ಗ0ಗಾವತರಣ‌

ಗ0ಗಾವತರಣ‌

ಕವನ

ಘುಡುಘುಡುಘುಡಿಸುವಬ್ಬರದಗುಡುಗು

ಗುಡಿಗಿನಬ್ಬರದ ಬೊಬ್ಬಿರಿವ ಬಿರುಗಾಳಿ

ಬಿರುಗಾಳಿಯಬ್ಬರದ ಭೋರಿಡುವ ಜಡಿಮಳೆ

ಜಡಿಮಳೆಯ ಕಾರಿರುಳು ಕಾರಿರುಳಕಾರ್ಮುಗಿಲು

ಕಾರ್ಮುಗಿಲಕೋಲ್ಮಿಂಚುಕೋಲ್ಮಿಂಚ ಬರಸಿಡಿಲು

ಬರಸಿಡಿಲಮುಸಲಧಾರೆ ಮುಸಲಧಾರೆಯಬ್ಬರದಿ

ಧರೆಗಿಳಿಯೆ ಗಂಗಾವತರಣಗಂಗಾಗರ್ವಭಂಗ

ಧೂರ್ಜಟಿಯಜಟಾಜಾಲತರಂಗಪ್ರೇಮಗಂಗ

ಗಂಗಾಶಿವಸಂಗಪ್ರೇಮಪ್ರಸಂಗರಂಗ

 

 

Comments