ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೇಳೂರು ಸುದರ್ಶನರಿಗೆ ಅಭಿನಂದನೆಗಳು

ಸಂಪದದಲ್ಲಿ ಸದಸ್ಯರಾಗಿರುವ [http://sampada.net/user/262|ಬೇಳೂರು ಸುದರ್ಶನ]ರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) [http://www.kannadaprabha.com/NewsItems.asp?ID=KPD20050923130652&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1|ಕನ್ನಡಪ್ರಭದಲ್ಲಿ] ಸುದ್ದಿ ಬಂದಿದೆ. ಕನ್ನಡಪ್ರಭ ಪತ್ರಿಕೆಯ ಅಂತರಜಾಲ ತಾಣದ ಒಂದು ತೊಂದರೆಯೆಂದರೆ ನಾನು ಇಲ್ಲಿ ಕೊಟ್ಟಿರುವ ಲಿಂಕ್ಅನ್ನು ನೀವು ಈ ದಿನವೇ (24/9/05) ಕ್ಲಿಕ್ ಮಾಡಿ ಓದಬೇಕು. ನಾಳೆಗೆ ಅದು ದೊರೆಯಲಾರದು. ಬೇಳೂರು ಸುದರ್ಶನ ಅವರ ಬ್ಲಾಗ್ ಸೈಟ್ [http://beluru.blogspot.com/|ಇಲ್ಲಿದೆ]. ಬೇಳೂರು ಸುದರ್ಶನ ಅವರು ವಿಜಯ ಕರ್ನಾಟಕ ಪತ್ರಿಕೆಯ ಮ್ಯಾಗಝಿನ್ ವಿಭಾಗದ ಸಂಪಾದಕರಾಗಿದ್ದಾಗ ಅವರು ನನ್ನಿಂದ [http://www.vishvakannada.com/ile/|eಳೆ] ಎಂಬ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕಾಲಂ ಬರೆಸುತ್ತಿದ್ದರು. ಅದು ತುಂಬ ಜನಪ್ರಿಯವೂ ಆಗಿತ್ತು.

ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

೬ ಸಾಗಿಸಿದ್ದು ಏನು?

ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ನಿಜ ಹೇಳುತ್ತಿದ್ದ. ಅವರು ಮೂಟೆಯ ಹುಲ್ಲನ್ನೆಲ್ಲ ಪರೀಕ್ಷಿಸುತ್ತಿದ್ದರು. ಅವನನ್ನೂ ತಪಾಸಣೆ ಮಾಡುತ್ತಿದ್ದರು. ಏನೂ ಇರುತ್ತಿರಲಿಲ್ಲ. ಮುಲ್ಲಾ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನೂ ಬಿಡಲಿಲ್ಲ. ಕೆಲವೊಮ್ಮೆ ಹುಲ್ಲನ್ನು ನೀರಲ್ಲಿ ಮುಳುಗಿಸಿ, ಹಲವೊಮ್ಮೆ ಹುಲ್ಲನ್ನು ಸುಟ್ಟು ಕೂಡ ನೋಡಿದರು. ಏನೂ ಸಿಗಲಿಲ್ಲ. ಮುಲ್ಲಾ ಮಾತ್ರ ಶ್ರೀಮಂತನಾಗುತ್ತ ನಡೆದ. ಕೆಲವು ವರ್ಷಗಳ ನಂತರ ಮುಲ್ಲಾ ಬೇರೆ ರಾಜ್ಯಕ್ಕೆ ಹೋದ. ಅಲ್ಲಿ ಹಿಂದೆ ಗಡಿಯ ಕಾವಲು ಕಾಯುತ್ತಿದ್ದ ಅಧಿಕಾರಿ ಭೇಟಿಯಾದ. “ಮುಲ್ಲಾ, ನೀನು ಆ ದೇಶದಲ್ಲಿದ್ದಾಗ ಅದೇನು ಕಳ್ಳ ಸಾಗಾಣಿಕೆ ಮಾಡುತ್ತಿದ್ದೆ? ನಾವು ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲವಲ್ಲ, ದಯವಿಟ್ಟು ಹೇಳು” ಎಂದು ಕೇಳಿದ. ಮುಲ್ಲಾ “ನಾನು ದಿನವೂ ಕತ್ತೆಗಳನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರುತ್ತಿದ್ದೆ” ಎಂದ.

ಸಂಸಾರವೇ ಮೊಬೈಲು!!

ಸಂಸಾರವೇ ಮೊಬೈಲು

ಸಂಸಾರವೆಂಬ ಮೊಬೈಲಿನಲ್ಲಿ
ಗಂಡ ಸಿಮ್ಮು
ಹೆಂಡತಿ ಕರೆನ್ಸಿ
ಇವರಿಬ್ಬರ ರೀಚಾರ್ಜಿನಿಂದ
ಗಂಡು ಹುಟ್ಟಿದರೆ ಇನ್ ‍ಕಮ್ಮಿಂಗ್
ಹೆಣ್ಣು ಹುಟ್ಟಿದರೆ ಔಟ್ ಗೋಯಿಂಗ್

ಮಾತಿನ ಹುರಿಗಾಳು, ಬೇಕಾದಷ್ಟು ಬಳಸಿ

ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್ಟು ಹುರಿಗಾಳು ಸಪ್ಲೈ ಮಾಡುತ್ತೇನೆ.

ಪತಂಜಲಿಯ ಯೋಗ ಅಂತಿಮ ಭಾಗ

ಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ.

ಹೆಚ್ ಆರ್ ಚಂದ್ರಶೇಖರರ ಕನ್ನಡ ಪುಟ

ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು [:http://www.missouri.edu/~physchan/kannada/kannada.html|ಸಂಗ್ರಹಗಳು ಓದಲು ಸಿಗುವುದು].

ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ

ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ [:http://bangla.name/citi/bhg/bhg-2-kan.htm|ಇಲ್ಲಿ ಓದಬಹುದು].

ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!

ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)