"ಕರಾಳ ಕರ್ನಾಟಕ"

"ಕರಾಳ ಕರ್ನಾಟಕ"

ಕವನ

 

ಕಿಟಕಿ ಸೀಟು ಕಾದಿರಿಸಿ
ಹೊಸತೊ೦ದು ಯಾತ್ರೆಗೆ 
ಹೊರಟಿದ್ದೇನೆ...
ಬೆಳಕಿನ ಸೆಳವು, 
ತನ್ನ ಅಪ್ಪುವ ಹಗೆತನಗಳ
ತೊಳಲಾಟ,
ಹಿಗ್ಗಿ ಕಾರುವ
ಬಯಕೆಗಳ ವೀರ್ಯ,
ಸುತ್ತುವರಿದು ಕೊರೆಯುವ ಚಳಿ...
ನಮ್ಮವರ ಮುಗಿಯದ ನಿದಿರೆ.
ಹೌದು,
ಇದು ಅಸ೦ಬಧ್ಧ ಸಾಲುಗಳ
ಅಶ್ಲೀಲ ಕವಿತೆ.
.
.

ಬೀದಿಗಳಲ್ಲಿ, ನಿಲ್ದಾಣಗಳಲ್ಲಿ,
ದಿಲ್ಲಿಯಲ್ಲಿ, ತೀರ್ಥಹಳ್ಳಿಯಲ್ಲಿ,
ಕನಸಿನಲ್ಲಿ, ಶಾಲೆಗಳಲ್ಲಿ,
ಅವಳ ಛಿದ್ರವಾದ ಕನಸುಗಳ
ಒಡಕಲು ಬಿ೦ಬದಲ್ಲಿ,
ನನ್ನ ಇರುವಿಕೆಯ
ಹೇಸಿಗೆಯನ್ನು ಕ೦ಡಿದ್ದೇನೆ.
ಮಹಿಳೆ ಮತ್ತು 
ಸಬಲೀಕರಣಗಳ ವಿರೋಧಾಭಾಸದ
ಸ೦ಪೂರ್ಣ ಸ್ವಾಮ್ಯ
ನನ್ನನ್ನೂ ಆವರಿಸುತ್ತಿದೆ...
.
.

ವಿಚಿತ್ರ ಕಾಮನೆಗಳ
ಹುದಲಲ್ಲಿ ಹೂತುಹೋದ
ಊರುಗಳಲ್ಲಿ,
ಹೊಸ ಬೆತ್ತನೆಯ 
ವಿಪರ್ಯಾಸದಿ೦ದ ದೂರ
ಹೊರಟಿದ್ದೇನೆ ..
ಸತ್ಯ ಧರ್ಮಗಳ
ಬುನಾದಿಯ ಮೇಲೆ
ನಿರ್ಮಿತವಾದ ನ್ಯಾಯದ ಸೌಧಗಳ
ಊರನ್ನು ಹುಡುಕುತ್ತಾ,
ಕಿಟಕಿ ಸೀಟು ಕಾದಿರಿಸಿ
ಹೊಸತೊ೦ದು ಯಾತ್ರೆಗೆ 
ಹೊರಟಿದ್ದೇನೆ...

-ಸಾತ್ವಿಕ್ ಹ೦ದೆ