ಮೃದು ಮಧುರ ಪ್ರೇಮ

ಮೃದು ಮಧುರ ಪ್ರೇಮ

ಕವನ

ಮೃದು ಮಧುರ ಪ್ರೇಮ

ಮೃದು ಮಧುರ ಪ್ರೇಮ ಈ ಕಣ್‍ಗಳಲ್ಲಿ ತೆರೆತೆರೆಗಳಂತೆ ಬಂದು
ಮುತ್ತೊಡೆದ ಮಾತು ಎದೆಯಾಳದಿಂದ ಕಿವಿ ಮನಕೆ ತಂಪು ಸುರಿದು
ಆಸೆಗಳ ಬಾಹು ತನು ಬಳಸಿಕೊಂಡು ಬಿಗಿಹಿತದಿ ಬಾಚಿಕೊಂಡು
ನಿಂತಾಗ ಮನಸ ಕನಸೆಲ್ಲ ನನಸುಗೊಂಡಾಗ ರಸದ ಬಿಂದು
ಚಿಗುರಾಗಿ ಮೂಡಿ ಶೃಂಗಾರ ಕಾವ್ಯವೊಂದು ||

ಇದುಬೇಕು ಎಂದು ಹಂಬಲಿಸಿ ಬಳಲಿ ಪಡೆದಾಗ ಚೆಂದವಾಗಿ
ಮೈಮನಗಳೆಲ್ಲ ಪುಳಕದಲಿ ಮಿಂದು ರೋಮಾಂಚನದಲಿ ಸಾಗಿ
ಈಯುಸಿರು ತಾಗಿ ಬಿಸಿಯೇರಲಾಗಿ ಕವಿಭಾವ ಹಕ್ಕಿಯಾಗಿ
ಬಲು ಗುಪ್ತವಾಗಿ ಅಡಗಿದ್ದ ಒಳದ ಮಾತೆಲ್ಲ ಗೀತವಾಗಿ
ಹೊರಬಂದಿತಿಲ್ಲಿ ಮೃದು ಮಧುರ ರೂಪವಾಗಿ ||

ನೀನೆನ್ನ ಚಿನ್ನ ಚೆನ್ನದಲಿ ಚೆನ್ನ ಬಾಳೆಲ್ಲ ಬಣ್ಣ ಬಣ್ಣ
ಬಿರು ಬಿಸಿಲಿನಲ್ಲು ಬೆಳದಿಂಗಳಂತ ನಗುಚೆಲ್ಲು ಇನ್ನು ಮುನ್ನ
ಬೇಕಿಲ್ಲ ಮತ್ತೆ ಗೊಂದಲಗಳೆಲ್ಲ ಸಂಕ್ರಾಂತಿ ನಿನ್ನ ಎನ್ನ
ಸೌಭಾಗ್ಯಕೆಂದು ಈ ಸೃಷ್ಟಿ ರಚಿಸಿ ಕಳಿಸಿಹುದು ನೋಡಿದನ್ನ
ಮೃದು ಮಧುರ ಪ್ರಿತಿ ಕಾಣುವುದು ತೆರೆಯೆ ಕಣ್ಣ ||

                                                           -    ಸದಾನಂದ
                                                                             (04/07/2013)