ಸವೆಯದ ಸಾಲುಗಳು..!

ಸವೆಯದ ಸಾಲುಗಳು..!

ಕವನ

ಕವಿತೆ ಬರೆದು ತುಂಬಾ ದಿನವಾಗಿದೆ. ಆದರೆ, ಬರೆಯಲು ಕುಳಿತಾಗ ಅರಳಿದ ಒಂದಷ್ಟು ಭಾವಗಳೇ ಈಗ ಸಾಲಾಗಿವೆ. ಓದಿ..ಖುಷಿಯಾದರೆ ತಿಳಿಸಿ..

ಹೆಣ್ಣು ಎಷ್ಟು ಸುಳ್ಳು. ಎಷ್ಟು ನಿಜ.
ಅವಳ ಸುತ್ತ ಹುಟ್ಟಿಕೊಳ್ಳುತ್ತವೆ.
ಸಾವಿರಾರು ಸುಳ್ಳು..
----
​ನವಿಲು ಹಾಡೋದಿಲ್ಲ. ಕುಣಿಯುತ್ತದೆ.
ನನ್ನವಳು ಹೇಳೋದಿಲ್ಲ. ಪ್ರೀತಿಸುತ್ತಲೇ
ಇರುತ್ತಾಳೆ..
​----
ಸವಿ ನೆನಪು ಆಗ. ಈಗ ನವಿರಾದ ಭಾವ.
ಕಾರಣ ಹಾಸ್ಯ ಸ್ಪರ್ಶಿಸಿದೆ.
----
ಹೃದಯಲ್ಲಿ ಏನಿದೆಯೋ ಏನೋ. ಆದರೆ,
ಅಲ್ಲಿ ಪ್ರೀತಿ ಇದೆ ಎಂಬ ನಂಬಿಕೆ ಹೆಚ್ಚಿದೆ.
----
ಅವಳು ಖುಷಿಯಾಗಿದ್ದಾಳೆ. ಇವತ್ತು 
ನಾನು ಬೇಗ ಬಂದೆ ಮನೆಗೆ...
---
ಭಾವನೆಗಳು ನಿರ್ಮಲವಾಗಿವೆ.
ಮನಸ್ಸು ಹಗುರವಾಗಿದೆ.ಕಾರಣ
ಅವಳ ಮೊಗದಲ್ಲಿ ನಾ ಕಂಡೆ
ಶಾಶ್ವತ ಖುಷಿ.
----
ಒಮ್ಮೆ ರಾತ್ರಿ.ಮತ್ತೊಮ್ಮೆಮುಂಜಾವು.
ಆದರೆ,ಅವಳು ಮಾತ್ರ ಚೆಂಬೆಳಕು..
----
ಸಾವಿರ ಕನಸು ಇವೆ. ಒಂದೇ ಒಂದು
ಕನಸು ಇನ್ನೂ ನಿಜವಾಗಿಲ್ಲ. ಆದರೂ
ಕನಸು ಕಾಣೋದು ಇನ್ನೂ ಕಮ್ಮಿ
ಆಗಿಲ್ಲ.
----
ಎದೆ ಬಡೆತ ನಿಂತಿದೆ. ಉಸಿರು ಹಾರಿದೆ.
ಸಾವು ಸಮೀಪಿಸಿದ ಅನುಭವ ಆಗಿಲ್ಲ.
ಅವಳ ನೆನಪು ಜೀವಂತವಾಗಿಟ್ಟಿದೆ.
---
ನಾನು ಕರಗಿದೆ.ಅವಳು ಮರುಗಿದಳು.
ಚಿಕ್ಕ ವಯಸ್ಸು. ಇಬ್ಬರೂ ಪ್ರೀತಿಸಿದ್ದೇವೆ.
ಈಗ ನಮ್ಮ ಪ್ರೀತಿಗೆ 6 ವರ್ಷ. ನಿಂಬಿಕೆಗೆ
ಸಾವಿರ..ಸಾವಿರ ವರ್ಷ.
----
ಚೆಲುವು ನಮ್ಮದಲ್ಲ.ವಯಸ್ಸಿನದು.
ಇರೋವರೆಗೂ ಖುಷಿಯಾಗಿರಿ.
ಚೆಲುವು ನಿಮ್ಮನ್ನ ಬಿಟ್ಟು ಹೋಗೋದಿಲ್ಲ.
----
-ರೇವನ್

ಚಿತ್ರ್