ಎಲ್ಲ ಪುಟಗಳು

ಲೇಖಕರು: srinivasps
ವಿಧ: ಚರ್ಚೆಯ ವಿಷಯ
December 31, 2007
ನಮ್ಮ ನಿಸ್ಸಾರ್ ಅಹ್ಮದ್ ರವರು ಬರೆದಿರುವ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ ಹಾಡಿನ ಪೂರ್ಣ ಸಾಹಿತ್ಯ ಹುಡುಕುತ್ತಿದ್ದೇನೆ... ಯಾರಲ್ಲಾದರೂ ಇದ್ದರೆ ದಯ ಮಾಡಿ ಹಂಚಿಕೊಳ್ಳುವಿರಾ? ಹಾಡಿನ ಕೊಂಡಿ ದೊರೆತರೆ ಇನ್ನೂ ಒಳಿತು... google ನಲ್ಲಿ ಹುಡುಕಿದರೆ ಉದ್ಭವ.ಕಾಮ್ ನಲ್ಲಿನ ಕೊಂಡಿ ದೊರೆಯಿತು; ಆದರೆ ಉದ್ಭವ.ಕಾಮ್ ಸದ್ಯಕ್ಕೆ ’ರಿಪೇರಿ’ ಮಾಡುತ್ತಿದ್ದಾರೆ ಎಂದು ಕಾಣುತ್ತದೆ... --ಶ್ರೀ
ಲೇಖಕರು: raghottama koppar
ವಿಧ: Basic page
December 31, 2007
ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ ೨೦೦೭ನೇ ವರುಷ ಮುಗಿಯುತ್ತ ಬಂತು. ಈಗಾಗಲೇ ಎಲ್ಲರೂ ೩೧ರ ರಾತ್ರಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ೨೦೦೭ ಹೇಗಿತ್ತು? ಅದರ ಸಿಹಿ ಕಹಿ ನೆನಪುಗಳನ್ನು ಮೆಲುಕುಹಾಕುತ್ತಾ ಬಂಧು ಮತ್ತು ಮಿತ್ರರೊಂದಿಗೆ ಕೇಕೆ ಹೊಡೆಯುವ ಕಾಲ ಹತ್ತಿರವೇ ಬಂದಿದೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ನಾವೆಲ್ಲ ಇನ್ನೊಂದು ವಿಚಾರವನ್ನು ಹಾಕಿಕೊಂಡಿರುತೇವೆ. ಅದು ಹೊಸ ವರ್ಷದಿಂದ ಬೆಳಿಗ್ಗೆ ಜಾಗಿಂಗ್…
ಲೇಖಕರು: roopablrao
ವಿಧ: ಬ್ಲಾಗ್ ಬರಹ
December 31, 2007
ಆಗ ನನ್ನ ೧೦ನೇ ತರಗತಿ ಒಮ್ಮೆ ಕವನ ವಾಚನ ಸ್ಪರ್ಧೆ (ಸಿದ್ದಯ್ಯ ಪುರಾಣಿಕರವರ ಸ್ಮರಣಾರ್ಥವಿರಬೇಕು) ಮತ್ತೊಬ್ಬ ಹುಡುಗಿ (ನಾವಿಬ್ಬರೇ ಹುಡುಗಿಯರು) ಒಂದು ಕವನ ಓದಿದಳು. ಹೆಂಗಸರ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ . ಆಗ ಅದರ ಅರ್ಥ ನನಗೆ ಅಷ್ಟು ನನಗೆ ಆಗಲಿಲ್ಲ . ಈಗ ಬೆಳೆದಂತೆಲ್ಲ ಅದರ ಅರ್ಥ ಅರಿವಾಗುತ್ತಿದೆ. ಅದರ ಸಾರಾಂಶ ನನ್ನ ಬದುಕಿಗೆ( ಪ್ರೊಬಾಬಲಿ ಎಲ್ಲ ಹುಡುಗಿಯರ ಬದುಕಿಗೆ) ತುಂಬ ಹತ್ತಿರವಾಗಿದೆ. ಓದುವಾಗ ನನ್ನ ಗುರಿ ಓದಬೇಕು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.…
ಲೇಖಕರು: rameshbalaganchi
ವಿಧ: Basic page
December 30, 2007
ಇದೀಗ ತೂಗುಕತ್ತಿ ನೆತ್ತಿಯಮೇಲಿದೆ. ನನ್ನ ಮಡದಿ ತೊಗರಿನುಚ್ಚಿನುಂಡೆ ತಟ್ಟೆಗೆ ಹಾಕಿ ಟೀಪಾಯ್ ಮೇಲಿಟ್ಟದ್ದನ್ನು ಕಾಣದವನಂತೆ ಈಸೀಚೇರಿನಲ್ಲಿ ಕೂತು ಅದಾಗಲೇ ಮೂರು ಬಾರಿ ತಿರುವಿಹಾಕಿದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯನ್ನು ತೀರ ಆಸಕ್ತಿಯಿಂದ ಓದುತ್ತಿರುವಂತೆ ನಟಿಸಿದೆ. ಅವಳೆದುರು ನಾನು ತಿಂಡಿಯ ತಟ್ಟೆಯನ್ನು ನೋಡಿದರೆ ನನ್ನ ಗುಟ್ಟು ನನ್ನ ಮೂಗಿನಿಂಡಲೇ ರಟ್ಟಾಗುವುದು ಸ್ವತ:ಸಿದ್ಧ!! ಅವಳು ರೇಗುತ್ತ "ಅದೇನು ಒಳ್ಳೆ ರಿಟೈರ್ ಆದ ಮುದುಕರ ಥರ ಅಷ್ಟುಸಾರಿ ಓದಿದ್ದನ್ನೇ ಓದ್ತೀರಿ? ಬೆಳಗಿನಿಂದ…
ಲೇಖಕರು: rameshbalaganchi
ವಿಧ: Basic page
December 30, 2007
ಮದುವೆಯಾದ ಹೊಸದರಲ್ಲಿ ನಮ್ಮ ಸಂಸಾರ ಹೂಡಿಸಿಕೊಡಲು ನನ್ನಮ್ಮ ನನ್ನಪ್ಪನೊಡನೆ ಬಂದಿದ್ದಳು. ನಾಲ್ಕು ದಿನ ಮುಳ್ಳಿನ ಮೇಲಿದ್ದಂತೆ ಇದ್ದು ಹೊರಟ ನನ್ನಪ್ಪನಂತೂ ಹೊರಡುವ ಗಳಿಗೆಯಲ್ಲಿ ಏಕಾಂತದಲ್ಲಿ ನನ್ನ ಕೈಹಿಡಿದು ಬಿಸುಸುಯ್ದರು. "ಕೋಟೆ ಆಂಜನೇಯ ನಿನ್ನನ್ನು ಕಾಪಾಡಲಿ" ಎಂದಷ್ಟೆ ಚುಟುಕಾಗಿ ಹಾರೈಸಿದರು. ಮುಂಜಾನೆ ಅವರನ್ನು ಬಸ್ ಹತ್ತಿಸಿ ಬರುವಾಗ "ಮಗು, ನಿನ್ನ ಮನೆಯ ಪಕ್ಕದ ಸೈಟಿನಲ್ಲಿ ಬೆಳೆದಿರುವ ಹಾಳು ಎಕ್ಕದ ಗಿಡಗಳನ್ನು ಬೇರುಸಹಿತ ಕೀಳಿಸಿಬಿಡು." ಎಂದು ಒಗಟಿನಂಥ…
ಲೇಖಕರು: kulmanju
ವಿಧ: ಬ್ಲಾಗ್ ಬರಹ
December 30, 2007
ಶರಣ್ರಿಯಪ್ಪಾ. ನನ್ನ ಹೆಸರ ಮಂಜುನಾಥ ಕುಲಕರ್ಣಿ.ಗುಲ್ಬರ್ಗಾದವಾ. ಈಗ ದೇಶಾ ಬಿಟ್ಟ ಬಂದಿನಿ.ಈವತ್ತ ಮೊದಲ್ನೆ ಸರ್ತಿ ಕಂಪ್ಯುಟರ್ನಾಗ ಕನ್ನಡದಾಗ ಬರಿಲಿಕ್ ಹತ್ತಿನಿ. ಇಷ್ಟ ದಿನಾ ನೀವೆಲ್ಲ ಬರ್ದಿದ್ದ ನೊಡಿ ನನಗೂ ಬರಿಬೇಕಂತ ಭಾಳ ಮನಸ್ಸಾಗ್ತಿತ್ತು. ಈವತ್ತ್ ಒಂದ ಪೊಣ ಘಂಟಾ ಕುಂತ ಇದನ್ನ ಕುಟ್ಟಿನಿ. ಮುಂದ ಇನ್ನಮುಂದ ಬರೀಬೇಕಂತ ಆಶಾ ಅದ. ಈಗ ಸ್ವಲ್ಪ ತ್ರಾಸ ಆಗೆದ. ಮುಂದ ಬರ್ತಾ ಬರ್ತಾ ಬರ್ಯೊದು ಭಾಳ ತ್ರಾಸ ಆಗ್ಲಿಕ್ಕಿಲ್ಲ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 30, 2007
ಸಂತ್ಯಾಗ ಕಾಯಿಪಲ್ಲೇ ಕುಟ್ರಿ ಹಾಕಿದಂಗ ಇಲ್ಲಿ ಒಂದಿಷ್ಟು ಶಬ್ದ ಕುಟ್ರಿ ಹಾಕೇನಿ , ನೋಡ್ರಿ , ನಿಮಗ ಎಷ್ಟು ಗೊತ್ತ್ ಅವ ಅಂತ , ನಿಮಗ ಏನಾದ್ರೂ ಉಪಯೋಗ ಆಗ್ತಿದ್ರ ತಕೊಂಡು ಬಳಸ್ಲಿಕ್ಕೆ ಶುರು ಮಾಡ್ರಿ ! ಕುಟ್ರಿ = ಗುಡ್ಡೆ ವಸ್ತ= ಒಡವೆ ಒಡವಿ-ವಸ್ತ = ಒಡವೆ( ಜೋಡುಪದವಾಗಿ ) ಜಿನ್ನೆ - ಅಟ್ಟ ? ಸೆಲ್ಲೆ = ಶಲ್ಯ ದೈನಾಸಪಡು = ದೈನ್ಯಭಾವ ಹೊಂದು ಮೈ ತೊಳಕೊಳ್ಳುವದು / ಜಳಕ = ಸ್ನಾನ ಮಾಡು (ಅಪ್ಪಟ ಕನ್ನಡ - ಗಮನಿಸಿ) ಸ್ನಾನಾ-ಮೈ = ಸ್ನಾನ ಇತ್ಯಾದಿ ಕಡಿಗಿ =ಮುಟ್ಟು ( ಕಡಿಗಿ-ಮುಟ್ಟು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 30, 2007
ಪಟ್ಟಣದಲ್ಲಿ ಕ್ರಿಸ್ಮಸ್‌ ದೀಪಗಳು..   ಹಬ್ಬದಡುಗೆ ಉಂಡು ತಿಂದು ಕುಡಿದು ಬೀಗಿ ತೇಗಿ...   ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 30, 2007
- ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ. ಬಾಗಿಲು ತೆರೆದೇ ಇತ್ತು. ಹೊರಟು ರೆಡಿಯಾಗಿದ್ದ ರಾಜು ವಾಂತಿ ಮಾಡುತ್ತಿದ್ದನು. ವಿಚಾರಿಸಿದಾಗ “ಹೆಂಡತಿ ಅರ್ಜೆಂಟಿಗೆ ಪುಳಿಯೊಗರೆ ಮಾಡಿಟ್ಟು ಕೆಲಸಕ್ಕೆ ಹೋಗಿರುವಳು.ಪಿತ್ತವಾಗಿದೆ.ಅದಕ್ಕೆ ವಾಂತಿಯಾಯಿತು.ಸ್ವಲ್ಪ ಸುಧಾರಿಸಿಕೊಂಡು ಬರುವೆನು.”ಎಂದನು.…
ಲೇಖಕರು: Ashwini
ವಿಧ: ಬ್ಲಾಗ್ ಬರಹ
December 29, 2007
ಎಕಾದೆ? ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ? ಲೆಕ್ಕ ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ ಕೂಡು ಕಳೆಯುವ ಲೆಕ್ಕ... ಕೂಡಿದೆಷ್ಟೂ... ಕಳೆದಿದೆಷ್ಟೂ... ಗುಣಿಸಿ ಭಾಗಿಸದಿದ್ದರು ಉಳಿದಿದೆ ಶೇಷ