ಕನ್ನಡದಲ್ಲಿ ಶೆಲ್ಲಿ ಕವನದ ಅರ್ಥ ಮೂಡುವಂತೆ ಅನುವಾದ ಮಾಡಿದ್ದೀರಿ. ಚೆನ್ನಾಗಿದೆ. ಕೊನೆಯ ಸಾಲುಗಳಲ್ಲಿ ಮರಳುಗಾಡಿನಲ್ಲಿ ಹಾರಾಡುವ ಹಕ್ಕಿಗಳ ನೆರಳಿನ ಪ್ರಸ್ತಾಪ ಬರುತ್ತದೆ ಎಂದು ನೆನಪು. ಅದು ಮರೆಯಾದಂತಿದೆ. ನಿಮ್ಮ ಕುತೂಹಲಕ್ಕೆಂದು ಒಂದು ಸೂಚನೆ. ಜಿ. ಎಸ್. ಶಿವರುದ್ರಪ್ಪನವರು ಕಾಲಜ್ಞಾನಿ ಮತ್ತು ಚರಿತ್ರೆ ಎಂಬ ಕವಿತೆ ಬರೆದಿದ್ದಾರೆ. ಅದರಲ್ಲಿ ಅರ್ಥಭಾಗ ಶೆಲ್ಲಿಯ ಈ ಕವನ ಮತ್ತು ಇನ್ನರ್ಧಭಾಗ ಲೋಕವನ್ನೆಲ್ಲ ಗೆದ್ದ ಬಾಹುಬಲಿಯ ಕತೆ. ಪೂರ್ವ ಪಶ್ಚಿಮದ ಕತೆಗಳನ್ನು ಬೆಸೆದು ಹೊಸ ಕವಿತೆ ಮಾಡಿದ್ದಾರೆ. ಅವರ ಇತ್ತೀಚಿನ ಸಮಗ್ರ ಕಾವ್ಯದಲ್ಲಿ ಅದು ಸಿಗುತ್ತದೆ. ಮನಸ್ಸಿಗೆ ಆಹಾರ ಕೊಡುವ ಅನುವಾದ ನೀಡಿರುವುದಕ್ಕೆ ಥ್ಯಾಂಕ್ಸ್.
ನಾಗಭೂಷಣ
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
ಒಳ್ಳೆಯ ಪ್ರಯತ್ನ