ಎರಡು ಹನಿಗವನ

ಎರಡು ಹನಿಗವನ

ಕವನ

 
ಅದ್ಭುತ ವಾಕ್ಯ
 
ವಾಯು ವಿಹಾರ ಹೊರಟೆ
ರಸ್ತೆಯಲ್ಲಿ ಕವಿಸಮಯ ಹಾಜರು
ಅದ್ಭುತ ವಾಕ್ಯ ಹೊಳೆಯಿತೊಂದು
ನನ್ನ ಕವನದ ಚರಣವಿದೇ
ತೀರ್ಮಾನವಾಯಿತು
 
ಬಂದೆ ಮನೆಗೆ
ತೆರೆದೆ  ಹಾಳೆ
ಪೆನ್ನು ಬೆರಳಿಗೆ 
ಮತ್ತು ತಲೆಯಲ್ಲಿ ತಿಣುತಿಣುಕೆ...
ಒಂದೂ ಅಕ್ಷರ ಮೂಡಲಿಲ್ಲ
......................................
ಬೆಳಿಗಿನ ವಿಹಾರ ವಾಕ್ಯ
ಅದ್ಭುತವಿದ್ದರೆ ಮರೆಯುತ್ತಿರಲಿಲ್ಲ!
 
 
ಮರೆತುಬಿಡು
 
’ಎಲ್ಲ ಮರೆತುಬಿಡು ಗೆಳೆಯ
ಮರೆತು ನಿರಾಳ ನಡೆಸು ಜೀವನ ”
ಸಾಂತ್ವನಿಸಿದ ಗೆಳೆಯ ಕುಳಿತು ಸನಿಯ
..............................................
ಎಷ್ಟು ಯೋಚಿಸಿದರೂ
ಹೊಳೆಯಲಿಲ್ಲ ಕೊನೆಗೂ
'ನಾನೀಗ ಏನು ಮರೆಯಬೇಕು?!'