ಪುಸ್ತಕ ಪರಿಚಯ

ಲೇಖಕರು: Ashwin Rao K P
August 01, 2023
“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ... “ಟಿ.ಎಸ್. ಗೊರವರ ಅವರ ಕತೆಗಳನ್ನ ಅಲ್ಲಲ್ಲಿ ಪೇಪರ್ ಮತ್ತು ಮ್ಯಾಗಜೀನುಗಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ಒಟ್ಟಿಗೆ ಅವರ ಕತೆಗಳನ್ನು ಪುಸ್ತಕ ರೂಪದಲ್ಲಿ ಓದಿದ್ದು 'ಮಲ್ಲಿಗೆ ಹೂವಿನ ಸಖ' ಪುಸ್ತಕದಿಂದ, ತರಿಸಿಕೊಂಡು ಇನ್ನೂ…
ಲೇಖಕರು: Ashwin Rao K P
July 29, 2023
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ…
ಲೇಖಕರು: Ashwin Rao K P
July 27, 2023
ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ…
ಲೇಖಕರು: Ashwin Rao K P
July 25, 2023
ಕಥೆಗಾರ್ತಿ ಶೈಲಜಾ ಹಾಸನ ಇವರು ಬರೆದ ‘ನಿಲ್ಲು ನಿಲ್ಲೆ ಪತಂಗ' ಕಥಾ ಸಂಕಲನವು ಬಿಡುಗಡೆಯಾಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... “ಸಂಜೆ ಸಾಹಿತ್ಯ ಪ್ರಶಸ್ತಿ ಪಡೆದ ಕಥಾ ಸಂಕಲನ "ನಿಲ್ಲುನಿಲ್ಲೆ ಪತಂಗ.." ದೊಡ್ಡ ಮಟ್ಟದ ಸ್ಪರ್ಧೆಯನ್ನು ಎದುರಿಸಿ ಗೆದ್ದ ಕೃತಿ. ಮೊಟ್ಟ ಮೊದಲ ಸಂಜೆ ಸಾಹಿತ್ಯ ಪ್ರಶಸ್ತಿ 2022 ನ್ನು ಮುಡಿಗೇರಿಸಿಕೊಂಡ ಹೆಮ್ಮೆಯೂ…
ಲೇಖಕರು: Ashwin Rao K P
July 23, 2023
‘ವಿಶ್ವವಾಣಿ’ ಓದುಗರಿಗೆ ರೂಪಾ ಗುರುರಾಜ್ ಹೆಸರು ಚಿರಪರಿಚಿತ. ಅವರು ಪ್ರತೀ ದಿನ ಬರೆಯುವ ‘ಒಂದೊಳ್ಳೆ ಮಾತು’ ಅಂಕಣ ಬಹಳಷ್ಟು ಜನರ ಮನಗೆದ್ದಿದೆ. ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ನಡೆಯುವ ಚರ್ಚೆಗಳನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುವ ಇವರ ಅಂಕಣಗಳ ಸಂಗ್ರಹದ ಮೊದಲ ಭಾಗ ‘ಒಂದೊಳ್ಳೆ ಮಾತು ಭಾಗ 1’ ಈಗಾಗಲೇ ಕಳೆದ ವರ್ಷ ಬಿಡುಗಡೆಯಾಗಿದೆ. ಈಗ ಬಿಡುಗಡೆಯಾಗಿರುವುದು ಅದೇ ಪುಸ್ತಕದ ಎರಡನೇ ಭಾಗ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ‘ಥಟ್ ಅಂತ ಹೇಳಿ...' ಎಂಬ ದೂರದರ್ಶನ ಚಂದನದ ಕಾರ್ಯಕ್ರಮ…
ಲೇಖಕರು: Ashwin Rao K P
July 20, 2023
ಶರಣಬಸವ ಕೆ.ಗುಡದಿನ್ನಿ ಅವರು ಬರೆದ ನೂತನ ಕಥಾ ಸಂಕಲನ “ಏಳು ಮಲ್ಲಿಗೆ ತೂಕದವಳು" ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ನಿಮ್ಮ ಓದಿಗಾಗಿ... “ಶರಣಬಸವ ಕೆ. ಗುಡದಿನ್ನಿಯವರು ಕಳೆದ ಆರೇಳು ವರ್ಷಗಳಿಂದ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗ ಮತ್ತೊಂದು ಕಥೆಗಳ ಕಟ್ಟನ್ನು ಪ್ರಕಟಣೆಗೆ ಸಿದ್ಧ ಮಾಡಿದ್ದಾರೆ.ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ…