ತಥಾಸ್ತು ಎನ್ನಿ
ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ.
ನನ್ನನ್ನು ಕೇಳಿ,
ದೇವರು ಇದ್ದುದಾದಲ್ಲಿ,
ಇದ್ದೂ ಇಲ್ಲವಾಗಿದ್ದಾನೆ*.
ದೇವರು ಇಲ್ಲವಾದಲ್ಲಿ
ಇಲ್ಲದೆಯೂ ಇದ್ದಾನೆ#.
ಒಂದು ಘಟ್ಟ ಇಲ್ಲಿಗೆ,
ಸ್ವಲ್ಪ ಸಾವರಿಸಿಕೊಳ್ಳಿ,
ಈಗ ಬನ್ನಿ, ಮೇಲಕ್ಕೆ.
ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಅವರಿವರ ಮಾತು ಒಪ್ಪುವದಿಲ್ಲ,
ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ.
ಇವರವರ ಮಾತು ಒಪ್ಪುವದಿಲ್ಲ.
ಹಾಗಾದರೆ ಏನು ಮಾಡೋಣ?
ಇಲ್ಲಿದೆ ರಾಮ ಬಾಣ,
ಈ ಇಲ್ಲ-ಇರುಗಳನ್ನೇ ಕೊಂದು ಬಿಡೋಣ,
ಅಥವಾ ಮರೆತು ಬಿಡೋಣ.
ಸಂಪದಿಗರೇ, ಬರೆದಿದ್ದೇನೆ,
ರಾತ್ರಿಯೆಲ್ಲಾ ನಿದ್ದೆಗೆಟ್ಟು,
ಹಾಗಾಗಿ "ತಥಾಸ್ತು", ಎನ್ನಿರಿ, ದಯವಿಟ್ಟು.
(*ನಾಸ್ತಿಕರ ಮನಸಲ್ಲಿ, # ಆಸ್ತಿಕರ ಮನಸಲ್ಲಿ)
Rating
Comments
ಉ: ತಥಾಸ್ತು ಎನ್ನಿ
In reply to ಉ: ತಥಾಸ್ತು ಎನ್ನಿ by hariharapurasridhar
ಉ: ತಥಾಸ್ತು ಎನ್ನಿ
ಉ: ತಥಾಸ್ತು ಎನ್ನಿ
In reply to ಉ: ತಥಾಸ್ತು ಎನ್ನಿ by asuhegde
ಉ: ತಥಾಸ್ತು ಎನ್ನಿ
In reply to ಉ: ತಥಾಸ್ತು ಎನ್ನಿ by shivaram_shastri
ಉ: ತಥಾಸ್ತು ಎನ್ನಿ
In reply to ಉ: ತಥಾಸ್ತು ಎನ್ನಿ by shaamala
ಉ: ತಥಾಸ್ತು ಎನ್ನಿ