ಮಲೆನಾಡ ಹುಡುಗಿಯರು

ಮಲೆನಾಡ ಹುಡುಗಿಯರು

ಕವನ
ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು, ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ, ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು, ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ್ದೆಗಿಳಿದು ಕಳೆಯ ಕೀಳುವವರು, ಕೈಯಲ್ಲಿ ಪುಸ್ತಕವ ಹಿಡಿದು ಕಣದಿ ಹರಡಿದ ಕಾಫಿ ಬೇಳೆಯ ಮೇಲೆ ಕಾಲಾಡಿಸುತ್ತಾ,ಪರೀಕ್ಷೆಗೆ ಓದಿಕೊಳ್ಳುವವರು, ಇವರು ಗಂಭೀರವದನೆಯರು,ಚೆಲುಚೆಲುಚೆಲುವಿಯರು,ಗಯ್ಯಾಳಿ ಮಾಯಾಂಗನೆಯರು, ಕೋಮಲೆಯರು,ಸಣ್ಣಮಾತಿಗೆಲ್ಲಾ ಕಣ್ಣ, ನೀರಕೊಳವಾಗಿಸುವವರು ನಾಚುತ್ತಾತಲೆತಗಿಸಿ ಓದಲು ಬರುವ,ಇವರ ಕೆಣಕಿದರೇ ಆಗಲೂಬಲ್ಲರು ಕಿರಗೂರಿನ ಗಯ್ಯಾಳಿಗಳು

Comments