ಪುಸ್ತಕ ಪರಿಚಯ

ಲೇಖಕರು: Ashwin Rao K P
April 26, 2024
ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ. ಇಂದು ನಾಡಿನಾದ್ಯಂತ ಕನ್ನಡ ನಾಡಿನ ಲೇಖಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇಲ್ಲಿ ಇವರು ಬರೆದಿರುವ…
ಲೇಖಕರು: Ashwin Rao K P
April 24, 2024
'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ…
ಲೇಖಕರು: Ashwin Rao K P
April 22, 2024
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿ ಅಯೋಧ್ಯಾ. ಇದು ರಾಮನ ಇತಿಹಾಸವಲ್ಲ ; ರಾಮಮಂದಿರದ ಇತಿಹಾಸ ಎಂದು ಈ ಕೃತಿಯ ಲೇಖಕರಾದ ಎಸ್ ಉಮೇಶ್ ಅವರು ಪುಸ್ತಕದ ಮುಖಪುಟದಲ್ಲೇ ಅಚ್ಚುಹಾಕಿಸಿದ್ದಾರೆ. ಕೆಲ ಮಂದಿರಗಳಿಗೆ ಸಹಸ್ರ ವರ್ಷಗಳ ಪೌರಾಣಿಕ ಹಿನ್ನಲೆ ಇರುತ್ತದೆ. ಇನ್ನು ಕೆಲ ಮಂದಿರಗಳಿಗೆ ಶತಶತಮಾನಗಳ ಇತಿಹಾಸವಿರುತ್ತದೆ. ಆ ಮಂದಿರದ ವೈಭವ, ಅದರ ಮೇಲೆ ಎರಗಿದ ದಾಳಿಗಳು, ಅದರ ಜೀರ್ಣೋದ್ಧಾರದ ಸಂಕಲ್ಪ,…
ಲೇಖಕರು: Ashwin Rao K P
April 19, 2024
ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ... “ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ. ಬರೀ ನಾನು, ನನ್ನಿಂದ, ನನಗಾಗಿ, ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾನೆ. ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು,…
ಲೇಖಕರು: Ashwin Rao K P
April 17, 2024
ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಸಂಜಯ್ ಬಾರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ... “ಪರಕಾಲ ಪ್ರಭಾಕರ್ ಅವರು ಪುನರುಜ್ಜೀವಕ ಪುರುಷರು: ಒಬ್ಬ ವಿಖ್ಯಾತ…
ಲೇಖಕರು: addoor
April 16, 2024
ಭಾರತದ ದಟ್ಟ ಕಾಡುಗಳ ಜನರ ಮತ್ತು ನರಭಕ್ಷಕ ಪ್ರಾಣಿಗಳ ಬದುಕನ್ನು ಆಪ್ತವಾಗಿ, ಮನಸೂರೆಗೊಳ್ಳುವ ಸಾಹಿತ್ಯವಾಗಿ ದಾಖಲಿಸಿದ ಕೆನೆತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹ ರೂಪಾಂತರ ಇದು. ಇದರಲ್ಲಿವೆ ನಾಲ್ಕು ಕಥನಗಳು. “ದಿಗುವಮೆಟ್ಟದ ಕೊಲೆಗಡುಕ” ಮೊದಲನೆಯ ಕಥನ. ಆಂಧ್ರಪ್ರದೇಶದ ಗುಂತಕಲ್ ರೈಲ್ವೆ ಜಂಕ್ಷನಿನಿಂದ ಪೂರ್ವಕ್ಕೆ ರೈಲಿನಲ್ಲಿ ಸಾಗಿದರೆ ಸಿಗುವ ಪಟ್ಟಣ ನಂದ್ಯಾಲ್. ಮುಂದುವರಿದರೆ, ಬಸವಪುರ ಸ್ಟೇಷನಿನ ನಂತರ ಒಂದು ಚಿಕ್ಕ ಮತ್ತೊಂದು ಬಹಳ ಉದ್ದದ ಸುರಂಗಗಳು ಸಿಗುತ್ತವೆ. ತದನಂತರ ಸಿಗುವ…