ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
ತಿರುಗ ಹೋಗೋಣು ಬಾರೋ ಶ್ರೀಕಾ(೧) ಮರೀನು ಡ್ರೈವ(೨) ತೀರದಲ್ಲಿ||
ಓಸೀಪೀ(೩) ಯ ಮಾಡಿದ್ಯಂತೆ ಕಾಸು(೪) ನಿನಗೆ ಕೊಟ್ಟರಂತೆ , ಕೆ
-ಲಸ ಭಾಳ ಮಾಡಿದ್ಯಂತೆ ಕರೆದು ವಿಶ್ರಾಂತಿ ಕೊಡುವರಂತೆ ! ||
ಕಾರ್ಪೋರೇಟು ಸೆಂಟರಂತೆ (೫),ಅಲ್ಲಿ ನಿನ್ನ ಕರೆದರಂತೆ(೬)
ಹತ್ತೂವರೆಗೆ ಇರಬೇಕಂತೆ ಕೆಲಸ ಮಾತ್ರ ಇಲ್ಲವಂತೆ ! ||
ಹರಟೆ ಅಲ್ಲಿ ಹೊಡೆವರಂತೆ ಎರಡು ಗಳಿಕೆ ಮಾಡ್ವರಂತೆ
ಪ್ರೊಜೆಕ್ಟಿನೊಡೆಯ ರಂಗನಾಥಗೆ(೭) ಜನರು ಇನ್ನೂ ಬೇಕು ಅಂತೆ !! ||
ಅಡಿ ಟಿಪ್ಪಣಿಗಳು:-
೧. ನಾನೇ- ನನ್ನನ್ನು ಶ್ರೀಕಾ ಎಂದು ಮನೆಯಲ್ಲಿ ಸಂಕ್ಷಿಪ್ತದಲ್ಲಿ ಕರೆವರು.
೨. ನಾನೀಗ ಇರುವ ಮುಂಬೈಯಲ್ಲಿ ಆಫೀಸು ಪಕ್ಕ ಮರೀನ್ ಡ್ರೈವ್ ಸಮುದ್ರ ತೀರವಿದೆ.
೩. OCP- Oracle Certified Professional ಕೋರ್ಸು
೪. ನಾನು ಕೊಟ್ಟ ಫೀಯನ್ನು ನನಗೆ ಪಾವತಿ ಮಾದಿದರು
೫. ನಮ್ಮ ಕಛೇರಿ
೬. ಬೆಂಗಳೂರಿಂದ ವರ್ಗ ಮಾಡಿದರು.
೭. ನಮ್ಮ ಮೇಲಧಿಕಾರಿ ರಂಗನಾಥನ್ !

- Login or register to post comments
- 856 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ದಾಸ
ನೀವು ದಾಸರಾದರೆ ಒಳ್ಳೆಯದು.
"ದಾಸನ ಮಾಡಿಕ್ಕೋ ಎನ್ನಾ.." - ಇದು ನೀವು ಮು೦ದೆ ಬರೆಯಬೇಕಾದ ಹಾಡು.
ಮುರಳಿ,
ಉತ್ತಮವಾಗಿ
ಉತ್ತಮವಾಗಿ ಮೂಡಿ ಬಂದಿದೆ.
ಶ್ರೀ ಪುರಂದರ ದಾಸರ ಕ್ಷಮೆ ಕೇಳಿದ್ದೀರಿ, ಅವರಿಂದ ಉತ್ತರ ಬಂತೇ?
ವಂದನೆಗಳೊಂದಿಗೆ,
ವಿ.ವಿ.
ಸಂಪಾದಕ ಮಜಾವಾಣಿ
ದಾಸರಿಂದ ಉತ್ತರ ಬಂದಾಗ
ಪುರಂದರದಾಸರಿಂದ ಇ-ಮೈಲ್ ಉತ್ತರ ಬಂದಾಗ ನೀವು ಹೀಗೊಂದು ಹಾಡು ಬರೆಯಬಹುದು -
"ವಿದ್ಯುದೋಲೆ ಬಂದಿದೆ ನಮ್ಮ ಪುರಂದರದಾಸರದು"
(ಕಾಗದ ಬಂದಿದೆ ನಮ್ಮ ಪದುಮನಾಭನದು ಎಂಬ ಧಾಟಿಯಲ್ಲಿ)
ಸಿಗೋಣ,
ಪವನಜ
-----------
Vishva Kannada
Think globally, Act locally
ಉ: ದಾಸರಿಂದ ಉತ್ತರ ಬಂದಾಗ
’ಈ-ಮೇಲು ಬಂದಿದೆ ಇರಪಾಕ್ಸಿಯದು’
ಎಂಬ ಮೊದಲ ಸಾಲು ಯಾವಾಗಲೋ ಸಿದ್ಧ ಆಗಿದೆ .
ನೋಡೋಣ .. ಉಳಿದ ಸಾಲು ಎಂದು ಕೈಗೂಡುವವೋ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"