ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?
- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು.
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.
- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು.
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.
ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ. (bogaleragale.blogspot.com)
ಬೆಂಗಳೂರಿನಲ್ಲಿ ಶ್ರೀಯುತ ವಿಶ್ವೇಶ್ವರ ತೀರ್ಥ ಸ್ವಾಮಿಗಳವರು, ತಮ್ಮ ಬೆಂಬಲವನ್ನು ಸೂಚಿಸಿ ಸಹಿ ಹಾಕಿದ್ದಲ್ಲದೆ, ತಮ್ಮ ಮಠವು ನಡೆಸುತ್ತಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ತಂತ್ರಾಂಶಗಳಾದ 'ನುಡಿ' ಹಾಗೂ 'ಬರಹ'ಗಳನ್ನು ಅನುಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತಾರೆ. ಅಂತೆಯೇ, ಕ್ರಿಶ್ಚಿಯನ್ ಪಾದ್ರಿಗಳ, ಮಸಲ್ಮಾನ ಮೌಲ್ವಿಗಳ ಬೆಂಬಲವನ್ನೂ ಕೋರಲಾಗುತ್ತಿದೆ. ಕನ್ನಡಸಾಹಿತ್ಯ.ಕಾಂ ಬೆಂಬಲಿಗರು ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.
ರೈಲ್ವೇ ಇಲಾಖೆಯವರ ಉದ್ಧಟತನ ಮತ್ತೊಮ್ಮೆ ತನ್ನ ಪರಾಕಾಷ್ಠೆಯನ್ನು ತೋರಿದೆ. ಹೊಸದೊಂದು ಆದೇಶದ ಪ್ರಕಾರ ಇನ್ನುಮುಂದೆ ರೈಲಿನಲ್ಲಿ ಹಿಂದಿ ಮತ್ತೆ ಇಂಗ್ಲೀಷಿನ ಫಲಕಗಳು ಮಾತ್ರವೇ ಇರಬೇಕು.
ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ
ನಮ್ಮಲ್ಲಿ ನೀರಿಗೆ ಹೇಳಿಕೊಳ್ಳುವ ಬರವಿರದಿರಬಹುದು. ಆದರೆ ಸ್ವಚ್ಛ ನೀರಿಗೆ ಬರ ತಪ್ಪದ್ದಲ್ಲ. ಕಲುಷಿತ ನೀರಿನಿಂದ ಬರುವ ರೋಗಗಳು ಸಾವಿಗೆ ಪ್ರಧಾನ ಕಾರಣವಾಗುವುದಿದೆ. ಜನರು ಕುಡಿಯುವ ನೀರನ್ನು ಸೋಸಿ ಶುದ್ಧಗೊಳಿಸುವ ಹೀರುನಳಿಕೆಯೊಂದನ್ನು ಸ್ವಿಸ್ ಕಂಪೆನಿಯೊಂದು ಅಭಿವೃದ್ಧಿ ಪಡಸಿದೆ. ಇಂಗಾಲ ಮತ್ತಿತರ ಸಂಯುಕ್ತಗಳನ್ನು ಕೊಳವೆಯೊಂದರಲ್ಲಿ ತುಂಬಿ, ನೀರು ಕುಡಿಯುವಾಗ ಇದನ್ನು ಸ್ಟ್ರಾದಂತೆ ಬಳಸಿ, ನೀರನ್ನು ಸೋಸುವುದು ಕಂಪೆನಿಯು ಕಂಡುಹಿಡಿದ ಅಗ್ಗದ ನೀರು ಶುದ್ಧಕ. ಶೇಕಡಾ ತೊಂಭತ್ತೊಂಭತ್ತು ಬ್ಯಾಕ್ಟಿರಿಯಾಗಳನ್ನು ನಿವಾರಿಸುವ ಈ ಶೋಧಕವು ಏಳುನೂರು ಲೀಟರ್ ಸೋಸಿದ ಬಳಿಕವಷ್ಟೇ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಒಂದು ಕೊಳವೆಗೆ ನೂರೈವತ್ತು ರೂಪಾಯಿ ದುಬಾರಿ ಅನಿಸಿದರೂ ಪ್ರತಿ ಲೀಟರಿಗೆ ತಗಲುವ ಖರ್ಚು ನಗಣ್ಯ. ಆಸ್ಪತ್ರೆ ಖರ್ಚಿನಲ್ಲಿ ಆಗುವ ಉಳಿಕೆ ಗಮನಿಸಿದರೆ ಇದರ ಉಪಯುಕ್ತತೆ ಯಾರಿಗೂ ಮನವರಿಕೆಯಾದೀತು. ಅಂದ ಹಾಗೆ ಇದಕ್ಕೆ ಲೈಫ್‌ಸ್ಟ್ರಾ ಎಂದು ಹೆಸರಿಸಲಾಗಿದೆ.
ಡಿಸೆಂಬರ್ ೯, ೨೦೦೬ ರಂದು 'ವಿಜಯ ಕರ್ನಾಟಕ'ದಲ್ಲಿ ಪ್ರಕಟಗೊಂಡ ಪ್ರತಾಪ ಸಿಂಹ ಅವರ ಲೇಖನ.
http:
ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಯಾಕೆ ಹಾಕಬಾರದು. ಯಾಕೆ ಇ-ಪುಸ್ತಕ ಮಾಡಿ ಯಾಕೆ ಹಾಕಬಾರದು ?
ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ
thatskannada.com ನಲ್ಲಿ ಕನ್ನಡದ ದೋರಣೆ ಬಗ್ಗೆ ಒಂದು article ಓದ್ದೆ. http://thatskannada.oneindia.in/news/2006/12/07/citi_bank.html
ನಮ್ ಕಂಪನಿ ಬ್ಯಾಂಕು HSBC. ಇಲ್ಲಿ ಹೇಗಿರ್ಬೋದು ನೋಡೋಣ ಅಂತ ಕಾಲ್ ಮಾಡ್ದೆ. ಭಾಷೆ ಆಯ್ಕೆ ಇದ್ದದ್ದು ಬರೀ ಇಂಗ್ಳೀಷ್, ಹಿಂದಿ. ಇಂಗ್ಳೀಷ್ ಆರ್ಸಿ ಮುಂದೆ ಹೋದೆ.. ಫೋನ್ ಎತ್ತುತ್ಲು, ಕನ್ನಡ ಶುರು ಹಚ್ಕೊಂಡೆ. ಹುಡುಗಿ ಸ್ವಲ್ಪ ಗಾಬರಿ ಆದ್ಲು.. "ಯಾಕ್ರಿ ಕನ್ನಡ ಬರಲ್ವ ?...Is there nobody who knows Kannada there ?"ಅಂದೆ. ಅದಕ್ಕೆ ಅವಳು - "sorry sir, your call has been transferred to chennai !!" ಅಂದ್ಲು. ಅವಳು ಕೊಟ್ಟ ಆಯ್ಕೆ "ಇಂಗ್ಳೀಷ್ ಅಥವ ತಮಿಳ್" !! ನೋಡಿ ಹೇಗಿದೆ ? ಕನ್ನಡಿಗರಿಗೆ ಸಿಗಬೇಕಾದ್ ಉದ್ಯೋಗ - ತಮಳ್ ಅವ್ರ್ಗೆ..!!
ಕಂಪ್ಯೂಟರ್ ೦ ಮತ್ತು ೧ ಅನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ . ಎಲ್ಲವನ್ನು ೦ ಮತ್ತು ೧ ಆಗಿಯೇ ಶೇಖರಿಸುತ್ತದೆ ಎಂದು ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಎರಡನೇ ಭಾಗದಲ್ಲಿ ನೋಡಿದೆವು . ಉದಾ. a , b , c, d ,... 1,2,3,.... ಇತ್ಯಾದಿ ಅಕ್ಷರಗಳನ್ನು 10010000, 11110001 , 01010101 ಎಂದೆಲ್ಲ ಆಗಿಯೇ ಅದು ಬಯಸುವದು.