'ಬ್ಲ್ಯಾಕ್ ಕಾಫಿ’ ಸೇವನೆಯಿಂದ ಲಾಭವಿದೆಯೇ?
2 days 1 hour ago - Ashwin Rao K Pಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿಸಿ ನೀರಿಗೆ ಹಾಕಿದರಾಯಿತು. ನಿಮಿಷದಲ್ಲಿ ಕಾಫಿ ತಯಾರು. ಕಾಫಿ ಹುಡಿ, ಹಾಲು, ಸಕ್ಕರೆ ಎಲ್ಲವೂ ಆ ಪ್ಯಾಕೆಟ್ ನಲ್ಲೇ ಇದೆ. ಈಗೀಗ ಹಾಲು ಬೆರೆಸಿ ಕಾಫಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎನ್ನುವ ಮಾತುಗಳು ಕೇಳಿ ಬಂದಾಗ ಶುರು ಆದದ್ದೇ ‘ಬ್ಲ್ಯಾಕ್ ಕಾಫಿ'.
ಗ್ರಾಮೀಣ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಲು ಸಿಗದೇ ಹೋದಾಗ ಅವರು ಕಣ್ಣ (ಹಾಲು ಹಾಕದ) ಕಾಫಿ ಅಥವಾ ಚಹಾ ಕುಡಿಯುವುದು ಮಾಮೂಲು ಸಂಗತಿಯಾಗಿತ್ತು. ಈಗ ಅದು ದೊಡ್ದ ದೊಡ್ಡ ಕೆಫೆಗಳ ಮೆನು ಕಾರ್ಡ್ ಅಲಂಕರಿಸಬಲ್ಲ ಪೇಯವಾಗಿದೆ. ಭಾರತದಂತಹ ದೇಶದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವವರ ಸಂಖ್ಯೆ ಬಹಳಷ್ಟಿದೆ. ಹಲವು ಮಂದಿಗೆ ಬೆಳಿಗ್ಗಿನ ಕಾಫಿ (ಬೆಡ್ ಕಾಫಿ) ಬಹಳ ಉತ್ಸಾಹ, ಲವಲವಿಕೆಯನ್ನು ತಂದುಕೊಡುತ್ತದೆ. ತಲೆನೋವು, ಒತ್ತಡಗಳ ನಿವಾರಣೆಗೆ ಕಾಫಿ ಸಹಕಾರಿ ಎನ್ನುತ್ತಾರೆ. ಹಾಲು ಮತ್ತು ಸಕ್ಕರೆಯನ್ನು ಹಾಕದ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಬಹಳಷ್ಟು ಪ್ರಯೋಜನಗಳಿವೆಯಂತೆ.
ನಿಯಮಿತವಾಗಿ ಬ್ಲ್ಯಾಕ್ ಕಾಫಿ ಸೇವನೆಯು ಪರ್ಕಿನ್ಸನ್ ಕಾಯಿಲೆ, ಮರೆವಿನ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ತಗಲುವ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಬ್ಲ್ಯಾಕ್ ಕಾಫಿಯ ಉತ್ಕರ್ಷಣ ನಿರೋಧಕಗಳು ಈ ರೋಗ ತಡೆಗಟ್ತಲು ಉತ್ತಮ ಮೂಲವಾಗಿದೆ. ಈ ಕಾಫಿ ದೇಹದಲ್ಲಿನ ಹಾನಿಕಾರಕ ಅಂಶಗಳನ್ನು ನಿವಾರಿಸಲು ಬಹು ಉಪಯೋಗಿ.
ದೇಹದಲ್ಲಿರುವ ಅಧಿಕ… ಮುಂದೆ ಓದಿ...