ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೆತ ಹಣ್ಣುಗಳು

"I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ತಿಂದ ಹಣ್ಣುಗಳಲ್ಲಿ ಎಂದಿಗೂ ಮರೆಯಲಾಗದಂಥದ್ದು, ಸ್ವಲ್ಪವಾದರೂ ಅಪರೂಪ ಎನ್ನುವವು.

ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ.

ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ.
ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ
ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು)

ಈ ಟೀವಿಯಲ್ಲಿ ಕನ್ನಡ ನಾಟಕಗಳು

ಬೆಂಗಳೂರು ( ಚಂದನ) ದೂರದರ್ಶನದಲ್ಲಿ ಆಗಾಗ ಕನ್ನಡ ಹವ್ಯಾಸಿ ನಾಟಕಗಳು ಬರುತ್ತವೆ, 'ಹೂ ಹುಡುಗಿ' ಮತ್ತು 'ಶೋಕಾಂತಿಕ' ನಾನು ಮೆಚ್ಚಿದ ನಾಟಕಗಳು. ಎಷ್ಟು ಬಾರಿಯಾದರೂ ನೋಡಬಹುದು .

ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.

ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.
'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟಾರೆ ಕೆಡಲಿ.' ದಾಸರು ಹೇಳಿರುವಂತೆ ನಾವು ಈ ಗೊಂದಲಮಯ, ಜಗತ್ತಿನಲ್ಲಿ ವಯಸ್ಸಾಗುತ್ತಿದಂತೆ, ದೇಹ, ಮನಸ್ಸು ಪಕ್ವವಾದಂತೆ, ಯಾವುದೋ ಒಂದು 'ಅಗೋಚರ ಶಕ್ತಿ' ಎಲ್ಲ ವಹಿವಾಠುಗಳನ್ನೂ ನಿಯಂತ್ರಿಸುತ್ತಿದೆ ಎಂದು ಅನ್ನಿಸುತ್ತದೆ.ಅದನ್ನು ನಂಬುತ್ತೇವೆ.

'ವಿಕೆಟ್' ಅಲ್ಲ 'ವಿಟೆಟ್' !

'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು.' ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್,' ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ ! ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (೧೮೭೮-೧೯೨೬) ಈತ ಹುಟ್ಟಿದ್ದು ಸ್ಕಾಟ್ಲ್ಯಂಡಿನ ಬ್ಲೇರ್ ಅಥೋಲ್ ನಲ್ಲಿ. ಬಾಲ್ಯದಿಂದಲೇ ನಿರ್ಮಾಣದಲ್ಲಿ ಅತೀವ ಆಸಕ್ತಿ, ಶ್ರದ್ಧೆ.