ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

|| ದಾರಿ ದೀಪವಾಗು ಬದುಕಿಗೆ ||

ನಿನ್ನ ನೋಡದ ಕಣ್ಣು ಏಕೆ ಕೃಷ್ಣಾ
ಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\

ನನ್ನ ಕಣ್ಣಿನ ಬೆಳಕು ನೀನು;
ನನ್ನ ಜೀವನದ ಗುರಿಯು ನೀನು;
ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿ
ಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\

ನಿದ್ದೆ ಬಾರದು,ಅನ್ನ ಸೇರದು;
ಮನ ಬಯಸಿದೆ ಕೃಷ್ಣ...ಕೃಷ್ಣಾ ಎಂದು;
ಯಾರಿಲ್ಲ ಇಲ್ಲಿ ನನ್ನ ಸಂತೈಸುವವರು
ಒರೆಸುವವರೂ ಇಲ್ಲ ಇಲ್ಲಿ ನನ್ನ ಬೆವರು\\

ಒಳಗಿರುವ ಆತ್ಮಶಕ್ತಿಯೇ ನೀನು;
ಹೊರಬಂದು ನನ್ನ ಸಂತೈಸು ನೀನು;
ದಾರಿ ತೋರು ಈ ಬದುಕಿಗೆ
ದಾರಿ ದೀಪವಾಗು ಬಾ ನನ್ನ ಬದುಕ ಹಾದಿಗೆ\\

|| ರಾಧೆಯ ವಿರಹ ||

ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?
ನಿನ್ನೆಯಿಂದ ಕಾಣುತ್ತಿಲ್ಲ;
ನನ್ನ ನೋಡಲು ಬಂದಿಲ್ಲ;
ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\

ಯಮುನೆಯ ದಡದಲ್ಲಿ ಕುಳಿತಿದ್ದೆ
ಅವನು ಬರುವನೆಂದು;
ಬಂದು ಕೆಣಕುವನೆಂದು;
ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು ಸಖಿ\\

ಅವನಿಗಾಗಿ ಬೆಣ್ಣೆ ತೆಗೆದಿರಿಸಿದ್ದೆ
ಬಂದು ಕಾಡಿಸುವನೆಂದು;
ಬೆಣ್ಣೆ ಕದ್ದು ಹೋಗುವನೆಂದು;
ಬೆಣ್ಣೆ ಕರಗಿ ಕರಗಿ ಹೋಯಿತು;ನನ್ನ ಭಾವ ಕರಗಿ ಹೋಗುತಿದೆ ಸಖಿ\\

ಅವನಿಗಾಗಿ ಕಾಯುತ್ತಿರುವೆ ಗೆಳತಿ
ಎಲ್ಲಿ ಹೋದನೋ ತಿಳಿಯದಾಗಿದೆ;
ತಿಳಿಯುವ ಕುತೂಹಲ ದೊಡ್ಡದಾಗಿದೆ;
ಬಾ ಗೆಳತಿ ಶ್ಯಾಮನ ತೋರು;ಈ ವಿರಹವ ಪರಿಹರಿಸು ಸಖಿ\\

ಲೈಫು ಇಷ್ಟೇ ಅಲ್ಲ!

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ ಅಮ್ಮನ ಉಪದೇಶಗಳು ಹೀಗೆ 'ಗಳು' ಜತೆ ಬೆಂಗಳೂರಿನಲ್ಲಿ ಲೈಫು ಇಷ್ಟೇನೆ ಅಂತಾ ಸಾಗುತ್ತಿತ್ತು ದಿನಗಳು. ಅಬ್ಬಾ ...ಊರು ಬಿಟ್ಟು ಈ ಮಾಯಾನಗರಿಗೆ ಬಂದು 2 ವರ್ಷಗಳು ಕಳೆಯಿತಲ್ವಾ ಎಂದು ಅಚ್ಚರಿಯಾಗುತ್ತಿದೆ. ಮೊದಲು ಇಲ್ಲಿಗೆ ಬಂದಾಗ ಆಫೀಸಿನಿಂದ ಪಿಜಿಗೆ ಹೋಗಬೇಕಾದರೆ ಅದೆಷ್ಟು ಕನ್್ಫ್ಯೂಸ್ ಮಾಡಿಕೊಳ್ಳುತ್ತಿದ್ದೆ ಗೊತ್ತಾ. ಅದಿರಲಿ, ಬೇರೆ ಯಾವುದಾದರೂ ಜಾಗಕ್ಕೆ ಹೋಗಿ ಅಡ್ರೆಸ್ ಕೇಳಿದ್ರೆ ಸಿಗುತ್ತಿದ್ದ ಉತ್ತರ 'ಡೋಂಟ್ ನೋ'. ಏನಪ್ಪಾ ಈ ಬೆಂಗಳೂರಿನವರು ಎಲ್ಲದಕ್ಕೂ 'ಡೋಂಟ್ ನೋ' ಅಂತಾ ಹೇಳ್ತಾರಲ್ವ ಅಂತಾ ಸಿಟ್ಟು ಬರುತ್ತಿತ್ತು. ಚೆನ್ನೈಯಲ್ಲಿ ನನಗೆ ಭಾಷೆ ತಿಳಿಯದಿದ್ದರೂ ಆರಾಮವಾಗಿ ಅಲ್ಲಿ ಇಲ್ಲಿ ಅಡ್ಡಾಡಿದ್ದೆ. ಆದರೆ ಇಲ್ಲಿ ಭಾಷೆ ಗೊತ್ತಿದ್ದರೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಕಷ್ಟ ಕಷ್ಟ!

ಕ್ರಿಸಮಸ್..

 

ನಮ್ಮ ಹೆಮ್ಮೆಯ ಭೂಮಿಯಲಿ

 ಜಾತಿಯ ಭೇದವೇಕೆ?

 ಹಿಂದೂ ಬೌಧ್ಧ ಮುಸಲ್ಮಾನ

 ಕ್ರೈಸ್ತ ಜೈನ ಧರ್ಮಗಳು ಒಂದೇ

 ಸ್ನೇಹ ಪ್ರೀತಿ ಸಹನೆಯ

 ದೇಶ ಭಾರತವೊಂದೇ

 ಎಲ್ಲರೂ ಬನ್ನಿ ಆಚರಿಸುವ 

 ಕ್ರಿಸಮಸ್ ಹಬ್ಬದ ದಿನವಿಂದೇ..

 

    Merry christmas.. 

ಯೋಚಿಸಲೊ೦ದಿಷ್ಟು...೨೨

ಯೋಚಿಸಲೊ೦ದಿಷ್ಟು...೨೨
೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ  ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!
೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!
೩. ಜೀವನವೊ೦ದು ಪುಸ್ತಕವಿದ್ದ ಹಾಗೆ. ಪುಟಗಳನ್ನು ತೆರೆದಷ್ಟು ಪುಸ್ತಕದ  ಆ೦ತರ್ಯದ ಅರಿವಾಗುವ ಹಾಗೆ, ಪ್ರತಿ ದಿನವೂ ಜೀವನದ ಒಳಗುಟ್ಟು ನಮ್ಮ ಮು೦ದೆ ತೆರೆಯಲ್ಪಡುತ್ತಲೇ ಹೋಗುತ್ತದೆ!!
೪. ಕನಸುಗಳು ಆಸೆಯನ್ನು ಹುಟ್ಟಿಸಿದರೆ, ಆಸೆಯೆ೦ಬುದು ಪ್ರಯತ್ನಕ್ಕೆ ದಾರಿ... ಆ ಪ್ರಯತ್ನವು ಸಾಧನೆಯ ಯಶಸ್ಸಿಗೆ ಹಾದಿ ಮಾಡಿಕೊಡುತ್ತದೆ.

ನಾನು ನನ್ನ ಬಾಲ್ಯ

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.

 

ಅವಳ ಸ್ವಗತ

ಮುಂಜಾನೆಯ ಚಳಿಯಲ್ಲಿ

ಮೈ ಬಿಸಿಯೇರುತ್ತಿದ್ದರೂ

ತಣ್ಣಗಿನ ನೀರಲ್ಲಿ ಜಳಕವ ಮಾಡಿ

ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ

 

****

ಕನ್ನಡಿ ನೋಡಿ ಕೆಂಪಾಗುತ್ತಿದ್ದೆ

ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು

ಎಲ್ಲಿದ್ದೆ ನೀನು..? ಜೊತೆಗೆ ನಾನು,

ನಗುವ ತೊಟ್ಟಿಲಲ್ಲಿ ನೂರು ಕನಸು..

 

****

ಶಬರಿಯಾಗಿ ನಾ ಕಾದೆ,ಶಕುಂತಲೆ ನಾನಾದೆ

ಕೊಳಲನೂದುವ ಕೃಷ್ಣನ ಕಾಯೋ ರಾಧೆಯಾದೆ

ಬಿಂದಿಯಾಗಿ ಬಂದ, ಬಂಧಿಯಾಗಿ ಹೋದೆ

ಅಹಲ್ಯೆಯಾಗಿ ನಾನು ಸ್ವತಃ ಕಲ್ಲಾದೆ!

 

****

ಮಳೆಬಿಲ್ಲ ಪಡೆಯೋ ಬಯಕೆಯಿಂದ

ಗಾಳಿಪಟ ನಾನಾದೆ, ಅವನು ದಾರವಾದ

ಪಂಜರದ ಬಾಗಿಲು ತೆರೆದಿಟ್ಟರೂ,

ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವದಿಲ್ಲ?

“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು.

Lebanon ನ ರಾಜಧಾನಿ

ಒಂದು ದಿನ ಎಂದಿನಂತೆ ಕಛೇರಿಯಲ್ಲಿ ಮಧ್ಹ್ಯಾನ ೪ ಘಂಟೆ ವೇಳೆಗೆ ಚಹಾ ಕುಡಿಯುತ್ತ ಕುಳಿತಿದ್ದೆವು.

 

ಚಹಾ ಸವಿಯುತ್ತ ಒಬ್ಬ ಸಹೋದ್ಯೋಗಿ ಆಂಗ್ಲ ದಿನಪತ್ರಿಕೆಯ ತಲೆಬರಹಗಳ ಮೇಲೆ ಕಣ್ಣು ಹಾಯಿಸುತ್ತ ಒಂದು ತಲೆಬರಹವನ್ನು ನೋಡಿ "Which is the capital of Lebanon?", ಎಂದು ಪ್ರಶ್ನಿಸಿದ. ಆಗ ಇನ್ನೊಬ್ಬ ಸಹೋದ್ಯೋಗಿ "L" ಎಂದು ಉತ್ತರಿಸಿಬಿಡೋದೇ. ಆ ಉತ್ತರ ಕೇಳಿ ಎಲ್ಲರೂ ನಕ್ಕಿದ್ದೆ ನಕ್ಕಿದ್ದು.