ಒಂದಿಷ್ಟು ಹಾಯಿಕುಗಳ ಅನುವಾದ

ಒಂದಿಷ್ಟು ಹಾಯಿಕುಗಳ ಅನುವಾದ

ನಾನು ಮಲಗಬೇಕು ,
ಸೊಳ್ಳೆಗಳನ್ನ ಹೊಡೆಯಿರಿ-
ಸ್ವಲ್ಪ ನಿಧಾನಕ್ಕೆ .

ಗೊಣಗುಟ್ಟುವ ಹೆಂಡತಿ
ಇರಬೇಕಿತ್ತು ಇಲ್ಲಿ ಈಗ - ,
ತಂಪಾದ ಹುಣ್ಣಿವೆ ರಾತ್ರಿ.

ನಯನಮನೋಹರ ದೃಷ್ಯ ,
ಈ ಕಾಗದದ ತೂತಿನೊಳಗಿಂದ -
ಈ ವಿಶ್ವ.

ಒಬ್ಬನೇ ಮನುಷ್ಯ ,
ಒಂದೇ ನೊಣ -
ಈ ದೊಡ್ಡ ಡ್ರಾಯಿಂಗ್ ರೂಮಿನಲ್ಲಿ.

ರಾತ್ರಿ, ಮತ್ತೆ ಹುಣ್ಣಿವೆ,
ಪಕ್ಕದ ಮನೆಯಾತ ಕೊಳಲು ಬಾರಿಸುತ್ತಿದ್ದಾನೆ-
ಕೆಟ್ಟದಾಗಿ !

ಭತ್ತದ ಗದ್ದೆಯಲ್ಲಿನ ಹೆಣ್ಣಾಳುಗಳೇ ,
ಇಲ್ಲಿ ಕೆಸರಾಗಿಲ್ಲದ್ದು ಒಂದೇ ,
ನಿಮ್ಮ ಹಾಡುಗಳು.

ಬೇಸಗೆಯ ನದಿ:
ಸೇತುವೆಯಿದ್ದರೂ ಕುದುರೆ
ನೀರಿನಲ್ಲೇ ಸಾಗುತ್ತದೆ.

ಫಳಾರನೇ ಮಿಂಚು:
ಅಡವಿಯ ಮರಗಳ ನಡುವೆ
ನೀರು ಕಂಡೆ.

ಗಾಳಿ ಭರ್ರನೇ ಬೀಸುತ್ತಿದೆ -
ಕೇಳಿ ಅದನ್ನು ಯಾವ ಎಲೆ
ಬೀಳುವುದು ಈಗ.

ವಸಂತ ಋತು ಬಣ್ಣದ ನಿಸರ್ಗದೃಶ್ಯ ,
ಕಂಪ್ಯೂಟರ್ ಮೇಲೆ ,
ಈಗ ಒಂದು ಮನುಷ್ಯಜೀವಿಯನ್ನು ಪ್ರೀತಿಸುವ ಸಮಯ.

ಮುಂಜಾನೆಯ ಪೇಪರ್ರು ಬಾಗಿಲಲ್ಲಿ
ಒಳ್ಳೆಯ, ಕೆಟ್ಟ ಸುದ್ದಿ ತಂದಿದೆ-
ನಾನು ಕಾಲಿಟ್ಟು ಬಿಟ್ಟೆ.

ಸಸ್ಯಾಹಾರಿ , ಮತ್ತೆ
ಧ್ಯಾನದಲ್ಲಿ ಕಾಲು ಮಡಚು-
ಬಾಣಲೆಯಲ್ಲಿ ಹುರಿಸಿಕೊಳ್ಳುತ್ತಿರುವ ಕೋಳಿ.

ಇದನ್ನು ಅನುವಾದಿಸಲು ಆಗಲಿಲ್ಲ .ಚೆನ್ನಾಗಿದೆ . ಇಂಗ್ಲೀಷಿನಲ್ಲೇ ಓದಿ.

the old think-tank
another idea jumps into
a sound mind<-lang>

Rating
No votes yet