ನೀಲಿ ಕಣ್ಣಿನ ಹುಡುಗ
ಸ೦ಪದಗರಿಗೆಲ್ಲಾ ಯುಗಾದಿಯ ಶುಭಾಶಯಗಳು...
ನೀಲಿ ಕಣ್ಣಿನ ಹುಡುಗ...
------
ನೋವು ತರುವುದು ತರವೇ ಗೆಳೆಯನೆ
ಒಲವ ಹರವು ಹರಿಯದೇ?
ಸಹಿಸಲಾರೆನು ಇನ್ನು ವಿರಹವ
ಇನಿಯ ನನ್ನಲಿ ಕೋಪವೇ?
ನೀಲಿ ಕಣ್ಣಿನ ಹುಡುಗ ನಿನ್ನಯ
ನೋಟದಿ೦ದಲೆ ಧನ್ಯತೆ
ಹಾಡ ಹಾಡಿದೆ ಹೃದಯವೆಲ್ಲವೂ
ನಿನ್ನ ಧ್ಯಾನದಿ ಏಕತೆ |
ಸವಿಯ ನುಡಿಯಲಿ ಮೋಹಗೊಳಿಸುತ
ಪ್ರೀತಿ ಬೀಜವ ಬಿತ್ತಿದೆ
ನಿನ್ನ ಮನಸಿನ ತೋಟದಲ್ಲಿಯೆ
ಹೂವು ಆಗಲು ಬಯಸಿಹೆ |
ಕದುಪು ಅರುಣನ ಬಣ್ಣವೆತ್ತಿದೆ
ನಿನ್ನ ಮಧುರ ನೆನಪಿಗೆ
ಭಾವ ಸಾಗರದಲ್ಲಿ ಮೀಯುತ
ಮನವು ನಿನ್ನನೇ ಅರಸಿದೆ |
ಜೀವ ಪಯಣಕೆ ಜಗದ ನಿಯಮಕೆ
ನೀನದಲ್ಲೆಕೆ ಕರ್ತೃವು
ಗೆಳತಿ ರಾಧೆಯ ಕಣ್ಗಳಲ್ಲಿಯೇ
ಶ್ಯಾಮ ನಿನ್ನಯ ರೂಪವು
..ಅನ೦ತ್
Rating
Comments
ಉ: ನೀಲಿ ಕಣ್ಣಿನ ಹುಡುಗ
In reply to ಉ: ನೀಲಿ ಕಣ್ಣಿನ ಹುಡುಗ by poornimas
ಉ: ನೀಲಿ ಕಣ್ಣಿನ ಹುಡುಗ
ಉ: ನೀಲಿ ಕಣ್ಣಿನ ಹುಡುಗ
In reply to ಉ: ನೀಲಿ ಕಣ್ಣಿನ ಹುಡುಗ by bhavanilokesh mandya
ಉ: ನೀಲಿ ಕಣ್ಣಿನ ಹುಡುಗ
ಉ: ನೀಲಿ ಕಣ್ಣಿನ ಹುಡುಗ
In reply to ಉ: ನೀಲಿ ಕಣ್ಣಿನ ಹುಡುಗ by Indushree
ಉ: ನೀಲಿ ಕಣ್ಣಿನ ಹುಡುಗ