’ಮಾ’ ದಿನ

’ಮಾ’ ದಿನ

ಕವನ

ಎಚ್ಚರಿಸಿ
ಲಲ್ಲೆಗರೆಸಿ
ಮುದ್ದಿಸಿ
ಸ್ನಾನಿಸಿ ಶುದ್ಧಿಸಿ
ಅಲಂಕರಿಸಿ
ಕಂದನ ತನ್ನ ಕಣ್ತುಂಬಿಸಿ
ಕೊಳ್ಳುವ ಘಳಿಗೆ
ಪೂರ್ಣವಿರಾಮದ ಚಿನ್ಹೆ
ಇಟ್ಟಾಗ ಗಲ್ಲದಡಿಗೆ !

ಹಾಲ ಬಿಸಿ ಆರಿಸಿ
ಕೇಸರಿಯ ನವಿರು
ದಳವಿಳಿಸಿ
ಸಿಹಿ ಕರಗಿಸಿ
ಕೆನೆ ಗಟ್ಟಿಸಿ
ತನ್ನ ಕುಡಿಗೆ
ಕುಡಿಸಿ
ದರಷ್ಟೆ ಅಮ್ಮನಿಗೆ
ಆ ದಿನದ ಬೆಳಗು
ಅವಳ ನಿರಾಳದಿನಕ್ಕೆ ಮೆರಗು !

ನಕ್ಷತ್ರಗಳ ತೋರಿಸಿ
ದವಳು
ಅವುಗಳ ಎಣಿಸಿ
ಕೂಡಿಸಿ
ಗುಣಿಸಿದ 
ಮೊತ್ತಕ್ಕೆ ಮೇಲಿನದು
ಅವಳು ಕೈ ಹಿಡಿದು
ದಾರಿ ಹಿಡಿಸಿದ್ದು

ಮುಗಿಯದ ಕಳಕಳಿ
ನಿರಂತರ ಹರಿವ 
ವಾತ್ಸಲ್ಯ ಝರಿ 
ದೇಹ ಕರಗಿಸಿ
ಕಂದನ ಗಟ್ಟಿಯಾಗಿಸಿ
ತಾನು ಅಣುವಾದದ್ದು

ಕನಸಿ
ಕಟ್ಟಿಟ್ಟ ಬಂಧಗಳ
ಅಲೆಯುರುಳಿಸಿ 
ಪ್ರೇಮ ಪರಿಮಳದ
ಸುಗಂಧ ಆಗರದ ಹಡಗ 
ಸಂಸಾರ ಸಾಗರದಲ್ಲಿ
ತೇಲಿ
ಸುವ ಸಾಹಸಿ
ಅವಿನಾಶಿ 
ಅಮ್ಮ
ಅಮೃತ ಜೀವಿ

 

(ಚಿತ್ರ ಕೃಪೆ:ಅಂತರ್ಜಾಲ)

ಚಿತ್ರ್