ಖಾಲಿ ಹಾಳೆ!
ಖಾಲಿ ಹಾಳೆ
ನನ್ನ ಪರಿಚಯ ಬೇಕೆ ನಿನಗೆ ನಳಿನಾಂಗಿ?
ನಾನೋರ್ವ ಹಾಳೆ ಕೇವಲ ಖಾಲಿ ಹಾಳೆ!
ವೇದದ್ದಲ್ಲ, ಗೀತೆಯದ್ದಲ್ಲ, ರಾಮಾಯಣ
ಮಹಾಭಾರತದ್ದಲ್ಲ, ಕಾಮಸೂತ್ರದ್ದಲ್ಲ
ಕಥೆ, ಕಾದಂಬರಿ ಪತ್ರಿಕೆಯದ್ದಲ್ಲವೇ ಅಲ್ಲ
ಆಗಿದ್ದರೆ ಚೆನ್ನಿತ್ತು, ಸಾರ್ಥಕವಿರುತ್ತಿತ್ತು!
ನಿನ್ನೊಲವನರಸಿ, ರಕ್ತಧಾರೆಯಲ್ಲಿ ನೆಂದ
ಹೃದಯವನ್ನು ಹೊತ್ತ, ಓಲೆಯ ಹಾಳೆ!
ಅವನು ಬರೆದ ಲೆಕ್ಕವಿಲ್ಲದ ಪತ್ರ ಗ್ರಂಥದ
ಒಂದು ಹಾಳೆ! ಇಂದು ನಾನು ಖಾಲಿ ಹಾಳೆ!
ನಕ್ಕುಬಿಟ್ಟೆ! ನಿರಿಗೆ ಚಿಮ್ಮುತ್ತ ಒದ್ದು ಹೋದೆ
ಹೃದಯ ಚೀರಿದ್ದು, ರಕ್ತ ಪುಟಿದದ್ದು ನಿನಗೆ
ಕೇಳಲಿಲ್ಲ ಕಾಣಲೇ ಇಲ್ಲ ತಪ್ಪು ನಿನ್ನದಲ್ಲ
ನಿನ್ನದಲ್ಲವೇ ಅಲ್ಲ ತಪ್ಪು ಕುರುಡು ಬುದ್ಧಿಯದೆ!
ನೀನು ನಕ್ಕೆ, ಒದ್ದೆ, ಜಿಗಿದು ಹೊರಟು ಹೋದೆ!
ನೋವನ್ನು ತಿನ್ನುತ್ತಿದ್ದಾನೆ, ಕುಡಿಯುತ್ತಿದ್ದಾನೆ
ನೋವನ್ನೇ ಉಸಿರಾಡುತ್ತಿದ್ದಾನೆ; ಹರಿಸುತ್ತಿದ್ದಾನೆ
ಕಣ್ಣೀರ! ಪತ್ರ ಗ್ರಂಥದ ಹಾಳೆಗಳೆಲ್ಲ ನೆಂದಿವೆ
ಅಕ್ಷರಗಳೆಲ್ಲ ಅಳಿಸಿಹೋಗಿವೆ ಖಾಲಿಯಾಗಿವೆ
ಹೃದಯ ಮಾತ್ರ ನಿನಗಾಗಿ ಇನ್ನೂ ಮಿಡಿದಿದೆ
ಸಿಂಧೂ ಕಣಿವೆಯ ಉತ್ಖನನದಲ್ಲಿ ದೊರೆತಂತ
ಭತ್ತದೊಳಗಿನ ಬತ್ತದ ಜೀವಾಂಕುರದ ಹಾಗೆ
ಸುಪ್ತವಾಗಿದೆ! ಜೀವ ಕೊಡುವೆಯಾ ಗೆಳತಿ?
-----
ಡಾ|ನಾ.ಸೋಮೇಶ್ವರ
http://www.polyvore.com/cgi/img-thing?.out=jpg&size=l&tid=11896598
Comments
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by ksraghavendranavada
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by naasomeswara
ಉ: ಖಾಲಿ ಹಾಳೆ!
ಉ: ಖಾಲಿ ಹಾಳೆ!
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by manju787
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by santhosh_87
ಉ: ಖಾಲಿ ಹಾಳೆ!
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by kavinagaraj
ಉ: ಖಾಲಿ ಹಾಳೆ!
In reply to ಉ: ಖಾಲಿ ಹಾಳೆ! by komal kumar1231
ಉ: ಖಾಲಿ ಹಾಳೆ!
ಉ: ಖಾಲಿ ಹಾಳೆ!