ಅಭ್ಯಾಸಗಳು
ಅಭ್ಯಾಸಗಳು ತೊಟ್ಟಿಲ ಸೊಳ್ಳೆಪರದೆಯಾಗಿ ಕವಿದುಕೊಂಡವು
ಗಿಲಕಿಯಾದವು, ಗುಬ್ಬಿಮಾತಾದವು, ಹೊಸ್ತಿಲು ದಾಟಿ
- Read more about ಅಭ್ಯಾಸಗಳು
- 1 comment
- Log in or register to post comments
ಅಭ್ಯಾಸಗಳು ತೊಟ್ಟಿಲ ಸೊಳ್ಳೆಪರದೆಯಾಗಿ ಕವಿದುಕೊಂಡವು
ಗಿಲಕಿಯಾದವು, ಗುಬ್ಬಿಮಾತಾದವು, ಹೊಸ್ತಿಲು ದಾಟಿ
ದಾರಿ ಬಿಡು, ದಾರಿ ಬಿಡು...
ಬೆಳ್ಳಂ ಬೆಳಿಗ್ಗೆ ದಾರಿ ಬಿಡು
ಎಸ್ಸೆಂಸ್ಸಿಗೆ ದಾರಿ ಬಿಡು
ಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡು
ಹೊಸದಕ್ಕೆ ನೀ ದಾರಿ ಬಿಡು
ಮನಸ್ಸಲ್ಲೊಂದಿಷ್ಟು ನಕ್ಕು ಬಿಡು
ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲು ಕುಂಯ್‌ಗುಟ್ಟತೊಡಗುತ್ತದೆ. ಹಾಸಿಗೆಯಿಂದೇಳುತ್ತಾ ಕಣ್ಣೊರೆಸಿಕೊಂಡು ಬಾಯಾಕಳಿಸುತ್ತಾ ಮೊಬೈಲು ಗುಂಡಿ ಒತ್ತಲು ರೆಡಿ. ಅಲ್ಲಿ ನೋಡಿದರೆ ಹತ್ತಿಪ್ಪತ್ತು ಗುಡ್ ಮಾರ್ನಿಂಗ್ ಮೆಸ್ಸೇಜುಗಳು.. ಅದಕ್ಕೊಂದು `ಕೋಟ್' ಅಟ್ಯಾಚ್ ಆಗಿರುತ್ತದೆ. ಕೆಲವೊಂದು ಗಂಭೀರವಾಗಿದ್ದರೆ ಕೆಲವೊಂದು ಕಚಗುಳಿಯಿಡುತ್ತವೆ. ಒಂದೊಂದನ್ನೇ ಓದುತ್ತಾ ಕೆಲವು ರಿಪೀಟ್ ಆಗಿರುವುದನ್ನು ಡಿಲೀಟ್ ಮಾಡುತ್ತಾ ಮುಂದಿನದನ್ನು ಓದುವುದರಲ್ಲಿ ಮಗ್ನ.. ಡಿಲೀಟ್ ಮಾಡಿದಷ್ಟೂ ಇನ್ನೂ ತುಂಬುವ ಬುತ್ತಿ ಈ ಇನ್‌ಬಾಕ್ಸ್.
"ಜಾರ್ಜ್ ಬುಷ್
ಅಬ್ದುಲ್ ಕಲಾಮ್
ಅಮಿತಾಬ್ ಬಚ್ಚನ್
ಸಚಿನ್ ತೆಂಡೂಲ್ಕರ್ ಹಾಗೂ ನಾನು.....
ಈ ಎಲ್ಲಾ ವಿ. ಐ. ಪಿ ಗಳಿಂದ ನಿನಗೆ ಗುಡ್ ಮಾರ್ನಿಂಗು..."
ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ ಅಲಿಖಿತ ಕಟ್ಟಳೆಗಳ ಬಗ್ಗೆ ಆಸಕ್ತಿ ಉಂಟಾಯಿತು. ಇವು ಸಹ ಒಂದು ಬಗೆಯ ಮೂಢನಂಬಿಕೆಗಳೇ ಅನ್ನಿ. ಹಾಗೇ ಹುಡುಕುತ್ತಾ ಹೋದಂತೆ ಇವುಗಳ ಹಿಂದಿನ ಕಾರಣಗಳೂ ತಿಳಿದವು. ಅವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ.
ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ. ನನ್ನಂತಹ ಹವ್ಯಾಸಿ ಓದುಗನಿಗೆ ಇದು ಅರ್ಥವಾಗುವುದಿಲ್ಲವೇನೋ.ಅಂತೆಯೇ ಕೆಲವರಿಗೆ ಬದುಕಿನ ದಿನನಿತ್ಯದ ಘಟನೆ ಎಷ್ಟೇ ಸಣ್ಣದಿರಲಿ ,ಮನಸ್ಸಿನಲ್ಲೇ ನಿಂತುಬಿಟ್ಟು, ಅದನ್ನು ಯಾರಿಗಾದರೂ ವಿವರಿಸಿದ ನಂತರವೇ ಆ ವಿಚಾರ ಚಿಂತನಾಲಹರಿಯಲ್ಲಿ ಹಿಂದೆ ಸರಿಯತ್ತದೆ.
ಡೇಟಬೇಸ್ maintenance ಗಾಗಿ ಒಂದಷ್ಟು ಕೆಲಸ ನಡೆಯುತ್ತಿರುವುದರಿಂದ ಇವತ್ತು ಮಧ್ಯಾಹ್ನ (ಭಾರತದ ಸಮಯದಂತೆ) ಸ್ವಲ್ಪ ಹೊತ್ತು (೧೦ರಿಂದ ೩೦ ನಿಮಿಷ) 'ಸಂಪದ' ಲಭ್ಯವಿರುವುದಿಲ್ಲ.
"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು ಗಮನಿಸುತ್ತ ಹೋದೆ. ರೇಡಿಯೋದಲ್ಲಿ ಕೇಳಿದ ಕಿಶೋರಿ ಅಮೋನ್ಕರ್ ಅವರ ಗಾಯನವು ಮೇಲಿನ ಮಾತನ್ನು ಎರಡು ವರ್ಷದ ನಂತರ ಮತ್ತೆ ನೆನಪಿಸಿತು. ಅಂದು ಅವರು ರಾಗ 'ಮಿಯನ್ ಕೆ ಮಲ್ಹರ್" ವನ್ನು ಹಾಡಿದ್ದು , ಶಾಸ್ತ್ರೀಯ ಸಂಗೀತದ ಒಂದು ಆಯಾಮವನ್ನು ಪರಿಚಯಮಾಡಿಕೊಟ್ಟಿತು. ವಿಶೇಷವೆಂದರೆ ಈ ರಾಗಕ್ಕೆ ಸಮಾನಾಂತರವಾಗಿ "Largo Moderato" ಎಂಬ ರಾಗವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಇದೆ.
Internet Explorer ಬಹಳಷ್ಟು ಜನರ ಮಟ್ಟಿಗೆ ಒಂದು 'ತರಲೆ ಬ್ರೌಸರ್'... w3c ಸ್ಥಾಪಿಸಿರೋ ಎಷ್ಟೊಂದು ಸ್ಟಾಂಡರ್ಡುಗಳನ್ನ ಇದು ಸಪೋರ್ಟ್ ಮಾಡೋದೇ ಇಲ್ಲ! ಅದರ ಮೇಲೆ ವಾರಕ್ಕೊಂದು ಸೆಕ್ಯೂರಿಟಿ ಕುತ್ತು ಬೇರೆ.
ಅಷ್ಟೇ ಅಲ್ಲ, ಇರೋ ಬರೋ ವೈರಸುಗಳೆಲ್ಲ ಹಾಳು ವಿಂಡೋಸ್ ನಲ್ಲೇ ಬರೋದು... ಹೆಚ್ಚಾಗಿ ಈ Internet Explorer ಮತ್ತು Outlook ಗಳೇ ವೈರಸ್ ದಾಳಿ ಹೆಚ್ಚಾಗಿ ಎದುರಿಸುತ್ತಿರುವುದು. ಈ ಬ್ರೌಸರಿನಲ್ಲಿ png ಚಿತ್ರಗಳೂ ಸರಿಯಾಗಿ ಕಾಣೋದಿಲ್ಲ. ಹೀಗಾಗೀನೂ ಜನ ಇದನ್ನ ಬಳಸ್ತಾರೆ ನೋಡಿ!
ನಮ್ಮ 'ಸಂಪದ'ವನ್ನ ಹೋಸ್ಟ್ ಮಾಡಿರುವ ಮಾರ್ಕ್ ಗೆ ಈ ಬ್ರೌಸರ್ ಕಂಡರೆ ಎಷ್ಟೊಂದು ಸಿಟ್ಟು! ಅವ ಈ ಬ್ರೌಸರನ್ನು "Internet Exploder" ಅಂತ ಕರೀತಾನೆ
[ ಈ ಬರಹ ಈ ಹಿಂದೆ ಬೇರೆಡೆ ಪ್ರಕಟವಾಗಿತ್ತು ]