ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪು ತಿ ನ - ೨

ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು

ಪು ತಿ ನ

ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.

ಎಂಥ ನಾಡಿದು ಎಂಥ ಕಾಡಾಯಿತೋ

ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ. ಮುಗಳಿ, ಶಂಬಾ ಜೋಶಿ, ಆಲೂರು ವೆಂಕಟರಾಯರುಗಳ ಕೆಲವು ಕೃತಿಗಳನ್ನು ಓದಿದ್ದೆ. ಅವುಗಳಲ್ಲಿ, 'ಕಂನುಡಿಯ ಹುಟ್ಟು', 'ಕರ್ನಾಟಕ ಪರಂಪರೆ' ಎಂಬೆರೆಡು ಪುಸ್ತಕಗಳ ಹೆಸರು ನೆನಪಿದೆ. ಈ ಕೃತಿಗಳಲ್ಲಿ ಕೃತಿಕಾರರುಗಳು ಕನ್ನಡದ ಪ್ರಾಚೀನತೆಯ ಬಗ್ಗೆ ಹಾಗೂ ಅದರ ಹರಹಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.

ಮ್ಯಾಗಿ ಪಕೋಡ

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;) ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.

ಹಳೆಯದೊಂದು ಮ್ಯಾಗಿ ಕ್ಲಬ್ ರೆಸಿಪಿ

೪ ಜನ

30

ನನ್ನನ್ನೂ ಸೇರಿಸ್ಕೋತೀರ ತಾನೆ?

ನಾನು ಈ ತಾಣಕ್ಕೆ ಹೊಸಬ. ನನ್ನ ನಾಮಧೇಯ ವೆಂಕಟೇಶ. ಊರು: ಅಟ್ಲಾಂಟ. ಕೆಲಸ: ಸಂಪದ ದಲ್ಲಿ ಹರಟೆ. ಈ ತಾಣ ನನಗೆ ಬಹಳ ಸಂತಸ ತಂದಿತು. ಕನ್ನಡದ ಅಕ್ಷರಗಳನ್ನು ನೋಡಿ ನನಗೆ ಮಹದಾನಂದವಾಯ್ತು. ನನಗೆ ನಮ್ಮ ತ.ವಿ.ಶ್ರೀ. ಇಂದ ಈ ತಾಣದ ಬಗ್ಗೆ ತಿಳಿಯಿತು. ಈ ತಾಣ ಮಾಡಿದ ನಾಡಿಗ್ ಅವರಿಗೆ ನನ್ನ ಶುಭ ಕಾಮನೆಗಳು. ಇಲ್ಲಿ ಹೆಚ್ಚಿನ ಗೆಳೆಯರು ಸಿಗುತ್ತಾರೆಂಬ ಆಶಯದೊಂದಿಗೆ -ನುಡಿಕನ್ನಡ.

ಬಾಂಡ್... ಶೇನ್ ಬಾಂಡ್


ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]

ಶ್ರೀಲಂಕಾದಲ್ಲಿ ಹೀನಾಯವಾಗಿ ಸೋತು ಬಂದು ಇನ್ನೂ ವಾರಗಳೇ ಕಳೆದಿಲ್ಲ, ಭಾರತ ತಂಡಕ್ಕೆ... ಆಗಲೇ ಅಷ್ಟು ನಮ್ಮ ಯೋಗ್ಯತೆಗೆ ಸಾಲದು ಎಂಬಂತೆ ಮತ್ತೊಂದು ಬಾರಿ ಇನ್ನಷ್ಟು ಹೀನಾಯವಾಗಿ ಸೋತಿದ್ದಾರೆ.

ಇಂದು ಅವರನ್ನು ಮನೆಗೋಡಿಸಿ ಮೊದಲೇ ಕೆಟ್ಟದಾಗಿ ಆಡುತ್ತಿರುವ ಭಾರತ ತಂಡವನ್ನು ಇನ್ನೂ ಕೆಟ್ಟದಾಗಿ ಕಾಣುವಂತೆ ಮಾಡಿದವರು ಬ್ರಿಟಿಷ್ ಧೂತ ವಿಭಾಗದ ಬಾಂಡ್ ಅಲ್ಲ... ನ್ಯೂಜಿಲೆಂಡಿನ ಬಾಂಡ್. 'ಪಾಪ ಈಗ ತಾನೆ ಇಂಜುರಿಯಿಂದ ವಾಪಸ್ ಬಂದಿದ್ದಾನೆ, ಅವನಿಗೆ ಮೊದಲ ತರಹ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಕಾಮೆಂಟ್ರಿ ತಂಡ ಮಾತನಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಭಾರತ ತಂಡದ ಮೂರು ವಿಕಟ್ ಉರುಳಿಸಿಯೇ ಬಿಟ್ಟಿದ್ದ. ನಮ್ಮವರು ಹೀಗೆ ಆಡುವರೆ? ಇಂಜುರಿಯಿಂದ ವಾಪಸ್ ಬಂದ ಬೌಲರ್ ಒಬ್ಬ ನಮ್ಮ ಭಾರತ ತಂಡದವನಾದರೆ ಅರ್ಧಕ್ಕರ್ಧ ಸ್ಪೀಡ್ ಕಮ್ಮಿಯಾಗಿ ಹೋಗಿರುತ್ತೆ! (ನಮ್ಮ ತಂಡದ ಝಹೀರ್ ಖಾನ್ ಗೊತ್ತಲ್ಲ!)

ಪತಂಜಲಿಯ ಯೋಗ ಭಾಗ ೫

ಪತಂಜಲಿಯ ಯೋಗ ಭಾಗ ೫ ಐದನೆಯ ಲೇಖನ ಬಾಹ್ಯ ಸಂವೇದನೆಗಳಿಂದ ಬರುವ ವೃತ್ತಿಗಳನ್ನು ತಡೆಯುವ ಬಗೆಯನ್ನು ಸಮಾಧಿ ಪಾದದಲ್ಲಿ ನೋಡಿದೆವು. ಆದರೆ ಮನದೊಳಗೇ ಇರುವ ಕ್ಲೇಷಗಳಿಂದ ಒಳಗೇ ವೃತ್ತಿಗಳು ಏಳುತ್ತದೆ. ಆ ವೃತ್ತಿಗಳನ್ನೂ ತಡೆಯುವುದನ್ನು ಸಾಧನ ಪಾದದಲ್ಲಿ ಕಲಿಯಬಹುದು. ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಕ್ರಿಯಾಯೋಗ.ಯೋಗ ಸೂತ್ರ ಪಾದ೨. ಸೂತ್ರ.೧ ಇಲ್ಲಿ ತಪಸ್ಸು ಎಂದರೆ ದೇಹಕ್ಕೆ ತೊಂದರೆಯಾದರೂ ಮನಸ್ಸು ಚಂಚಲವಾಗದ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನ. ಸ್ವಾಧ್ಯಾಯ ಎಂದರೆ ಬರೀ ಓದುವುದಲ್ಲ;ಓದಿದುದನ್ನು ಒರೆಗೆ ಹಚ್ಚಿ ಅದು ಸತ್ಯ ಎಂದು ಮನವರಿಕೆ ಮಾಡಿಕೊಳ್ಳುವುದು. ಅದೇ ಸಾಧನೆ. ಅದಕ್ಕೂ ಆಳವಾದ ಚಿಂತನೆ ಅಗತ್ಯ.

ಕನ್ನಡವೆನೆ ಸುಂಕವ ಹೇರುವುದೀ ನಾಡು

(ಈ ಲೇಖನವನ್ನು ೪-೭-೨೦೦೩ರಲ್ಲಿ ಬರೆಯಲಾಗಿತ್ತು)

ರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ಮುಂಚೂಣಿಯಲ್ಲಿದೆ. ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ. ಕರ್ನಾಟಕ ಸರಕಾರವೂ ವರ್ಷಕ್ಕೊಮ್ಮೆ ೫ ದಿನಗಳ ಕಾಲ ಐಟಿ.ಕಾಂ ಎಂಬ ಮೇಳ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಲೇ ಬಂದಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಂತೂ ಹೈಟೆಕ್ ಮುಖ್ಯಮಂತ್ರಿ ಎಂಬ ಬಿರುದು ಪಡೆದಿದ್ದಾರೆ.

ಹಿತನುಡಿ

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

ನನ್ನ ಬ್ಯಾಂಕ್ ಬ್ಯಾಲೆನ್ಸ್

ನಾನೊಬ್ಬ ಏದುಸಿರು ಬಿಡುತಿಹ ಕಲ್ಲಿದ್ದಲು ಉಗಿಬಂಡಿ ನನ್ನ ಬಳಿ ಎಂದಿಗೂ ಸುಳಿಯಲಿಲ್ಲ ಬಂಗಾರದ ಗಿಂಡಿ ಟ್ಯಾಕ್ಸು ಪಾಕ್ಸು ಮುರಿದು ಮಾಹೆಯಾನ ಬರುತಿಹುದು ೮೦೦೦ ರೂಪಾಯಿ ಚಾತಕದಂತೆ ತಾರೀಖು ಒಂದಕೆ ಕಾದು ಬಿಡುತಿಹೆ ನಾ ಬಾಯಿ ಬಾಯಿ ಬರುವುದರಲಿ ಒಂದು ಪಾಲು ಕೈ ತುತ್ತನಿಟ್ಟ ಆ ತಾಯಿಗೆ ಇನ್ನೊಂದು ದೊಡ್ಡ ತುತ್ತು ನನ್ನ ನಂಬಿದ ನನ್ನ ಮಕ್ಕಳ ತಾಯಿಗೆ ಹೆಚ್ಚಿನ ಖರ್ಚಿಗೆ ಗಟ್ಟಿಯಾಗಿರುವುದು ಸಾಲ ಕೊಡುವ ಸೊಸೈಟಿ