ಲೀನ್ ಮ್ಯಾನೇಜ್ ಮೆಂಟ್

ಲೀನ್ ಮ್ಯಾನೇಜ್ ಮೆಂಟ್

Comments

ಬರಹ

ಜಪಾನೀ ಪರಿಕಲ್ಪನೆಯ ’ಲೀನ್ ಮ್ಯಾನೇಜ್ ಮೆಂಟ್’ ಈಗೀಗ ಒಂದು ಜನಪ್ರಿಯವಾಗುತ್ತಿರುವ ಪ್ರಕ್ರಿಯೆ. ಕೆಲಸದ ಸ್ಥಳದ ಅಚ್ಚುಕಟ್ಟುತನ, ಸೂಕ್ತಜೋಡಣೆ, ಉತ್ತಮ ಕಾರ್ಯವಿಧಾನ ಹಾಗೂ ಇವೆಲ್ಲವುಗಳ ಮೂಲಕ ಸಮಯ ಉಳಿತಾಯದೊಂದಿಗೆ ಒಳ್ಳೆಯ ಉತ್ಪನ್ನವನ್ನು ನೀಡುವುದಕ್ಕೆ ಜಪಾನ್ ಜನ ಅನುಸರಿಸುವ ರೀತಿಯನ್ನು ಈ ಲೀನ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಲೀನ್ ತಂತ್ರವನ್ನು ಜಾರಿಗೊಳಿಸುವ ಮುನ್ನವೇ ಅದನ್ನು ಹಿಂದೀಕರಣಗೊಳಿಸುವ ಕುರಿತು ತೀವ್ರ ಮುತುವರ್ಜಿ ವಹಿಸಲಾಗುತ್ತಿದೆ. ಅದನ್ನು ’ಸಂಪೂರ್ಣ ಪರಿವರ್ತನ್’ ಎಂದು ಕರೆಯಬೇಕೆಂಬ ಕೂಗು ಎದ್ದಿದೆ. ಏಕೆಂದರೆ ಈ ಸಂಪೂರ್ಣ ಪರಿವರ್ತನ್ ಎಂಬುದು ಎಲ್ಲ ಭಾರತೀಯ ಭಾಷೆಗಳಿಗೂ ಅಳವಡುತ್ತದೆ ಎಂದು ಅವರ ವಾದ.

ಆದರೆ ಈ ಲೀನ್ ಎಂಬುದು ಘೋಷವಾಕ್ಯವಾಗದೇ ಒಂದು ಮಂತ್ರವಾಗಿರುವುದೇ ಚೆನ್ನ. ಅಂಥಾ ಒಂದು ಮಂತ್ರವನ್ನು ಕನ್ನಡಿಗರಿಗಾಗಿ ಕನ್ನಡದಲ್ಲೇ ಟಂಕಿಸಬೇಕಾಗಿದೆ. ಸಂಪೂರ್ಣ ಪರಿವರ್ತನೆ = Total Change ಎಂಬುದನ್ನೇ ಕನ್ನಡದಲ್ಲಿ ಹೊಸರೂಪ, ಮರುರೂಪ, ಮರುಹುಟ್ಟು ಮುಂತಾದ ರೂಪಗಳಲ್ಲಿ ಕರೆಯಬಹುದಾಗಿದೆ. ಅದು ಸಾಧ್ಯವಾದಷ್ಟೂ ಎರಡು ಅಥವಾ ಮೂರು ಅಕ್ಷರಗಳಲ್ಲಿದ್ದರೆ ಒಳ್ಳೆಯದೆಂದು ತೋರುತ್ತದೆ.

ಸತ್ತವರು ಜೀವತಳೆಯುವುದನ್ನು ’ಪುನರ್ಜೀವ’ ಎನ್ನುತ್ತೇವೆ. ಮುರಿದುಹೋದುದನ್ನು ಸಡಿಲವಾದುದನ್ನು ಅಥವಾ ಸವೆದಿದ್ದನ್ನು ಮತ್ತೆ ಸರಿಪಡಿಸಿದಾಗ ’ಜೀರ್ಣೋದ್ಧಾರ’ ಎನ್ನುತ್ತೇವೆ. ಯಾವುದೋ ಸಿನಿಮಾದಲ್ಲಿ ಪ್ರಾಣಿಯೊಂದರ ಮೇಲೆ ಮಂತ್ರದ ನೀರನ್ನು ಚಿಮುಕಿಸಿದಾಗ ಅದು ಮನುಷ್ಯರೂಪ ತಳೆಯುವುದನ್ನು ನೋಡಿದ್ದೇವಲ್ಲಾ ಹಾಗೆ ಹೊಸರೂಪ ಮಾತ್ರವಲ್ಲ ಹೊಸಸ್ವಭಾವ ಲಕ್ಷಣಗಳ ಸಂಪೂರ್ಣ ಹೊಸಧಾರಣೆಯನ್ನು ಸ್ಫುರಿಸುವ ಪದ ಬೇಕಾಗಿದೆ. ಯಾರಾದರೂ ದಯವಿಟ್ಟು ಈ ನಿಟ್ಟಿನಲ್ಲಿ ಸಹಾಯ ಮಾಡುವಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet