ಜನ್ಮ ದಾತರಿಗೆ ಭಾವ ನಮನ !!
ಕವನ
ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ?
ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !!
ನೀಡಿಹನು ಈ ಧರೆಗೆ ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ................
ತಾಯಿ ತಂದೆಗಳೆಂಬ ಈರ್ವರಾ ಛಾಯೆಯಲಿ ದೇದೇವನಾಕಾಣುವಾಸಂಭ್ರಮ !!!
ಎಲ್ಲರಾತ್ಮದಿ ನಿಂತು ಈ ಭಾವ ನರ್ತಿಸಲಿ .... ಎಲ್ಲ ವ್ರತಗಳ ಫಲಕೆ ಈ ಸಾಧನ.....
ಜನ್ಮ ದಾತರಿಗಿದುವೆ ಭಾವ ನಮನ.....