indiabudget.nic.in/ub2007-08/ubmain.htm].

ಆ ಕಡೆ - ಈ ಕಡೆ ...

ಆ ಕಡೆ - ಈ ಕಡೆ

ನಮ್ಮ ನುಡಿಯ ವೈವಿಧ್ಯತೆ ಬಗ್ಗೆ ಯೋಚಿಸುತ್ತಿದ್ದೆ. ಆಗ ನನ್ನ ಅನುಭವಕ್ಕೆ ಬಂದ, ಒಂದೇ ಅರ್ಥ ಕೊಡುವ(ಹೆಚ್ಚು-ಕಡಿಮೆ) ಬೇರೆ ಬೇರೆ ಪ್ರದೇಶಗಳಲ್ಲ್ಲಿ ಬಳಕೆಯಲ್ಲಿರುವ ಪದಗಳನ್ನು ಪಟ್ಟಿ ಮಾಡಿದ್ದೆ. 

(ಪುಸ್ತಕನಿಧಿ-೧) ಎರಡನೇ ಇಯತ್ತೆಯ ಭೂಗೋಲು- ಅವಿಭಜಿತ ಧಾರವಾಡ ಜಿಲ್ಲೆಯ ಪುಸ್ತಕ

ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts
/advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ .