ಒಮ್ಮೊಮ್ಮೆ ಅನ್ಸುತ್ತೆ _ ೩

ಒಮ್ಮೊಮ್ಮೆ ಅನ್ಸುತ್ತೆ _ ೩

 ಬೆಳಗ್ಗೆ ಹೊರಡುವಾಗಲೆ ಗಡಿಬಿಡಿ. ಮುಖ್ಯ ರಸ್ತೆಗೆ ಬಂದು ವಾಹನದ ವೇಗ ಏರಿಸಿದಾಗ ನೆಮ್ಮದಿ ಕೆಲಹೊತ್ತು ಅಷ್ಟೆ ಕಚೇರಿ ತಲುಪುವೆ.

ಎದುರಿಗೆ ಯುವಕನೊಬ್ಬ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಗವಾಗಿ. ಹಗಲ ಬೆಳಕಿನಲ್ಲು ಕಣ್ಣಿಗೆ ಕಾಣುವಂತಿತ್ತು ಅವನ ವಾಹನದ ದೀಪ
ಕೈಸನ್ನೆ ಮಾಡಿ ತೋರಿದೆ ಆರಿಸಲು. ಅವನ ತನ್ನ ವಾಹನದ ದೀಪ ನಂದಿಸಿದ ನನ್ನತ್ತ ಒಂದು ನಗೆ ಬೀರಿ ಮುಂದೆ ನಡೆದ. ಈಗ 
ಮತ್ತೊಬ್ಬ ಹುಡುಗ ತನ್ನ ದ್ವಿಚಕ್ರಿಯಲ್ಲಿ , ಮತ್ತದೆ ಉರಿಯುತ್ತಿರುವ ದೀಪ, ಅವನಿಗೂ ಕೈಸನ್ನೆ ಮಾಡಿದೆ ದೀಪವನ್ನು ತೋರಿದೆ
ಅವನು ತನ್ನ ವಾಹನದ ದೀಪ ನಂದಿಸಿದ ನನ್ನತ್ತ ಒಂದು ನಗೆ ಬೀರಿ ಮುಂದೆ ನಡೆದ.
 
ಈಗಿನ ಯುವಕರೆ ಹೀಗೆ ಜವಾಬ್ದಾರಿ ಕಡಿಮೆ ಎಂದಿತು ನನ್ನ ಮನ. ಸದಾ ಕೆಲಸಗಳಲ್ಲಿ ಎಂತದೊ ಗಡಿಬಿಡಿ, ಅಸಡ್ಡಾಳತನ, ಜೊತೆ ಗೆ ಮರೆವು, ಶಿಸ್ತುರಹಿತ ಜೀವನ ಇವರದು ಎಂಬ ಭಾವದಲ್ಲೆ ನಾನು ಕಚೇರಿ ತಲುಪಿದೆ. ದ್ವಿಚಕ್ರಿ ಗಾಡಿ ನಿಲ್ಲಿಸಿ ಕೀ ತಿರುಗಿಸುವ ಮುನ್ನ ಏಕೊ ಗಮನಿಸಿದೆ.
ಛೇ! ನನ್ನ ಗಾಡಿಯ ದೀಪವು ಉರಿಯಿತ್ತಿದೆ, ರಾತ್ರಿ ನಿಲ್ಲಿಸಿದಾಗ ಆರಿಸಲು ಮರೆತಿರುವೆ.
ಆ ಯುವಕರ ನಗುವಿನ ಕಾರಣ ಅರ್ಥವಾಗುತ್ತಿರುವಂತೆ ಅದನ್ನು ಮರೆಯಲು ಗಡಿಬಿಡಿಯಲ್ಲಿ ಒಳಗೆ ಹೊರಟೆ.
Rating
No votes yet

Comments