ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"Don't Know" - ಆಯ್ಕೆ ಯಾಕಿರಬಾರದು ಚುನಾವಣೆಗಳಲ್ಲಿ?

ನಮಸ್ಕಾರ,

ನನಗೆ 18 ತುಂಬುತ್ತಲೆ, ಈ ವರ್ಷದಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳೊ "ಭಾಗ್ಯ" ಕೂಡಿ ಬಂದಿದೆ.. ಆದರೆ ಯಾರಿಗೆ ಮತ ನೀಡಲಿ?
ನನಗೆ ಗೊತ್ತಿರೊ ಹಾಗೆ ನಮ್ಮ areaದಲ್ಲಿ ಇರೋರೆಲ್ಲ wasteಗಳು - ಯಾರಿಗೆ ಹಾಕಿದ್ರು ಅದರಿಂದ ನಮಗೆ ಯಾರಿಗೂ ಏನು ಉಪಯೋಗ ಇಲ್ಲ ಅಂತನು ಚೆನಾಗ್ ಗೊತ್ತು!
ಇನ್ನು ಅದರ ಮೇಲಿರೊರೊ ಅಷ್ತೆ - ಯಾರೆ ಗೆದ್ದರೂ ಕನ್ನಡ, ಕರ್ನಾಟಕದ ಬಗ್ಗೆ ಯಾವುದೆ ಕಾಳಜಿ ಇರೊಲ್ಲ ಅವರಿಗೆ!

ಈಗಷ್ಟೆ ನೋಡಿದ್ದು!

ಏನೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ನಡೆದು ಸಾಗುತ್ತಿದ್ದೆ. ದೂರದಲ್ಲಿ ಜನರಗುಂಪೊಂದು ಸೇರಿರುವುದು ನನ್ನ ಕಣ್ಣಿಗೆ ಬಿತ್ತು. ಅದರ ಹತ್ತಿರ ಸಾಗುತ್ತಿದ್ದಂತೆ "ಕನ್ನಡ ವಿರೋಧಿಗಳಿಗೆ ಧಿಕ್ಕಾರ,ಕನ್ನಡ ವಿರೋಧಿ ವರ್ತಕರಿಗೆ ಧಿಕ್ಕಾರ,ಕನ್ನಡ ವಿರೊಧಿ ಕಂಪನಿಗಳಿಗೆ ಧಿಕ್ಕಾರ" ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಆ ಗುಂಪು ಸೇರಿರುವುದು hutch ಆಫಿಸ್ ನ ಎದಿರು, ಅದರ ಬಾಗಿಲು ಮುಚ್ಹಿತ್ತು ಅನ್ನುವುದಕ್ಕಿಂತ ಮುಚ್ಹಿಸಿದ್ದರು ಎನ್ನಬಹುದು.

ಪತಂಜಲಿಯ ಯೋಗ ಭಾಗ ೪

ಪತಂಜಲಿಯ ಯೋಗ

ನಾಲ್ಕನೆಯ ಲೇಖನ

ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದ‍ರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ , ದೌ‍ರ್ಮನಸ್ಯ (ಮನಸ್ಸಿನ ಪರಿತಾಪ), ಅಂಗಮೇಜಯತ್ವ (ದೇಹದ ಚಲನೆ),ಶ್ವಾಸಪ್ರಶ್ವಾಸ (ಅಸಮವಾದ ಉಸಿರಾಟ).

ನಾಯಿಗೇನಾಯಿತು?

ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ? ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು. ರಾಮು: ಅಯ್ಯೋ ಪಾಪ! ನಾಯಿಗೇನಾಯಿತು? ಶಾಮು: .....

ಯಾರಿಗೂ ಹೇಳಬೇಡಿ

ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತನಾಡಲು ಸಾಧ್ಯವೆ! ಚಿಕ್ಕಪ್ಪ ಕೂಡ ಸೋಲೊಪ್ಪದ ವ್ಯಕ್ತಿ. ಚಿಕ್ಕಪ್ಪ ಕೂಡ ಅದೇ ವರಸೆಯಿಂದ 'ನಿಮಗೆಲ್ಲಾ ಹೀಳಬೇಡಿ ಎಂದಿದ್ದಾಳೆ' ಎನ್ನಬೇಕೆ. ಅಲ್ಲಿದ್

7 ಮದುವೆ ಅನುಭವ

ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದರು. ಅವರಿಗೆಲ್ಲರಿಗೂ ಆಗಲೆ ಮದುವೆಯಾಗಿತ್ತು. ನಮ್ಮ ಅತ್ತೆಯಂದಿರು ಚಿಕ್ಕಪ್ಪನಿಗೆ 'ನೀನು ಮದುವೆಯಗುತ್ತಿರುವ ಹುಡುಗ. ಸ್ವಲ್ಪ ಗೊಭೀರತೆಯಿಂದಿರಲು ಕಲಿತುಕೊ.' ಎಂದು ಹಾಗೆ ಹೀಗೆ ಎಂದೆಲ್ಲಾ ಬೋಧಿಸುತ್ತಿದ್ದರು. ಇದು ತುಂಬಾ ಹೊತ್ತಿನ ವರೆಗೆ ನಡೆಯಿತು. ಚಿಕ್ಕಪ್ಪನೋ ತುಂಬಾ ತಮಾಷೆಯ ವ್ಯಕ್ತಿ. ಅವನು 'ನೀವೇನೂ ಚಿಂತೆ ಮಾಡಬೇಡಿ. ನನಗೆ 7 ಮದುವೆ ಹಾಗೂ ಸಂಸಾರದ ಅನಭವವಿದೆ' ಎಂದ. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಹೆಣ್ಣಿನ ಕಡೆಯವರು ಸ್ವಲ್ಪ ಚಿಂತೆಗೀಡಾದರೆಂದು ಅನ್ನಿಸಿತು. ಹುಡುಗನಿಗೆ ಈ ಮೊದಲೆ ಮದುವೆ ಅಗಿದೆಯೊ ಎಂದನ್ನಿಸಿರಬೇಕು. ವಧುವಿನ ತಾಯಿ 'ಅಂದರೆ ಏನಪ್ಪ ನನೀನು ಹೇಳುತ್ತಿರುವುದು?' ಎಂದು ಪ್ರಶ್ನಿಸಿದರು. ಆಗ ಚಿಕ್ಕಪ್ಪ 'ನಾನು ಈಗಾಗಲೆ ಅಕ್ಕಂದಿರ, ಅಣ್ಣಂದಿರ ಮದುವೆ ಹಾಗೂ ಸಂಸಾರ ನೋಡಿದ್ದೇನೆ. ಅದೇ ನನ್ನ 7 ಮದುವೆ ಹಾಗೂ ಸಂಸಾರದ ಅನಭವ.' ಎಂದು ವಾತಾವರಣ ತಿಳಿಗೊಳಿಸಿದನು. ಆಗ ಎಲ್ಲರೂ 'ಓ ಹಾಗೋ!' ಎಂದು ನಕ್ಕು ಬಿಟ್ಟರು.

ಇದೂ ಒಂದು ಟೂ-ಇನ್-ಒನ್ ಮಂದಿರ

ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ [:http://web.mid-day…|ಇವತ್ತಿನ ಅಂಕಣ ನೋಡಿ], ಹೀಗಿದೆ: "ಸಿನೆಮಾ ಮಂದಿರವೋ ದೇವತಾ ಮಂದಿರವೋ?" ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ;)

ತೇಜೋಮಯ ಚಿಂತನೆಯೊಂದರ ತುಣುಕು

1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ ಸಹಾಯಕ ವರದಿಗಾರರೂ ಇದ್ದುದರಿಂದ ಇಲ್ಲದ ಕೆಲಸ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇಂಥಾ ಹೊತ್ತಿನಲ್ಲಿ ಎಲ್ಲಾ ಪತ್ರಕರ್ತರೂ ಮಾಡುವಂತೆ ನಾನೂ Special storyಗಳ ಹುಡುಕಾಟದಲ್ಲಿ ಮುಳುಗಿದೆ.