ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸ ಹುಡುಗಿಯ ಹುಡುಕಾಟದಲ್ಲಿ …. !


ಹಾಯ್ ಸ್ನೇಹಿತರೆ.

Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ ಗರ್ಲ್ ಫ್ರೆಂಡ್ ನ ಬಿಟ್ಟಿದ್ದೇನೆ. (ಅವಳು ಸ್ವಲ್ಪ costly ಎಂಬ ಕಾರಣಕ್ಕೆ.) ಹಾಗಾಗಿ ನಾನೀಗ ಹೊಸ ಹುಡುಗಿಯನ್ನ ನನ್ನ ಗರ್ಲ್ ಫ್ರೆಂಡ್ ಆಗಿ appoint ಮಾಡಿಕೊಳ್ತಾ ಇದ್ದೇನೆ. ನಿಮಗೆ ಯಾರಾದ್ರು ಗೆಳತಿಯರಿದ್ರೆ ಈ ಆಫರ್ ನ ಅವರಿಗೆ ಕಳುಹಿಸಿ.

 ಉದ್ಯೋಗ ಅವಕಾಶ ಇರೋದು ಈ ಕೆಳಗಿನ ಪೋಸ್ಟ್ ಗೆ. ಸಂಬಳ ಮತ್ತು ಭತ್ಯೆ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

 ಹುದ್ದೆ: Junior girl friend (ತರಭೇತಿ)

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೬೦

( ೩೦೬) 'ದೇವರು ಕೆಲಸದ ವಿವರದಲ್ಲಿದ್ದಾನೆ' ಎಂದು  ವಾಸ್ತುಶಿಲ್ಪಿಯೊಬ್ಬ ಹೇಳಿದ್ದಾನೆ. ಆದರೆ ದೇವರ ವಿವರ ಮಾತ್ರ ಎಲ್ಲೆಡೆಯೂ ಇರುತ್ತದೆ, ಅದು ವಾಸ್ತುಶಿಲ್ಪಿವಾಗಿರಬಹುದು, ಅಲ್ಲದೆಯೂ ಇರಬಹುದು.
(೩೦೭) ಫಲಿತಾಂಶವು ಏನೇ ಆಗಿರಲಿ, ಔಷದೋಪಚಾರವೆಂಬುದು ಸಾವಿನ 'ಭಯವನ್ನೇ' ಮೀರಿನಿಲ್ಲುವ ಪರಿಣಾಮಕಾರಿ ಔಷದವಾಗಿದೆ.
(೩೦೮) ಮಾದಕ ವಸ್ತುವು ತನ್ನ ಅನುಪಸ್ಥಿತಿಯಲ್ಲಿ ಉಂಟುಮಾಡುವ ನಿರಂತರ ಸುಖದ ಭ್ರಮೆಯನ್ನೇ ಮೋಕ್ಷವೆನ್ನುತ್ತೇವೆ!
(೩೦೯) ದೀರ್ಘಾಯುಷಿಯಾಗಿರುವುದು ಎಂದರೆ ನಿಮ್ಮ ಸ್ನೇಹಿತರೆಲ್ಲ ನಿಮ್ಮ ಕಣ್ಣ ಮುಂದೆಯೇ ಸಾಯುತ್ತಾರೆ ಎಂದರ್ಥ. ಅಕಾಲಿಕ ಮೃತ್ಯುವನ್ನಪ್ಪುವುದು ಎಂದರೆ ನಿಮ್ಮ ಶತೃಗಳೆಲ್ಲರಿಂದಲೂ ಬಚಾವಾಗುವುದು ಎಂದರ್ಥ.

ಹೊಸ ವರ್ಷಾಚರಣೆ ಬೇಕೇ?

ಇದೇನಪ್ಪ ಇವನೇನು ಐಲಾ, ಹೀಗೆ ಕೇಳುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..ಪ್ರತೀ ಸಲ ಡಿಸೆಂಬರ್ ಬಂತೆಂದರೆ ಎಲ್ಲರಿಗೂ ಏನೋ ಒಂದು ರೀತಿ ಆನಂದ. ಡಿಸೆಂಬರ್ ಎರಡನೇ ವಾರದಿಂದಲೇ ಹೊಸ ವರ್ಷದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸಿರುತ್ತಾರೆ.  ಯಾವ ಹೋಟೆಲ್ ಗೆ ಹೋಗೋದು, ಯಾವ ರೆಸಾರ್ಟ್ ಗೆ ಹೋಗೋದು, ಯಾವ ಊರಿಗೆ ಹೋಗೋದು ಹೀಗೆ ಹಲವಾರು ಸಿದ್ಧತೆಗಳು. ಆದರೆ ನನಗೆ ಅರ್ಥವಾಗದ ಒಂದು ವಿಷಯವೆಂದರೆ ನಮಗೆ ಹೊಸ ವರ್ಷ ಬರುವುದು ಉಗಾದಿಯಂದು ಅಲ್ಲವೇ, ಹಾಗಿದ್ದಲ್ಲಿ ಈ ಪಾಶ್ಚಾತ್ಯ ಸಂಸ್ಕ್ರುತಿಯನ್ನೇಕೆ ಅನುಕರಿಸುತ್ತಿದ್ದೇವೆ. ಡಿಸೆಂಬರ್ ೩೧ ಬಂತೆಂದರೆ ಅದೆಷ್ಟು ಹಣ ಖರ್ಚು, ಅದೆಷ್ಟು ಹೆಂಡದ ಹೊಳೆ ಹರೆಯುತ್ತದೋ.. ನಮ್ಮ ಹೊಸ ವರ್ಷಾಚರಣೆಗೂ (ಉಗಾದಿ) ಪಾಶ್ಚಾತ್ಯರ ಹೊಸ ವರ್ಷಾಚರಣೆಗೂ (ಜನವರಿ ೧) ಇರುವ ಕೆಲವರು ವ್ಯತ್ಯಾಸಗಳೆಂದರೆ..

ಹೊಸ ವರ್ಷಕ್ಕೆ ನಲ್ಬಯಕೆಗಳು

ಸಂಪದದ ಎಲ್ಲಾ ಮಿತ್ರರಿಗೆ ಹೊಸ ವರ್ಷಕ್ಕೆ ಹಾರ್ದಿಕ ನಲ್ಬಯಕೆಗಳು. ೨೦೧೧ ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಇತ್ಯಾದಿಗಳನ್ನಿತ್ತು, ಸೌಹಾರ್ದತೆ ತುಂಬಿದ ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ.

ಸೂರ್ಯೋದಯದ ಸೊಬಗು

ಸುತ್ತ ಮುತ್ತಿಹ ಅ೦ಧ ತಮವನು
ನೆತ್ತರಿನ ವರ್ಣವದೊ ಮುಸುಕಿತು
ಕತ್ತರಿಸಿ ಕತ್ತಲೆಯ ಪರದೆಯ ಸರಿಸಿ ಪೂರ್ವದಲಿ
ಎತ್ತರದ ಅ೦ಗಳದ ಬಾನಲಿ
ಚಿತ್ತವಿಸುತಿರುತಿರ್ಪ ದಿನಮಣಿ
ಬತ್ತಳಿಕೆಯಿ೦ದ೦ಬ ಬಿಲ್ಲಿಗೆ ಹೂಡಿದ೦ದದಲಿ 


ಓಕುಳಿಯು ಚೆಲ್ಲಾಡೆ ವರ್ಣದ
ಆಕರವೊ ಅಂಬರವು ಎನಿಸಲ
ನೇಕ ಕಂಠದೊಳುಲಿಯಿತಾ ಖಗ ಪಕ್ಷಿ ಸಂಕುಲವು
ಸೋಕುತಿರೆ ಹಿತಚಳಿಯ ಮಾರುತ
ಆಕಳುಗಳೆದ್ದೆದ್ದು ನಿಲ್ಲಲು
ಸೂಕಲವು ಕೆನೆಯುತಲಿ ಖುರಪುಟ ದನಿಯ ಮಾಡುತಿರೆ


ಕುಕ್ಕುಟವು ಸೊಬಗಿ೦ದ ಕೂಗಲು
ಕುಕ್ಕರವು ವೀಕ್ಷಿಸುತ ಕುಳಿತಿರೆ
ಕುಕ್ಕಲನುವಾಗಿಹನು ನೇಸರ ಕಿರಣದ೦ಬುಗಳ
ಪಕ್ಕವಾದ್ಯದ ರವದ ನಾದಕೆ
ಹೊಕ್ಕು ಬೆಳಕಿನ ಪ್ರಭೆಯು ನಾಲ್ದೆಸೆ
ಉಕ್ಕುತಿದೆ ಚಟುವಟಿಕೆ ಎಸೆಯುವ ಅ೦ಬುಧಿಯ ತೆರದಿ 


ನಸುಕಿನೆಸುಗೆಯ ದಿವ್ಯಸಮಯದಿ
ಮುಸುಕ ಹೊದ್ದಿಹ ಕ೦ದ ಮಲಗಿರೆ
ಎಸಳು ಹೂವಿನ ಅರಳಿ ರವಿಯನು ಎದುರುಗೊಳುತಿರಲು
ಹಸುರಿಗುಸಿರನು ಹೆಣೆಯುತಿರುತಲಿ
ಎಸೆಯುತಿಹ ದಿನಪನನು ಕಾಣುತ
ಒಸೆಯುತಿಹ ತನುಮನದಿ ನವ ಉಲ್ಲಾಸ ಮೂಡಿಹುದು 

ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ

ಹಳೆಯ ಘಟನೆಯೊಂದಕ್ಕೆ "ಗೀತಾ" ಚಿತ್ರದ "ಕೇಳದೇ ನಿಮಗೀಗ" ಹಾಡಿನ ಸಾಹಿತ್ಯವನ್ನು ಬದಲಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.

 

ದಯವಿಟ್ಟು ಕ್ಷಮೆ ಇರಲಿ.

ನಾನು ಈ ಹಿಂದಿನ ಬರಹದಲ್ಲಿ "ಸುವರ್ಣ ವಾಹಿನಿಯ ಕರ್ಮಕಾಂಡ" ಎಂಬ ತಲೆಬರಹದಡಿಯಲ್ಲಿ ಒಂದು ಚರ್ಚೆಯ ವಿಷಯ ಪ್ರಕಟಿಸಿದ್ದೆ. ಆದರೆ ಅದು ಬಿತ್ತರಗೊಳ್ಳುತ್ತಿರುವುದು ಕಸ್ತೂರಿ ವಾಹಿನಿಯಲ್ಲಿ ಎಂದು ನಮ್ಮ ಸಂಪದಿಗರೇ ಆದ ಕುಂಬ್ಳೆ ಅವರು ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ತಿಳಿಯದೇ ಆದ ಅಚಾತುರ್ಯಕ್ಕೆ ಕ್ಷಮೆ ಇರಲಿ.

ಗಂಡೆದೆಯ ತಟ್ಟಿ ತಟ್ಟಿ ಏಳಿ...

ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....


 ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ Career Oriented ಆಗಿರೋದೆ ಆಕೆಯ ಬೇಸರಕ್ಕೆ ಕಾರಣ....


 ಒಂದು ದೈಹಿಕವಾಗಿ ಹಾಗು ಮಾನಸಿಕವಾಗಿ ಸದೃಢ ಸಮಾಜವನ್ನು ಕಟ್ಟಲು ಕೊಡುವ ಕರೆ ಇದು.....


 ಹಾಳು ಬಿದ್ದಿರುವ ನಮ್ಮ ಮನಸನ್ನು ಹೂತು ಹದ ಮಾಡುವುದಕ್ಕೆ ಇಟ್ಟ ಮೊರೆ ಇದು.....


 


ನಾ ಹಡೆದ ಮಕ್ಕಳು ನೀವು ನೂರು ಕೋಟಿ


 ನನ್ನನೇ ಮುಗಿಸಲೆಂದು ನಿಮ್ಮ ಪೋಟಿ


 ನನ್ನ ಪಣಕಿಟ್ಟಿಹಿರಿ ಇಂದು ಏಕೆ


 ಪಾಂಡವರಿಗಿಂತ ನೀಚರಾದಿರೇಕೆ......


 ಏಳಿ ಏಳಿ ಇನ್ನು ನೀವೆಲ್ಲ ಏಳಿ


 ಮಲಗುವ ಸಮಯವಿದಲ್ಲ ಕೇಳಿ......


  


ಗಲ್ಲಿ ಗಲ್ಲಿಗಳಲ್ಲಿ


 ಸಂದಿ ಗೊಂದಿಗಳಲ್ಲಿ